ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜನವರಿಯಲ್ಲಿ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರು; ಈ ಚಿತ್ರವನ್ನ ಆರೇ ತಿಂಗಳಲ್ಲಿ ಮುಗಿಸ್ತಾರಾ ʻಡಿವೈನ್‌ ಸ್ಟಾರ್‌ʼ?

Rishab Shetty New Movie Announcement: ʻಕಾಂತಾರ: ಚಾಪ್ಟರ್‌ 1ʼ ಚಿತ್ರದ ಯಶಸ್ಸಿನ ಬಳಿಕ ನಟ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅವರ ಹೊಸ ಸಿನಿಮಾವು 2026ರ ಜನವರಿಯಿಂದ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆಯಂತೆ. ರಿಷಬ್‌ ಅವರು ಈ ಚಿತ್ರಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ್ದು, ಅದೇ ವರ್ಷದ ಜೂನ್‌-ಜುಲೈ ಹೊತ್ತಿಗೆ ಶೂಟಿಂಗ್ ಮುಗಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಂದಿನ ಸಿನಿಮಾಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ ರಿಷಬ್‌ ಶೆಟ್ಟಿ!

-

Avinash GR
Avinash GR Nov 19, 2025 6:35 PM

ಕಾಂತಾರ: ಚಾಪ್ಟರ್‌ 1 ಸಿನಿಮಾವು ರಿಷಬ್‌ ಶೆಟ್ಟಿಗೆ ಎಂಥಾ ದೊಡ್ಡ ಹೆಸರನ್ನು ತಂದುಕೊಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂತಾರ ಚಿತ್ರದಿಂದ ಸಿಕ್ಕ ಜನಪ್ರಿಯತೆ ಕಾಂತಾರ: ಚಾಪ್ಟರ್‌ 1 ಚಿತ್ರದಿಂದ ಹಲವು ಪಟ್ಟು ಅಧಿಕವಾಗಿದೆ. ಸದ್ಯ ಎಲ್ಲರ ಗಮನ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾದ ಮೇಲಿದೆ. ಹೌದು, ರಿಷಬ್‌ ಅವರ ಹೊಸ ಸಿನಿಮಾ ಯಾವಾಗ ಶುರುವಾಗಲಿದೆ ಎಂಬ ಚರ್ಚೆ ಆರಂಭವಾಗಿದೆ. ಅದಕ್ಕುತ್ತರ ಇಲ್ಲಿದೆ ನೋಡಿ.

ಜನವರಿಗೆ ಶುರುವಾಗಲಿದೆ ಹೊಸ ಸಿನಿಮಾ

ಹೌದು, ಕಾಂತಾರ: ಚಾಪ್ಟರ್‌ 1 ಸಿನಿಮಾಕ್ಕಾಗಿ ರಿಷಬ್‌ ಶೆಟ್ಟಿ ಬರೋಬ್ಬರಿ 3 ವರ್ಷ ಮೀಸಲಿಟ್ಟಿದ್ದರು. ಅಕ್ಟೋಬರ್‌ 2ಕ್ಕೆ ಸಿನಿಮಾ ತೆರೆಕಂಡಿತ್ತು. ಆ ತಿಂಗಳು ಪೂರ ಅದರ ಪ್ರಚಾರದಲ್ಲೇ ಬ್ಯುಸಿ ಇದ್ದರು. ಸದ್ಯ ಅವರು ಫ್ಯಾಮಿಲಿಗೆ ಟೈಮ್‌ ನೀಡಿದ್ದಾರೆ. ಈ ಮಧ್ಯೆ ಅವರ ಮುಂದಿನ ಸಿನಿಮಾವನ್ನು ಜನವರಿಯಿಂದ ಆರಂಭಿಸುವ ಬಗ್ಗೆ ಪ್ಲ್ಯಾನ್‌ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. 2026ರ ಜನವರಿಯಲ್ಲಿ ಶೂಟಿಂಗ್‌ ಆರಂಭವಾಗಲಿದ್ದು, ಅದೇ ವರ್ಷ ಜೂನ್‌ - ಜುಲೈ ಹೊತ್ತಿಗೆ ಮುಗಿಯಬಹುದಾ ಎಂಬ ಮಾತು ಕೇಳಿಬಂದಿದೆ.

