ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

55 ದಿನಗಳಲ್ಲಿ ʻಧುರಂಧರ್‌ʼ ಸಿನಿಮಾ ಗಳಿಸಿದ್ದೆಷ್ಟು? ಕರ್ನಾಟಕದಿಂದ ಈ ಚಿತ್ರಕ್ಕೆ ಸಿಕ್ಕ ಹಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

Dhurandhar Movie Collection: ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ಭಾರತದಲ್ಲಿ 1000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕವೊಂದರಲ್ಲೇ 52 ಕೋಟಿ ರೂ. ಬಾಚಿಕೊಂಡಿರುವ ಈ ಸಿನಿಮಾ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕರ್ನಾಟಕದಲ್ಲಿ ʻಧುರಂಧರ್ʼ ಹವಾ; ಈವರೆಗೂ ಆದ ಕಲೆಕ್ಷನ್ ಎಷ್ಟು?

-

Avinash GR
Avinash GR Jan 29, 2026 1:24 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್ʼ‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಸದ್ಯ ಈ ಸಿನಿಮಾವು ತೆರೆಕಂಡು ಈಗಾಗಲೇ 55 ದಿನಗಳು ಕಳೆದಿವೆ. ಈಗಲೂ ಚಿತ್ರಮಂದಿರಗಳಲ್ಲಿ ಧುರಂಧರ್‌ ಸಿನಿಮಾ ಪ್ರದರ್ಶನ ಕಾಣುತ್ತಲೇ ಇದೆ. ಈಗಲೂ ಬೆಂಗಳೂರಿನಲ್ಲಿ ಈ ಚಿತ್ರಕ್ಕೆ 60+ ಶೋಗಳನ್ನು ನೀಡಲಾಗಿದೆ. ಈ ಮಧ್ಯೆ ಈವರೆಗೂ ಧುರಂಧರ್‌ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

1000 ಕೋಟಿ ಕ್ಲಬ್ ಸೇರಿದ 'ಧುರಂಧರ್'‌

'ಧುರಂಧರ್ 2' ಬಿಡುಗಡೆಗೆ ಇನ್ನು ಕೇವಲ ಒಂದೂವರೆ ತಿಂಗಳು ಬಾಕಿ ಇದೆ. ಆದರೂ ಪಾರ್ಟ್‌ 1ರ ಆರ್ಭಟ ಕಮ್ಮಿ ಆಗಿಲ್ಲ. ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಈಗ ಭಾರತದಲ್ಲೇ 1000 ಕೋಟಿ ರೂ. ಬಾಕ್ಸ್ ಆಫೀಸ್ ಕ್ಲಬ್‌ಗೆ ಪ್ರವೇಶಿಸಿದೆ. ಈ ಸಾಧನೆ ಮಾಡಿದ ಮೊದಲ ಹಿಂದಿ ಚಿತ್ರ ಇದಾಗಿದೆ. ಅಲ್ಲದೇ ಇದು ಹಿಂದಿ ಭಾಷೆಯೊಂದರಲ್ಲೇ ತೆರೆಕಂಡ ಸಿನಿಮಾ ಎಂಬುದನ್ನು ಗಮನಿಸಬೇಕು. ಈ ಚಿತ್ರವು ಎಂಟನೇ ವೀಕೆಂಡ್‌ನಲ್ಲೂ ಭಾರತದಲ್ಲಿ 2.90 ಕೋಟಿ ರೂ. ಗಳಿಕೆ ಮಾಡಿದ್ದು, ಗಣರಾಜ್ಯೋತ್ಸವದಂದು ಹೆಚ್ಚುವರಿ 1.25 ಕೋಟಿ ರೂ. ಗಳಿಸಿದೆ. ಜನವರಿ 26 ರಂದು ಬಂದ ಕಲೆಕ್ಷನ್‌ನಿಂದಾಗಿ ಈ ಸಿನಿಮಾದ ದೇಶೀಯ ಗಳಿಕೆ 1000 ಕೋಟಿಯ ಗಡಿ ದಾಟಿದೆ.

Dhurandhar OTT: ಒಟಿಟಿಗೆ ಬರಲಿದೆ ಬಹು ನಿರೀಕ್ಷಿತ ಧುರಂಧರ್, ಯಾವಾಗ?

ಕರ್ನಾಟಕದಲ್ಲಿ ಆದ ಗಳಿಕೆ ಎಷ್ಟು?

