ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

S Mahender: 2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯ ಹೇಗಿದೆ? ಎಸ್. ಮಹೇಂದರ್ ಮುಕ್ತ ಮಾತು

S Mahender yashoda: ನಟಿ ಶ್ರುತಿ ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಶ್ರುತಿ ಮತ್ತು ಮಹೇಂದರ್ ಪ್ರೇಮ ವಿವಾಹವಾಗಿದ್ದರು. ನಟಿ ಶ್ರುತಿ ಅವರಿಂದ ಎಸ್. ಮಹೇಂದರ್ ಡಿವೋರ್ಸ್ ಪಡೆದು ದೂರಾಗಿದ್ದರೂ ಮಗಳು ಗೌರಿ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಗಳು ಗೌರಿ ಹಾಗೂ 2ನೇ ಪತ್ನಿ ಯಶೋಧಾ ಬಗ್ಗೆ ಎಸ್. ಮಹೇಂದರ್ ಮಾತನಾಡಿದ್ದಾರೆ.

2ನೇ ಪತ್ನಿ ಹಾಗೂ ಮಗಳು ಗೌರಿ ಬಾಂಧವ್ಯದ ಬಗ್ಗೆ ಎಸ್. ಮಹೇಂದರ್ ಮಾತು

ಎಸ್‌ ಮಹೇಂದರ್‌ -

Yashaswi Devadiga
Yashaswi Devadiga Feb 17, 2026 11:25 AM

ನಟಿ ಶ್ರುತಿ (shruti) ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಶ್ರುತಿ ಮತ್ತು ಮಹೇಂದರ್ (s mahendar) ಪ್ರೇಮ ವಿವಾಹವಾಗಿದ್ದರು. ನಟಿ ಶ್ರುತಿ ಅವರಿಂದ ಎಸ್. ಮಹೇಂದರ್ ಡಿವೋರ್ಸ್ ಪಡೆದು ದೂರಾಗಿದ್ದರೂ ಮಗಳು ಗೌರಿ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಗಳು ಗೌರಿ ಹಾಗೂ 2ನೇ ಪತ್ನಿ ಯಶೋಧಾ (Yashodha) ಬಗ್ಗೆ ಎಸ್. ಮಹೇಂದರ್ ಮಾತನಾಡಿದ್ದಾರೆ.

'ಶೃಂಗಾರ ಕಾವ್ಯಾ', 'ಕರ್ಪೂರದ ಗೊಂಬೆ', 'ಕೌರವ', 'ಸ್ನೇಹಲೋಕ', 'ಅಸುರ', 'ವಾಲಿ', 'ಕುಶಲವೇ ಕ್ಷೇಮವೇ' ರೀತಿಯ ಹಿಟ್ ಸಿನಿಮಾಗಳನ್ನು ಎಸ್. ಮಹೇಂದರ್ ನೀಡಿದ್ದರು. ಸದ್ಯ ಶ್ರೀ ಗುರು ರಾಯರು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಂಬರಗ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ. ನಟಿ ಶ್ರುತಿ ಜೊತೆ ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಎಸ್. ಮಹೇಂದರ್ ಬಳಿಕ ಯಶೋಧಾ ಎಂಬುವವರ ಕೈ ಹಿಡಿದರು.

ಇದನ್ನೂ ಓದಿ: Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

ಗೌರಿ ಇಂದ ಕಲಿತೆ!

ಎಸ್. ಮಹೇಂದರ್‌ ಮಾತನಾಡಿ, ನನ್ನ ಮಗಳು ಗೌರಿ ಆಗಾಗ್ಗೆ ನಮ್ಮ ಮನೆ ಬರ್ತಾಳೆ. ಯಾವುದೇ ವಿಚಾರಗಳನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಮಾಡಲ್ಲ ಅವಳು. ನನ್ನ ಹೆಂಡತಿ ಯೋಶೋಧ ಆಗಾಗ ಹೇಳ್ತಾ ಇರ್ತಾಳೆ. ಅನೇಕ ವಿಚಾರಗಳನ್ನು ಗೌರಿ ಇಂದ ಕಲಿತೆ ಎಂದು. ತಾಳ್ಮೆ, ಇನ್ನೊಬ್ಬರನ್ನು ಹೇಗೆ ಪ್ರೀತಿಯಿಂದ ಮಾತನಾಡಿಸಬೇಕುಅ ಅನ್ನೋದು ಕಲಿತಿದ್ದೇನೆ ಅಂತಿರ್ತಾಳೆ.

