ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amulya Gowda: ಒಂದೇ ಸೀರಿಯಲ್‌ ಮೂಲಕ ಮತ್ತೆ ಕಮ್‌ಬ್ಯಾಕ್‌ ಆದ್ರು ಅಮೃತಾ- ಅಮೂಲ್ಯ ಗೌಡ! ಪ್ರಸಾರ ಯಾವಾಗಿನಿಂದ?

Mahalakshmi Maduve Serial: ಕಮಲಿ ಧಾರಾವಾಹಿಯಲ್ಲಿ ಕಮಲಿ ಎಂಬ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದ ಅಮೂಲ್ಯ ಗೌಡ ಬಿಗ್ ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿ ಸಾಕಷ್ಟು ಖ್ಯಾತಿ ಗಳಿಸಿದರು. ನಂತರ ‘ಶ್ರೀಗೌರಿ’ ಧಾರಾವಾಹಿಗೂ ಕಾಲಿಟ್ಟರು. ಅಲ್ಲೊಂದಿಷ್ಟು ಸಂಚೆಕೆಗಳು ಕೆಲಸ ಮಾಡಿದರು. ಜೊತೆ ಜೊತೆಗೆ ತೆಲುಗು ಕಿರುತೆರೆಯಲ್ಲಿಯೂ ಕೆಲಸ ಮಾಡಿದ್ದರು. ಈಗ ಮತ್ತೆ ಹೊಸ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗ್ತಿದ್ದಾರೆ.

ಒಂದೇ ಸೀರಿಯಲ್‌ ಮೂಲಕ ಮತ್ತೆ ಕಮ್‌ಬ್ಯಾಕ್‌ ಆದ್ರು ಅಮೃತಾ- ಅಮೂಲ್ಯ ಗೌಡ

ಅಮೃತಾ ಅಮೂಲ್ಯ -

Yashaswi Devadiga
Yashaswi Devadiga Mar 26, 2026 9:57 AM

ಕಮಲಿ ಧಾರಾವಾಹಿಯಲ್ಲಿ (Kamali Serial) ಕಮಲಿ ಎಂಬ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದ ಅಮೂಲ್ಯ ಗೌಡ (Amulya Gowda) ಬಿಗ್ ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿ ಸಾಕಷ್ಟು ಖ್ಯಾತಿ ಗಳಿಸಿದರು. ನಂತರ ‘ಶ್ರೀಗೌರಿ’ ಧಾರಾವಾಹಿಗೂ ಕಾಲಿಟ್ಟರು. ಅಲ್ಲೊಂದಿಷ್ಟು ಸಂಚೆಕೆಗಳು ಕೆಲಸ ಮಾಡಿದರು. ಜೊತೆ ಜೊತೆಗೆ ತೆಲುಗು (Telugu Serial) ಕಿರುತೆರೆಯಲ್ಲಿಯೂ ಕೆಲಸ ಮಾಡಿದ್ದರು. ಈಗ ಮತ್ತೆ ಹೊಸ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗ್ತಿದ್ದಾರೆ.

ಮಹಾಲಕ್ಷ್ಮಿ ಧಾರಾವಾಹಿ

ಸನ್‌ ಉದಯ ಟಿವಿ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಮೂಡಿಬರುತ್ತಿವೆ. ‘ಮಹಾಲಕ್ಷ್ಮಿ ಮದುವೆಎಂಬ ಧಾರಾವಾಹಿಗೆ ನಾಯಕಿ ಆಗಿದ್ದಾರೆ ನಟಿ ಅಮೂಲ್ಯ ಓಂಕಾರ್ ಗೌಡ. ಅದೇ ರೀತಿ ಅಮೃತಾ ರಾಮಮೂರ್ತಿ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರಿಗೂ ದೊಡ್ಡ ಫ್ಯಾನ್ ಬೇಸ್​ ಇದೆ. ಅಮೃತಾ ಕೂಡ ಈ ಧಾರಾವಾಹಿಯಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: Darling Krishna: ಡಾರ್ಲಿಂಗ್ ಕೃಷ್ಣರಿಂದ ವೈಯಕ್ತಿಕ ತೇಜೋವಧೆ! ಆ ಪದ ಬಳಸಿದ್ದಕ್ಕೆ ಗುರು ದೇಶಪಾಂಡೆ ಗರಂ

ಏನಿದು ಧಾರಾವಾಹಿ ಕಥೆ?

