ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ಬಗ್ಗೆ ಮಾಜಿ ಸಚಿವ ಏನಂದ್ರು ನೋಡಿ
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅವರನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿಯಾಗಿ, ಶುಭ ಹಾರೈಸಿದ್ದಾರೆ. ಇದೀಗ ಮಾಜಿ ಸಚಿವ ಜನರ್ದಾನ ರೆಡ್ಡಿ ಅವರು ಗಿಲ್ಲಿಯನ್ನು ಮನೆಗೆ ಕರೆಸಿಕೊಂಡು, ಸನ್ಮಾನಿಸಿದ್ದಾರೆ. "ಗಿಲ್ಲಿ ನಟ ಅವರ ಮುಂದಿನ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ "ಎಂದು ಶುಭ ಹಾರೈಸಿದ್ದಾರೆ. ಇಲ್ಲಿವೆ ನೋಡಿ ಜನರ್ದಾನ ರೆಡ್ಡಿ ಮನೆಗೆ ಗಿಲ್ಲಿ ನಟ ಭೇಟಿ ನೀಡಿದ ಕ್ಷಣಗಳು.
-
Avinash GR
Jan 29, 2026 2:41 PM
1/5
ಬಿಗ್ ಬಾಸ್ ಸೀಸನ್ 12 ವಿನ್ನರ್ ಗಿಲ್ಲಿ ನಟ ಅವರನ್ನು ತಮ್ಮ ಮನೆಯಲ್ಲಿ ಸನ್ಮಾನಿಸಿದ ಜನರ್ದಾನ ರೆಡ್ಡಿ
2/5
"ಕನ್ನಡದ ಹೆಸರಂತ ರಿಯಾಲಿಟಿ ಶೋ ಬಿಗ್ ಬಾಸ್ 12ರ ಆವೃತ್ತಿಯ ವಿಜೇತ, ರಾಜ್ಯ ಅಲ್ಲದೆ ದೇಶ-ವಿದೇಶದಾದ್ಯಂತ ತನ್ನ ಮಾತಿನಿಂದಲೇ ಮನೆ ಮನೆಗಳ ಮಾತಾಗಿ ನಾಡಿನ ಜನರ ಹೃದಯ ಗೆದ್ದ ಗಿಲ್ಲಿ ನಟ" ಎಂದ ಜನರ್ದಾನ ರೆಡ್ಡಿ
3/5
"ಗಿಲ್ಲಿ ನಟ ಅವರನ್ನು ನಮ್ಮ ನಿವಾಸದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿ ಮಾಡಿ, ಆತ್ಮೀಯವಾಗಿ ಸನ್ಮಾನಿಸಿದೆವು" ಎಂದ ಜನರ್ದಾನ ರೆಡ್ಡಿ
4/5
ಗಿಲ್ಲಿ ನಟ ಅವರ ಮುಂದಿನ ಕಲಾಜೀವನವು ಯಶಸ್ವಿಯಾಗಲಿ ಎಂದು ಮಾಜಿ ಸಚಿವ ಹಾರೈಕೆ
5/5
ಸಿಎಂ ಸಿದ್ದರಾಮಯ್ಯ ಬಳಿಕ ಜನಾರ್ದನ ರೆಡ್ಡಿ ಭೇಟಿಯಾದ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