Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಮತ್ತೋರ್ವ ಖ್ಯಾತ ನಟ
ನಟಿ ಶ್ವೇತಾ ಬೆನ್ನಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಮತ್ತೋರ್ವ ಖ್ಯಾತ ನಟ ಹೊರಬಂದಿದ್ದಾರೆ. ಸದ್ಯ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಬದಲಾಗಿ ಅವರ ಸಮಕಾಲೀನವರೇ ಆದ ಮಾಧುರಿ ನಟಿಸುತ್ತಿದ್ದಾರೆ. ಜನರು ಸಹ ಲಕ್ಷ್ಮೀ ಪಾತ್ರದಲ್ಲಿ ಮಾಧುರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮೀ ಸೋದರನ ಪಾತ್ರದ ಕಲಾವಿದ ಬದಲಾಗಿದ್ದಾರೆ. ಅವರು ಮತ್ಯಾರೂ ಅಲ್ಲ ಅಶ್ವಥ್ ನೀನಾಸಂ.

Lakshmi Nivasa Neenasam Ashwath

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದ ನಟಿ ಶ್ವೇತಾ ಅವರು ಸೀರಿಯಲ್‌ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್ ಕೊಟ್ಟರು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಅವರು ನಿರ್ಗಮಿಸಿದರು. ಲಕ್ಷ್ಮೀ ನಿವಾಸ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೇಳುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಲೋಕರೂಢಿಯ ಮಾತಿದೆ. ಇಡೀ ಧಾರಾವಾಹಿಗೆ ಅದುವೇ ಜೀವಾಳ. ಲಕ್ಷ್ಮೀ ಪಾತ್ರಕ್ಕೆ ಸಾಕಷ್ಟು ತೂಕವಿತ್ತು. ಇವರ ನಿರ್ಗಮನ ವೀಕ್ಷಕರಿಗೆ ನೋವುಂಟು ಮಾಡಿತು.
ಇದೀಗ ನಟಿ ಶ್ವೇತಾ ಬೆನ್ನಲ್ಲೇ ಈ ಧಾರಾವಾಹಿಯಿಂದ ಮತ್ತೋರ್ವ ಖ್ಯಾತ ನಟ ಹೊರಬಂದಿದ್ದಾರೆ. ಸದ್ಯ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಬದಲಾಗಿ ಅವರ ಸಮಕಾಲೀನವರೇ ಆದ ಮಾಧುರಿ ನಟಿಸುತ್ತಿದ್ದಾರೆ. ಜನರು ಸಹ ಲಕ್ಷ್ಮೀ ಪಾತ್ರದಲ್ಲಿ ಮಾಧುರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮೀ ಸೋದರನ ಪಾತ್ರದ ಕಲಾವಿದ ಬದಲಾಗಿದ್ದಾರೆ. ಅವರು ಮತ್ಯಾರೂ ಅಲ್ಲ ಅಶ್ವಥ್ ನೀನಾಸಂ.
ಹೌದು, ಲಕ್ಷ್ಮೀ ನಿವಾಸ ಸೀರಿಯಲ್ ಆರಂಭವಾದಾಗಿನಿಂದ ನರಸಿಂಹ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸುತ್ತಿದ್ದರು. ರಂಗಭೂಮಿ ಕಲಾವಿದರಾಗಿರುವ ನೀನಾಸಂ ಅಶ್ವಥ್ ಧಾರಾವಾಹಿಯ ಹಿರಿಯ ಕಲಾವಿದರಾಗಿದ್ದರು. ಇದೀಗ ನೀನಾಸಂ ಅಶ್ವಥ್ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಇವರು ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ಸೀರಿಯಲ್‌ನ ತನು ಪಾತ್ರವೂ ಬದಲಾಗಿತ್ತು.
Bhagya Lakshmi Serial: ಆದೀಶ್ವರ್ ಮುಂದೆ ತನ್ನ ದುಃಖ ತೋಡಿಕೊಂಡ ತಾಂಡವ್
ಮೂಲಗಳ ಪ್ರಕಾರ, ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ನಿರ್ಮಾಪಕರು ಹಾಗೂ ಲಕ್ಷ್ಮಿ ನಿವಾಸ ಧಾರಾವಾಹಿಯ ಕಲಾವಿದರು, ತಂತ್ರಜ್ಞರ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಒಬ್ಬೊಬ್ಬರೇ ಹಿರಿಯ ಕಲಾವಿದರು ಈ ಧಾರಾವಾಹಿಯಿಂದ ನಿರ್ಗಮಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಈಗ ನೀನಾಸಂ ಅಶ್ವಥ್ ಅವರು ಕೂಡ ಇದೇ ರೀತಿಯ ಭಿನ್ನಾಭಿಪ್ರಾಯದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ, ಈ ಭಿನ್ನಾಭಿಪ್ರಾಯದ ವಿಚಾರ ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.