ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊನೆಗೂ ರವಿತೇಜ - ಆಶಿಕಾ ರಂಗನಾಥ್ ಒಟ್ಟಿಗೆ ನಟಿಸಿರುವ ʻಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾ ಒಟಿಟಿ ರಿಲೀಸ್‌ ಫಿಕ್ಸ್‌

Ravi Teja OTT Release Date: ನಟ ರವಿತೇಜ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಒಟಿಟಿ ರಿಲೀಸ್‌ ಡೇಟ್‌ ಕೊನೆಗೂ ನಿಗದಿಯಾಗಿದೆ. ಜನವರಿ 13 ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿದ್ದ ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿರುವ ಕಾಣಿಸಿಕೊಂಡಿದ್ದಾರೆ.

ಕೊನೆಗೂ ಒಟಿಟಿಗೆ ಬರ್ತಿದೆ ರವಿತೇಜ ನಟನೆಯ ʻಭರ್ತ ಮಹಾಶಯುಲಕು ವಿಜ್ಞಪ್ತಿ'!

-

Avinash GR
Avinash GR Mar 9, 2026 5:39 PM

ಮಾಸ್ ಮಹಾರಾಜ ರವಿತೇಜ ನಟನೆಯ ರೊಮಾಂಟಿಕ್ ಕಾಮಿಡಿ ಎಂಟರ್‌ಟೈನರ್ ‘ಭರ್ತ ಮಹಾಶಯುಲಕು ವಿಜ್ಞಪ್ತಿ’ ಸಿನಿಮಾವು ಸಂಕ್ರಾಂತಿ ಹಬ್ಬದ (ಜ.13) ಪ್ರಯುಕ್ತ ತೆರೆಕಂಡಿತ್ತು. ಅದಾಗಿ ಒಂದು ತಿಂಗಳಿಗೆ ಅಂದರೆ, ಫೆಬ್ರವರಿ 2ನೇ ವಾರದಲ್ಲಿ ಈ ಸಿನಿಮಾದ ಒಟಿಟಿಗೆ ಬರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈ ಸಿನಿಮಾ ಯಾವಾಗ ಓಟಿಟಿಗೆ ಬರಲಿದೆ ಎಂಬ ಬಗ್ಗೆ ಇದೀಗ ಕೊನೆಗೂ ಉತ್ತರ ಸಿಕ್ಕಿದೆ.

ಮಾರ್ಚ್ 13 ರಿಂದ ‘ಭರ್ತ ಮಹಾಶಯುಲಕು ವಿಜ್ಞಪ್ತಿ’ ಸ್ಟ್ರೀಮಿಂಗ್

ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಆದರೆ ಇದರ ಓಟಿಟಿ ಬಿಡುಗಡೆಗಾಗಿ ಸಿನಿಪ್ರಿಯರು ಮಾತ್ರ ಕಾತುರದಿಂದ ಕಾಯುತ್ತಿದ್ದಾರೆ. ಮುಖ್ಯವಾಗಿ ರವಿತೇಜ ಅವರ ಕಾಮಿಡಿ ಟೈಮಿಂಗ್ ಮತ್ತು ಇಬ್ಬರು ನಾಯಕಿಯರ ಜೊತೆಗಿನ ಅವರ ರೊಮಾಂಟಿಕ್ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಆಸಕ್ತಿ ತೋರುತ್ತಿದ್ದಾರೆ. ಅದಕ್ಕೀಗ ಉತ್ತರ ಸಿಕ್ಕಿದೆ. ಮಾರ್ಚ್ 13 ರಿಂದ ‘ಭರ್ತ ಮಹಾಶಯುಲಕು ವಿಜ್ಞಪ್ತಿ’ ಸಿನಿಮಾವು ಜೀ5ರಲ್ಲಿ ಸ್ಟ್ರೀಮಿಂಗ್ ಆಗಲಿದೆ.