ತವರಿಗಾಗಿ ಸದಾ ನಿಲ್ಲುವ ನಾಯಕಿ ಕಥೆ. ಮಗಳಿಗೆ ಮದುವೆ ಮಾಡಲು ಅಮ್ಮ ಹರಸಾಹಸ ಪಡುತ್ತಿದ್ದಾರೆ. ಆದರೆ ಮಹಾಲಕ್ಷ್ಮಿಗೆ ಒಂದೇ ಕಂಡಿಷನ್‌, ಮದುವೆ ನಂತರ ತನ್ನ ಸ್ಯಾಲರಿ ಅಮ್ಮನ ಕೈ ಸೇರುತ್ತೆ ಅನ್ನೋದು. ಆದರೆ ಇದಕ್ಕೆ ಕೊಂಕಾಡುವ ಗಂಡಿನ ಕಡೆಯವರು, ಮದುವೆಯನ್ನ ರಿಜೆಕ್ಟ್ ಮಾಡುತ್ತಾರೆ ತನ್ನ ಸಂಬಳ ಅಮ್ಮನಿಗೆ ಸೇರಿದ್ದು ಅನ್ನೋದನ್ನ ಬಲವಾದ ನಿರ್ಧಾರ ಮಾಡಿದ್ದಾಳೆ. ಇದಕ್ಕೆ ಸಾಥ್‌ ಕೊಡುವ ಗಂಡು ಯಾರು ಅನ್ನೋದೇ ಒನ್‌ ಲೈನ್‌ ಸ್ಟೋರಿ.

'ಕಮಲಿ ಧಾರಾವಾಹಿ ಮೂಲಕ ನಟಿ ಅಮೂಲ್ಯ ಓಂಕಾರ್‌ ಗೌಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. . ನಂತರ ‘ಶ್ರೀಗೌರಿ’ ಸಿಕ್ಕಿತು. ನಟ ಜಗನ್‌ ನಿರ್ಮಾಣ ಮಾಡಿದ್ದ ಈ ಧಾರಾವಾಹಿ ಕಲರ್ಸ್‌ ಕನ್ನಡಲ್ಲಿಯೇ ಮೂಡಿಬಂದಿತ್ತು. ‘ಸ್ವಾತಿ ಮುತ್ತು’, ‘ಪುನರ್‌ ವಿವಾಹ’, ‘ಅರಮನೆ’ ಮುಂತಾದ ಧಾರಾವಾಹಿಗಳಲ್ಲಿ ತಮ್ಮ ಅಭಿನಯದ ಪ್ರಾರಂಭದ ದಿನಗಳಲ್ಲಿ ನಟಿಸಿದ್ದಾರೆ.ಸ್ಟಾರ್‌ ಮಾ ವಾಹಿನಿಯ ‘ಕಾರ್ತಿಕ ದೀಪಂ’, ‘ಗುಂಡೇನಿಂದ ಗುಡಿಗಂಟಲು’, ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Varanasi Set Pics Unveiled: ʻವಾರಣಾಸಿʼ ಸೆಟ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ! ರಾಜಮೌಳಿ ಸಿನಿಮಾ ಫೋಟೊ ಲೀಕ್

ಅಮೃತಾ ಕೂಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಉದಯದಲ್ಲಿ ಪ್ರಸಾರ ಆಗಲಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ‘ಕುಲವಧು’, ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಮೊದಲಾದ ಸೀರಿಯಲ್​​​ನಲ್ಲಿ ನಟಿಸಿದರು. ಕೆಲ ಸಮಯ ‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಹೆಸರಿನ ಪಾತ್ರ ಮಾಡಿದರು.