ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rishab Shetty: ‘ಕಾಂತಾರ’ ಸಿನಿಮಾ ತೆರೆಕಂಡು ನಾಲ್ಕು ವರ್ಷ; ಹೊಂಬಾಳೆ ಪೋಸ್ಟ್‌ನಲ್ಲಿ ರಿಷಬ್ ಇಲ್ಲ

Rishab Shetty: ರಿಷಬ್ ಶೆಟ್ಟಿ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಸಿನಿಮಾ ತೆರೆಗೆ ಬಂದು ನಾಲ್ಕು ವರ್ಷ. ‘ಕಾಂತಾರ’ ಚಿತ್ರಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ’ ಎಂದು ಪೋಸ್ಟ್ ಮಾಡಿದ್ದಾರೆ. 2022ರ ಸೆಪ್ಟೆಂಬರ್ 30ರಂದು ಚಿತ್ರ ಬಿಡುಗಡೆಗೊಂಡಿತ್ತು. ರೆಕಾರ್ಡ್‌ ಬ್ರೇಕರ್‌ ಚಿತ್ರವಾಗಿ ಇತಿಹಾಸ ನಿರ್ಮಿಸಿತು. ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಇದೇ ರೀತಿಯ ದಾಖಲೆ ಮಾಡಿತು.

ಕಾಂತಾರ ಸಿನಿಮಾ ತೆರೆಕಂಡು 4 ವರ್ಷ; ಹೊಂಬಾಳೆ ಪೋಸ್ಟ್‌ನಲ್ಲಿ ರಿಷಬ್ ಇಲ್ಲ

ಕಾಂತಾರ ಸಿನಿಮಾ -

Yashaswi Devadiga
Yashaswi Devadiga Oct 1, 2026 10:39 AM

ರಿಷಬ್ ಶೆಟ್ಟಿ (Rishab shetty) ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಸಿನಿಮಾ ತೆರೆಗೆ ಬಂದು ನಾಲ್ಕು ವರ್ಷ. ‘ಕಾಂತಾರ’(Kantara) ಚಿತ್ರಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಸಂಭ್ರಮದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ’ ಎಂದು ಪೋಸ್ಟ್ ಮಾಡಿದ್ದಾರೆ. 2022ರ ಸೆಪ್ಟೆಂಬರ್ 30ರಂದು ಚಿತ್ರ ಬಿಡುಗಡೆಗೊಂಡಿತ್ತು. ರೆಕಾರ್ಡ್‌ ಬ್ರೇಕರ್‌ ಚಿತ್ರವಾಗಿ ಇತಿಹಾಸ ನಿರ್ಮಿಸಿತು. ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಇದೇ ರೀತಿಯ ದಾಖಲೆ ಮಾಡಿತು. ಆ ಬಳಿಕ ಹೊಂಬಾಳೆ (Hombale Films) ಹಾಗೂ ರಿಷಬ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿ ಬಂತು. ಇದೀಗ ಪೋಸ್ಟ್‌ ಕಂಡ ನೆಟ್ಟಗರು ಬಹುತೇಕ ಖಚಿತ ಎನ್ನುತ್ತಿದ್ದಾರೆ.

ರಿಷಬ್‌ ಪೋಸ್ಟ್‌ನಲ್ಲಿ ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು.

ಇದನ್ನೂ ಓದಿ: Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌



ನನ್ನ ಈ ಪ್ರಯತ್ನವನ್ನು ಕೊಂಡಾಡಿ, ಅದನ್ನು ಗಡಿದಾಟಿಸಿ , ಕನ್ನಡದ ಹೆಮ್ಮೆಯ ಸಿನಿಮಾವಾಗಿ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ ಎಂದು ಬರೆದುಕೊಂಡಿದ್ದಾರೆ. ‘ಕಾಂತಾರಕ್ಕೆ 4 ವರ್ಷ. ಈ ಪಯಣವನ್ನು ಇಷ್ಟು ಸುಂದರವಾಗಿಸಿದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಹೊಂಬಾಳೆ ಪೋಸ್ಟ್ ಮಾಡಿದೆ.

ರಿಷಬ್ ಶೆಟ್ಟಿ ಪೋಸ್ಟ್​​ನಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರಿಲ್ಲ. ಇನ್ನು, ಹೊಂಬಾಳೆ ಮಾಡಿರುವ ಪೋಸ್ಟ್​​ನಲ್ಲಿಯೂ ರಿಷಬ್ ಹೆಸರು ಉಲ್ಲೇಖ ಆಗಿಲ್ಲ.

ಇದನ್ನೂ ಓದಿ: Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?

. 'ಕಾಂತಾರ'ವನ್ನು ನಂಬಿದ, ಅದನ್ನು ಸಂಭ್ರಮಿಸಿದ ಮತ್ತು ನಮ್ಮ ಮಣ್ಣಿನ ಈ ಕಥೆಯನ್ನು ಜಗತ್ತಿನಾದ್ಯಂತ ಕೊಂಡೊಯ್ದ ಪ್ರತಿಯೊಬ್ಬರಿಗೂ ನಾನು ಸದಾ ಋಣಿಯಾಗಿದ್ದೇನೆ. ಈ ದಂತಕಥೆ ನಿಮ್ಮೆಲ್ಲರಿಗೂ ಸೇರಿದ್ದು” ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.