ಎಲ್ಲವನ್ನು ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ದೀವಿ

ನಮ್ಮ ಮನೆಗೆ ಬಂದರೆ ಗೌರಿ ಅಡುಗೆ ಮಾಡ್ತಾಳೆ. ಅವಳು ತುಂಬಾ ಫ್ರೀ ಆಗಿ ಇರ್ತಾಳೆ. ನಮ್ಮ ಸಂಬಂಧಿಕರಲ್ಲಿಯೂ ಅವಳು ಅಚ್ಚುಮೆಚ್ಚು. ಅಪ್ಪನ ಬಗ್ಗೆ ತುಂಬಾ ಅಭಿಮಾನ ಇದೆ. ನಾನು ತುಂಬಾ ಸಾಫ್ಟ್‌. ಅದಕ್ಕೆ ಮಗನಿಗೆ ಹೇಳ್ತಾಳೆ. ನಿನ್ನ ಥರ ಬೆಳಸಬೇಡಿ ಅಂತಿರ್ತಾಳೆ. ಅವಳಿಗೆ ನಮ್ಮ ಹಳ್ಳಿ ಅಂದರೆ ಇಷ್ಟ. ತೋಟದ ಮನೆ ೧೩೦ ವರ್ಷದ ಹಳೆಯ ಮನೆ. ಅಲ್ಲಿ ಇರಲು ಇಷ್ಟ ಪಡ್ತಾಳೆ. ಹಳ್ಳಿ ಹೋಗೋಣ ಅಂತಿರ್ತಾಳೆ. ಎಲ್ಲವೂ ಬ್ಯಾಲೆನ್ಸ್‌ ಮಾಡ್ತಾಳೆ. ತೋಟಕ್ಕೆ ಹೋಗಿ ಸೊಪ್ಪು, ತರಕಾರಿ ಕಿತ್ಕೊಂಡು ಬಂದು ಅಡುಗೆ ಮಾಡಿ ತಿನ್ನುವುದು ಮಾಡ್ತಾಳೆ. ಆಗಾಗ್ಗೆ ಊರಿಗೆ ಹೋಗೋಣ ಎನ್ನುತ್ತಾಳೆ. ಎಲ್ಲವನ್ನು ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ದೀವಿ. ಎಲ್ಲವೂ ಋಣ.. ಯಾರ ಜೊತೆ ಎಷ್ಟು ದೂರ ಪಯಣ ಗೊತ್ತಿಲ್ಲ ಎಂದರು.

ಯಶೋದಾ ಹಾಗೂ ಶ್ರುತಿ ಎಂದೂ ಭೇಟಿ ಆಗಿಲ್ಲ. ಆದರೆ ಒಂದು ಮಾತು ನೆಗೆಟಿವ್ ಆಗಿ ಮಾತನಾಡಿಲ್ಲ. ನೀವು ಹಾಗೂ ಶ್ರುತಿ ಚಿತ್ರರಂಗದಲ್ಲಿ ಅಷ್ಟು ಜನಪ್ರಿಯರಾಗಿದ್ದೀರಾ.. ಮಗಳು ಗೌರಿ ಕೈಯಲ್ಲಿ ಸಿನಿಮಾ ಮಾಡ್ಸಿ ಎಂದು ಯಶೋಧಾ ಹೇಳ್ತಿರ್ತಾಳೆ. ಗೌರಿ ಬಗ್ಗೆ ಆ ತರ ಕನಸು ಇದೆ ಎಂದಿದ್ದಾರೆ.

ಇದನ್ನೂ ಓದಿ: Bhagyalakshmi Serial Kannada: ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರವೇ ಅಂತ್ಯ ಆಯ್ತಾ?

ನನ್ನ ಮಗಳಿಗೆ ನಾನ್‌ವೆಜ್‌ ಇಷ್ಟ, ಯೋಶೋಧಾ ನಾನ್‌ ವೆಜ್‌ ತಿನ್ನಲ್ಲ. ಬಟ್‌ ಎಲ್ಲರೂ ಎಂಜಾಯ್‌ ಮಾಡ್ತಾರೆ. ಗೌರಿ ಬಂದರೆ ಮನೆಯೇ ಹಬ್ಬ ಥರ ಇರತ್ತೆ ಎಂದಿದ್ದಾರೆ.