Aishwarya-Shishir: ನಿಮ್ಮ ಪ್ರೇಮಿನ ಟ್ಯಾಗ್ ಮಾಡಿ ಎಂದು ಬರೆದು ಶಿಶಿರ್ ಜೊತೆ ವಿಡಿಯೋ ಹಂಚಿಕೊಂಡ ಐಶ್ವರ್ಯಾ
ಐಶ್ವರ್ಯಾ ಸಿಂಧೋಗಿ ಒಂದು ಟೆಕ್ಸ್ಟ್ ಜೊತೆ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋದಿಂದ ಇವರಿಬ್ಬರು ಲವ್ವರ್ಸ್ ಎಂಬ ಅನುಮಾನ ಮತ್ತಷ್ಟು ಹೆಚ್ಚಿದೆ. ಐಶ್ವರ್ಯಾ ಮತ್ತು ಶಿಶಿರ್ ಜೊತೆಯಾಗಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

Aishwarya and Shishir

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ (Aishwarya Shindogi) ಹಾಗೂ ಶಿಶಿರ್ ಶಾಸ್ತ್ರೀ ಎಷ್ಟು ಕ್ಲೋಸ್ ಎಂಬುದು ಇಡೀ ಕರ್ನಾಟಕ ಜನತೆಗೆ ತಿಳಿದಿದೆ. ದೊಡ್ಮನೆಯಲ್ಲಿದ್ದಾಗ ಇವರಿಬ್ಬರು ತುಂಬಾ ಆತ್ಮೀಯತೆಯಲ್ಲಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತ ಇರುತ್ತಾರೆ. ಇದೀಗ ಇವರಿಬ್ಬರ ಮತ್ತೊಂದು ಸ್ಪೆಷಲ್ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.
ಐಶ್ವರ್ಯಾ-ಶಿಶಿರ್ ಪ್ರೇಮಿಗಳು ಎಂಬ ಅನುಮಾನ ಎಲ್ಲರಿಗೂ ಇದೆ. ಆದರೆ, ಇವರು ಇದರ ಬಗ್ಗೆ ಕ್ಲಾರಿಫಿಕೇಷನ್ ಕೊಡುತ್ತಿಲ್ಲ. ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ. ಮದುವೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ ಎಂದಿದ್ದಾರೆ.
ಹೀಗಿರುವಾಗ ಐಶ್ವರ್ಯಾ ಒಂದು ಟೆಕ್ಸ್ಟ್ ಜೊತೆ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋದಿಂದ ಇವರಿಬ್ಬರು ಲವ್ವರ್ಸ್ ಎಂಬ ಅನುಮಾನ ಮತ್ತಷ್ಟು ಹೆಚ್ಚಿದೆ. ಐಶ್ವರ್ಯಾ ಮತ್ತು ಶಿಶಿರ್ ಜೊತೆಯಾಗಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ‘‘ನಿಮ್ಮ ಪ್ರೇಮಿನ ಟ್ಯಾಗ್ ಮಾಡಿ’’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಐಶ್ವರ್ಯಾ ಅವರು ಶಿಶಿರ್ ಶಾಸ್ತ್ರೀ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನ ಕಂಡ ಫ್ಯಾನ್ಸ್ ಪಕ್ಕಾ ಇವರಿಬ್ಬರು ಪ್ರೇಮಿಗಳು ಎಂದು ಹೇಳುತ್ತಿದ್ದಾರೆ.
ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ ಇಬ್ಬರೂ ಬ್ಯುಸಿನೆಸ್ ಪಾರ್ಟ್ನರ್ಸ್ ಕೂಡ ಹೌದು. ಇವರು ಇತ್ತೀಚೆಗಷ್ಟೆ ರಾಮನವಮಿ ದಿನ ‘ಹರ ಸ್ಟುಡಿಯೋ’ ಆರಂಭಿಸಿದ್ದರು. ಇದೊಂದು ಪ್ರೊಡಕ್ಷನ್ ಹೌಸ್ ಆಗಿದ್ದು, ಕಾನ್ಸೆಪ್ಟ್ ಶೂಟ್ಸ್, ಪ್ರಿ ವೆಡ್ಡಿಂಗ್ ಫೋಟೋಶೂಟ್, ಜಾಹೀರಾತು, ಪೋರ್ಟ್‌ಫೋಲಿಯೋ ಶೂಟ್ಸ್, ಡೈರೆಕ್ಟರ್, ಕೊರಿಯೋಗ್ರಾಫರ್, ಸ್ಕ್ರಿಪ್ಟ್ ರೈಟರ್, ಮೇಕಪ್ ಆರ್ಟಿಸ್ಟ್, ಹೇರ್‌ಸ್ಟೈಲಿಸ್ಟ್ ಎಲ್ಲರೂ ಇದರ ಮುಖಾಂತರ ಸಿಗುತ್ತಾರೆ.
Sharade Serial: ಶಾರದೆ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಇನ್ಸ್ಪೆಕ್ಟರ್ ವಿಕ್ರಮ್ ಆಗಿ ದಿಲೀಪ್ ಶೆಟ್ಟಿ ಎಂಟ್ರಿ