Mass Jathara OTT Release: ಒಟಿಟಿಗೆ ಎಂಟ್ರಿ ಕೊಡ್ತಿದೆ ಶ್ರೀಲೀಲಾ - ರವಿತೇಜ ಸಿನಿಮಾ, ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಓಟಿಟಿ ಪ್ರೇಕ್ಷಕರಿಗಾಗಿ ವಿಶೇಷ ಟ್ರೈಲರ್ ಅನ್ನು ಬಿಡುಗಡೆ ಮಾಡಿರುವ ಜೀ5, “ಕಾಯುವಿಕೆ ಮುಗಿಯಿತು… ಭರ್ತ ಮಹಾಶಯುಲಕು ವಿಜ್ಞಪ್ತಿ ಮಾರ್ಚ್ 13 ರಿಂದ ಜೀ5 ನಲ್ಲಿ ಸ್ಟ್ರೀಮಿಂಗ್” ಎಂಬ ಕ್ಯಾಪ್ಷನ್‌ ಹಂಚಿಕೊಂಡಿದೆ. ಈ ಸಿನಿಮಾಕ್ಕಾಗಿ ಫ್ಯಾಮಿಲಿ ಆಡಿಯನ್ಸ್‌ನಿಂದ ಕಾತರದಿಂದ ಕಾಯುತ್ತಿದ್ದು, ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬ ಕುತೂಹಲ ಚಿತ್ರತಂಡಕ್ಕಿದೆ.

ಯಾರೆಲ್ಲಾ ನಟಿಸಿದ್ದಾರೆ?

ಈ ಚಿತ್ರಕ್ಕೆ ಕಿಶೋರ್ ತಿರುಮಲ ನಿರ್ದೇಶನ ಮಾಡಿದ್ದು, ಸುಧಾಕರ್ ಚೆರುಕೂರಿ ಹಣ ಹಾಕಿದ್ದಾರೆ. ರವಿತೇಜ ಜೊತೆ ಆಶಿಕಾ ರಂಗನಾಥ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿ ನಟಿಸಿದ್ದಾರೆ. ಸುನಿಲ್, ಸತ್ಯ, ಗೆಟಪ್‌ ಶ್ರೀನು, ತಾರಕ್‌ ಪೊನ್ನಪ್ಪ, ಸೋನಿಯಾ ಸಿಂಗ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Gatha Vaibhava Movie: ದುಶ್ಯಂತ್-ಆಶಿಕಾ ರಂಗನಾಥ್ ನಟನೆಯ 'ಗತವೈಭವ' ನವೆಂಬರ್ 14ಕ್ಕೆ‌ ರಿಲೀಸ್

ಈ ಸಿನಿಮಾದ ಕಥೆ ಏನು?

ಸಂಸಾರಸ್ಥನಾಗಿರುವ ರಾಮ್‌ ಸತ್ಯನಾರಾಯಣ (ರವಿ ತೇಜ) ವ್ಯಾಪಾರದ ಒಪ್ಪಂದಕ್ಕಾಗಿ ಸ್ಪೇನ್‌ಗೆ ಹೋಗುತ್ತಾನೆ. ಆದರೆ ಅಲ್ಲಿ ಮಾನಸಾ ಶೆಟ್ಟಿಯನ್ನು (ಆಶಿಕಾ) ಅವನು ಪರಿಚಯ ಮಾಡಿಕೊಳ್ಳುತ್ತಾನೆ. ಅವಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ಪತ್ನಿ ಬಾಲಮಣಿಯದ್ದು (ಡಿಂಪಲ್)‌ ಅತಿಯಾದ ಪೊಸೆಸಿವ್ ಸ್ವಭಾವ. ಈ ಇಬ್ಬರ ಮಧ್ಯೆ ಸಿಲುಕಿಕೊಂಡ ನಾಯಕನ ಪರಿಸ್ಥಿತಿ ಏನು? ಅವನು ಎದುರಿಸುವ ಸಮಸ್ಯೆಗಳೇನು? ಅವುಗಳಿಂದ ಹೊರಬರಲು ಮಾಡುವ ಪ್ರಯತ್ನಗಳೇನು ಎಂಬುದೇ ಈ ಚಿತ್ರದ ಪ್ರಮುಖಾಂಶ. ಪತ್ನಿ ಮತ್ತು ಪ್ರಿಯತಮೆಯ ನಡುವೆ ನಲುಗುವ ಪತಿಯ ಸ್ಥಿತಿಯನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆ.