ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ettinahole: ರೈತರಿಂದ ಎಕರೆಗೆ 2 ಕೋಟಿ ಪರಿಹಾರಕ್ಕೆ ಬೇಡಿಕೆ; ಜಿಲ್ಲಾಧಿಕಾರಿ ಅಧ್ಯಕ್ಷತೆಯ ಭೂದರ ನಿರ್ಧರಣಾ ಸಲಹಾ ಸಮಿತಿಯಲ್ಲಿ ತೀರ್ಮಾನ

ಎತ್ತಿನಹೊಳೆ(Ettinahole) ಯೋಜನೆಗೆ ಸಂಬಂಧಿಸಿದಂತೆ ಗೌರಿಬಿದನೂರು ತಾಲ್ಲೂಕಿನ ಕಸಬಾ ಹೋಬಳಿಯ ಗೌಡಸಂದ್ರ, ಬಾದಿಮರಳೂರು ಹಾಗೂ ರಾಮಚಂದ್ರಪುರ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಜಮೀನಿಗೆ ಎಕರೆಗೆ 1.15 ಕೋಟಿ ಪರಿಹಾರ ದರ ನಿಗದಿಪಡಿಸಲು ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗೌರಿಬಿದನೂರು ಮೂರು ಗ್ರಾಮಗಳ ಭೂಸ್ವಾಧೀನಕ್ಕೆ ಎಕರೆಗೆ 1.15 ಕೋಟಿ ದರ ನಿಗದಿ

-

Profile
Ashok Nayak Nov 12, 2026 10:17 PM

ಚಿಕ್ಕಬಳ್ಳಾಪುರ: ಎತ್ತಿನಹೊಳೆ(Ettinahole) ಯೋಜನೆಗೆ ಸಂಬಂಧಿಸಿದಂತೆ ಗೌರಿಬಿದನೂರು ತಾಲ್ಲೂಕಿನ ಕಸಬಾ ಹೋಬಳಿಯ ಗೌಡಸಂದ್ರ, ಬಾದಿಮರಳೂರು ಹಾಗೂ ರಾಮಚಂದ್ರಪುರ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಜಮೀನಿಗೆ ಎಕರೆಗೆ 1.15 ಕೋಟಿ ಪರಿಹಾರ ದರ ನಿಗದಿಪಡಿಸಲು ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ಗ್ರಾಮಗಳ ರೈತರಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲಾಯಿತು. ಈ ಸಂದರ್ಭ ದಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಪ್ರತಿ ಎಕರೆ ಜಮೀನಿಗೆ 2 ಕೋಟಿ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು.

1556366 ettinahole

ರೈತರ ಬೇಡಿಕೆ ಹಾಗೂ ವಿವಿಧ ಅಂಶಗಳ ಕುರಿತು ಚರ್ಚಿಸಿದ ಬಳಿಕ, ಭೂಸ್ವಾಧೀನಕ್ಕೆ ಒಳಪಡುವ ಪ್ರತಿ ಎಕರೆಗೆ 1.15 ಕೋಟಿ ಪರಿಹಾರ ದರ ನಿಗದಿಪಡಿಸುವ ನಿರ್ಧಾರವನ್ನು ಸಮಿತಿ ಕೈಗೊಂಡು ಸಭೆಗೆ ತಿಳಿಸಿತು.

ಮೂರು ಗ್ರಾಮಗಳಲ್ಲಿ ಒಟ್ಟು 810 ಎಕರೆ 36 ಗುಂಟೆ ಜಮೀನು ಗುರುತಿಸಲಾಗಿದ್ದು, ಇದರಲ್ಲಿ 105 ಎಕರೆ 6 ಗುಂಟೆ ಖರಾಬು ಜಮೀನು ಹೊರತುಪಡಿಸಿ 705 ಎಕರೆ 30 ಗುಂಟೆ ಭೂಮಿ ಭೂಸ್ವಾಧೀನಕ್ಕೆ ಒಳಪಡಲಿದೆ.