ಇನ್ನು, ವಿಶ್ವಾದ್ಯಂತ ಈ ಚಿತ್ರದ ಒಟ್ಟಾರೆ ಗಳಿಕೆಯು 1350 ಕೋಟಿ ರೂ. ಗಡಿ ಸಮೀಪದಲ್ಲಿದೆ. ಇನ್ನು, ಕರ್ನಾಟಕದಲ್ಲಿ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಈವರೆಗೂ ಸುಮಾರು 52 ಕೋಟಿ ರೂ.ಗಳಷ್ಟು ಹಣವನ್ನು ಈ ಚಿತ್ರವು ಕರ್ನಾಟಕ ಒಂದರಿಂದಲೇ ಪಡೆದುಕೊಂಡಿದೆ. ಹಾಗ್ನೋಡಿದ್ರೆ, ತಮಿಳುನಾಡು ಮತ್ತು ಕೇರಳ ಎರಡೂ ರಾಜ್ಯಗಳಲ್ಲಿನ ಧುರಂಧರ್‌ ಗಳಿಕೆ ಕರ್ನಾಟಕದ ಕಲೆಕ್ಷನ್‌ನ ಅರ್ಧದಷ್ಟು ಆಗಿಲ್ಲ!

'ಟಾಕ್ಸಿಕ್‌ʼ ಜತೆಗಿನ ಬಾಕ್ಸ್‌ ಆಫೀಸ್‌ ವಾರ್‌ ತಪ್ಪಿಸಲು 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ? ವೈರಲ್ ಪೋಸ್ಟ್‌ನ‌ ಅಸಲಿಯತ್ತೇನು?

ಈ ಚಿತ್ರವು ನಿರ್ಮಾಪಕರಿಗೆ ಮತ್ತು ವಿತರಕರಿಗೆ ಭರ್ಜರಿ ಲಾಭವನ್ನು ತಂದುಕೊಡಲಿದೆ. ಜಿಯೋ ಸ್ಟುಡಿಯೋಸ್ ಚಿತ್ರದ ಮೇಲೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ದರೆ, ನಿರ್ದೇಶಕ ಆದಿತ್ಯ ಧರ್ ಅವರು ತಮ್ಮ ಕೆಲಸಕ್ಕೆ ಸಂಭಾವನೆಯ ಬದಲು ಲಾಭದಲ್ಲಿ ಪಾಲು ಪಡೆಯುತ್ತಿದ್ದಾರೆ. ಎಲ್ಲಾ ಕಲಾವಿದರಿಗೂ ಉತ್ತಮ ಸಂಭಾವನೆ ನೀಡಲಾಗಿದೆ. ಸಂತೋಷದ ವಿಷಯವೇನೆಂದರೆ, 'ಧುರಂಧರ್' ಭಾಗ-2ರ ಚಿತ್ರೀಕರಣ ಕಳೆದ ವರ್ಷವೇ ಪೂರ್ಣಗೊಂಡಿದೆ. ಸದ್ಯ ಕೆಲವು ಪ್ಯಾಚ್‌ವರ್ಕ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಮಾರ್ಚ್‌ 19ರಂದು ಬಹುಭಾಷೆಗಳಲ್ಲಿ ಧುರಂಧರ್‌ 2 ರಿಲೀಸ್‌ ಆಗಲಿದೆ.

ಒಟಿಟಿಯಲ್ಲಿ ಯಾವಾಗ ರಿಲೀಸ್‌?

ಧುರಂಧರ್‌ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 30 ರಂದು ಸ್ಟ್ರೀಮಿಂಗ್‌ ಆಗಲಿದೆ ಎಂಬ ಟಾಕ್‌ ಸಿಕ್ಕಿದೆ. ಮೂಲಗಳ ಪ್ರಕಾರ, 'ಧುರಂಧರ್' ಮತ್ತು 'ಧುರಂಧರ್ 2' ಎರಡೂ ಸಿನಿಮಾಗಳ ಒಟಿಟಿ ಡೀಲ್ ಬರೋಬ್ಬರಿ 130 ಕೋಟಿ ರೂ.ಗಳಿಗೆ ಮುಗಿದಿದೆ ಎಂಬ ಮಾಹಿತಿ ಇದೆ. ಅಂದಹಾಗೆ, ಧುರಂಧರ್ ಚಿತ್ರ ತೆರೆಕಂಡು 55+‌ ದಿನಗಳಾದರೂ, ಇನ್ನೂ ಕೂಡ ಒಟಿಟಿ ರಿಲೀಸ್‌ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.