Rishab Shetty: ಕಾಂತಾರ ಬಳಿಕ ಚಿತ್ರರಂಗದಿಂದ ರಿಷಬ್‌ ದೂರವಾಗ್ತಾರಾ? ಏನಿದು ಶಾಕಿಂಗ್‌ ನ್ಯೂಸ್‌!

ಆರು ತಿಂಗಳು ಕಾಲ್‌ಶೀಟ್‌ ನೀಡಿರುವ ರಿಷಬ್

ಮತ್ತೊಂದು ಮೂಲದ ಪ್ರಕಾರ, ಈ ಸಿನಿಮಾಕ್ಕೆ ರಿಷಬ್ ಶೆಟ್ಟಿ ಅವರು ಆರು ತಿಂಗಳು ಮಾತ್ರ ಕಾಲ್‌ ಶೀಟ್‌ ನೀಡಿದ್ದಾರಂತೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ʻಜೈ ಹನುಮಾನ್ʼ! ಹೌದು, ಹಲವು ತಿಂಗಳ ಹಿಂದೆಯೇ ‌ʻಜೈ ಹನುಮಾನ್ʼ ಸಿನಿಮಾ ಘೋಷಣೆ ಆಗಿತ್ತು. ಕಳೆದ ವರ್ಷ ಹನುಮಾನ್‌ ರೀತಿಯ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾವನ್ನು ನೀಡಿದ್ದ ನಿರ್ದೇಶಕ ಪ್ರಶಾಂತ್‌ ವರ್ಮ ಈ ಬಾರಿ ರಿಷಬ್‌ ಶೆಟ್ಟಿಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ‌ʻಜೈ ಹನುಮಾನ್ʼ ಚಿತ್ರದ ರಿಷಬ್‌ ಶೆಟ್ಟಿ ಅವರ ಲುಕ್‌ ಎಲ್ಲರ ಗಮನಸೆಳೆದಿದೆ. ‌

'ಕಾಂತಾರ ಚಾಪ್ಟರ್‌ 1' ಚಿತ್ರದ ಮಾಯಾಕಾರ ಪಾತ್ರವಾಗಿ ಬದಲಾಗಲು ರಿಷಬ್‌ ಶೆಟ್ಟಿ ಎಷ್ಟು ಕಷ್ಟಪಟ್ಟಿದ್ದಾರೆ ನೋಡಿ; ಮೇಕಿಂಗ್‌ ವಿಡಿಯೊ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌

ರಿಷಬ್‌ ಕೈಯಲ್ಲಿವೆ ಎರಡ್ಮೂರು ಪ್ರಾಜೆಕ್ಟ್ಸ್‌

ನಿರ್ದೇಶಕ ಪ್ರಶಾಂತ್‌ ವರ್ಮಾ ಈಗಾಗಲೇ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿಕೊಂಡಿದ್ದು, ಒಂದೇ ಸ್ಟ್ರೆಚ್‌ನಲ್ಲಿ ಶೂಟಿಂಗ್‌ ಮುಗಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬುದು ಹೊಸ ಟಾಕ್.‌ ಹನುಮಾನ್‌ ನಂತರ ಸುದೀರ್ಘ ಎರಡು ವರ್ಷ ಟೈಮ್‌ ತೆಗೆದುಕೊಂಡಿರುವ ಪ್ರಶಾಂತ್‌ ವರ್ಮ, ಹೊಸ ಸಿನಿಮಾಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ರಿಷಬ್ ಕೂಡ ಕಳೆದ ಮೂರು ವರ್ಷಗಳನ್ನು ಒಂದೇ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದರಿಂದ ಈಗ ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರ ನಾಯಕತ್ವದಲ್ಲಿ ಎರಡ್ಮೂರು ಪ್ರಾಜೆಕ್ಟ್‌ಗಳು ಘೋಷಣೆ ಆಗಿವೆ. ‌

ಈ ಚಿತ್ರದ ನಂತರ ಸಿತಾರ ಎಂಟರ್‌ಟೇನ್ಮೆಂಟ್‌ ಸಿನಿಮಾವನ್ನು ಕೂಡ ರಿಷಬ್‌ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ರಿಷಬ್‌ ಶೆಟ್ಟಿ ಗಗನಕುಸುಮವೇ ಸರಿ!