ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?

Zee Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಗೌತಮ್‌ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಇನ್ನೊಂದು ಕಡೆ ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್ ಗಾಳಕ್ಕೆ ಸಿಲುಕಿದ್ದಾಳೆ. ಜೈದೇವ (Jaidev) ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್​ ರಿಯಲ್ಲಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ.

Amruthadhaare Serial : ಭೂಮಿ ಕೈಗೆ ಸಿಕ್ಕಿಬೀಳ್ತಾರಾ ಮಲ್ಲಿ-ಸುನಿ?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Feb 11, 2026 6:34 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ (amruthadhaare serial) ಕುತೂಹಲ ಘಟ್ಟ ತಲುಪಿದೆ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಗೌತಮ್‌ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ (Bhoomika) ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಇನ್ನೊಂದು ಕಡೆ ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್ ಗಾಳಕ್ಕೆ ಸಿಲುಕಿದ್ದಾಳೆ. ಜೈದೇವ (Jaidev) ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್​ ರಿಯಲ್ಲಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ. ಮಲ್ಲಿಯ (Malli) ಬದಲಾದ ನಡವಳಿಕೆಯನ್ನು ಗಮನಿಸಿದ ಭೂಮಿಕಾ, ಸತ್ಯವನ್ನು ಪತ್ತೆಹಚ್ಚಲು ಮುಂದಾಗಿದ್ದಾಳೆ.

ತಾಯಿಗೆ ಮಗನದ್ದೆ ಚಿಂತೆ

ಗೌತಮ್‌ ತಾಯಿಗೆ ಮಗನದ್ದೆ ಚಿಂತೆ ಆಗಿದೆ. ಗೌತಮ್ ದೀವಾನ್ ಸಂಸ್ಥೆಯ ಮಾಲೀಕನಾಗಿದ್ದ. ಆದರೆ ಈ ಅಷ್ಟೂ ಆಸ್ತಿ ಜೈದೇವ್‌ ಪಾಲಾಗಿದೆ. ಶಕುಂತಲಾ ಕುತಂತ್ರದಿಂದ ಭೂಮಿಕಾ ಮನೆ ಬಿಟ್ಟು ಆಚೆ ಹೋಗಿದ್ದಳು. ಈಗ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ಆತ ಕ್ಯಾಬ್ ಓಡಿಸಿಕೊಂಡು ಇರೋದನ್ನು ಆತನ ತಾಯಿ ಇಷ್ಟಪಟ್ಟಿಲ್ಲ. ಹೀಗಾಗಿ, ಹೊಸ ಉದ್ಯಮ ಮಾಡೋದಾಗಿ ಅವನು ತಾಯಿ ಭರವಸೆ ನೀಡಿದ್ದಾನೆ.

ಇದನ್ನೂ ಓದಿ: ED calls Jayaram: ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್‌ಗೆ ಇ.ಡಿ ನೋಟಿಸ್​

ಮಲ್ಲಿ ವರ್ತನೆ ಕಂಡು ಭೂಮಿಕಾಗೆ ಡೌಟ್‌

ಇನ್ನೊಂದು ಕಡೆ ಮಲ್ಲಿ ವರ್ತನೆ ಕಂಡು ಭೂಮಿಕಾಗೆ ಡೌಟ್‌ ಶುರು ಆಗಿದೆ. ಮಲ್ಲಿಗೆ ಇದಾಗಲೇ ಮದುವೆಯಾಗಿರುವುದು ಸುನಿಲ್​ಗೆ ಗೊತ್ತಿದೆ. ಆಕೆ ತನಗಿಂತ ದೊಡ್ಡವಳು ಎನ್ನುವುದೂ ಗೊತ್ತು. ಫೋನ್​ ಬಂದಾಗ ಮಲ್ಲಿ ಕೊಡುವ ರಿಯಾಕ್ಷನ್​ ನೋಡಿ ಅವಳಿಗೆ ಡೌಟ್​ ಬಂದಿತ್ತು. ಮಲ್ಲಿ ಊಟದ ಬ್ಯಾಗ್​ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಕಾಲೇಜ್​ಗೆ ಕೊಡಲು ಬಂದಾಗ, ಆಕೆ ತುಂಬಾ ಕ್ಲಾಸ್​ ಬಂಕ್​ ಮಾಡ್ತಿರೋದು ತಿಳಿದಿದೆ. ಸುನಿಲ್​ ಎನ್ನುವ ಹುಡುಗನ ಜೊತೆ ಆಕೆ ಕಾಣಿಸಿಕೊಳ್ತಿರೋ ಬಗ್ಗೆ ಎಲ್ಲರೂ ಮಾತನಾಡಿಕೊಳ್ತಿದ್ದಾರೆ ಎನ್ನುವುದು ತಿಳಿದಿದೆ. ಅಲ್ಲಿ ಮಲ್ಲಿ ಮತ್ತು ಸುನಿಲ್​ ಮಾತನಾಡುತ್ತಿದ್ದಾರೆ.

ಇದೀಗ ಇದೆಲ್ಲ ಗಮನಿಸಿದ ಭೂಮಿಕಾ ಮುಂದೇನು ನಿರ್ಧಾರ ತೆಗೆದುಕೊಳ್ಳುತ್ತಾಳೆ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ, ಅತ್ತ ಜಯದೇವ್ಗೆ ಸಂಕಷ್ಟ ಎದುರಾಗಿದೆ. ಅವರು ಮಾಡಿದ ಸಾಲದಿಂದ ಸಂಕಷ್ಟ ಬಂದಿದೆ. ಬ್ಯಾಂಕ್ನವರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸೋ ಪರಿಸ್ಥಿತಿ ಬರಬಹುದು.

ಇದನ್ನೂ ಓದಿ: Mayuri Kyatari: ಡಿವೋರ್ಸ್‌ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟಿ ಮಯೂರಿ ಕ್ಯಾತರಿ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