ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BalaKrishna Bigg Boss: ವಿಜಯ್ ದೇವರಕೊಂಡ ಅಲ್ಲ: ಬಿಗ್ ಬಾಸ್ ತೆಲುಗಿಗೆ ಬಾಲಯ್ಯ ನಿರೂಪಕ

2017ರಲ್ಲಿ ಬಿಗ್‌ ಬಾಸ್‌ ತೆಲುಗು ಮೊದಲ ಸೀಸನ್‌ ಆರಂಭವಾಗಿತ್ತು. ಜೂ. ಎನ್‌ಟಿಆರ್‌ ಫಸ್ಟ್‌ ಸೀಸನ್‌ ನಡೆಸಿಕೊಟ್ಟಿದ್ದರು. ಎರಡನೇ ಸೀಸನ್‌ನಲ್ಲಿ ನಾನಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಮೂರನೇ ಸೀಸನ್‌ನಿಂದ ನಾಗರ್ಜುನ್‌ ಶೋ ನಡೆಸಿಕೊಟ್ಟಿದ್ದರು. ಮುಂದಿನ ಸೀಸನ್‌ಗೆ ನಾಗಾರ್ಜುನ ಬದಲಿಗೆ ಹೊಸ ಹೆಸರು ಕೇಳಿ ಬಂದಿದೆ.

ವಿಜಯ್ ದೇವರಕೊಂಡ ಅಲ್ಲ- ಬಿಗ್ ಬಾಸ್ ತೆಲುಗಿಗೆ ಬಾಲಯ್ಯ ನಿರೂಪಕ

Bigg Boss Telugu

Profile Vinay Bhat Apr 9, 2025 7:25 AM

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ತೆಲುಗು (Bigg Boss Telugu) ಭಾಷೆಯ ಮುಂಬರುವ ಒಂಬತ್ತನೇ ಸೀಸನ್‌ನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ಹಿಂದೆ ಇದ್ದ ನಿರೂಪಕ ಬದಲಾಗಲಿದ್ದು, ಯುವ ತಾರೆಯೊಬ್ಬರು ಅವರ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಮುಂದಿನ ಸೀಸನ್‌ಗೆ ನಾಗಾರ್ಜುನ ಬದಲಿಗೆ ನಟ ವಿಜಯ್ ದೇವರಕೊಂಡ ಅವರು ನಿರೂಪಕರಾಗಿ ಆಯ್ಕೆಯಾಗಲು ಮಾತುಕತೆ ನಡೆದಿದೆ ಎನ್ನಲಾಗಿತ್ತು. ಆದರೀಗ ಬಂದಿರುವ ಮತ್ತೊಂದು ಮಾಹಿತಿಯ ಪ್ರಕಾರ ಬಿಗ್ ಬಾಸ್ ತೆಲುಗು ಹೊಸ ನಿರೂಪಕ ದೇವರಕೊಂಡ ಅಲ್ವಂತೆ, ಬದಲಾಗಿ ಬಾಲಯ್ಯ ನಡೆಸಿಕೊಡಲಿದ್ದಾರೆ.

2017ರಲ್ಲಿ ಬಿಗ್‌ ಬಾಸ್‌ ತೆಲುಗು ಮೊದಲ ಸೀಸನ್‌ ಆರಂಭವಾಗಿತ್ತು. ಜೂ. ಎನ್‌ಟಿಆರ್‌ ಫಸ್ಟ್‌ ಸೀಸನ್‌ ನಡೆಸಿಕೊಟ್ಟಿದ್ದರು. ಎರಡನೇ ಸೀಸನ್‌ನಲ್ಲಿ ನಾನಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಮೂರನೇ ಸೀಸನ್‌ನಿಂದ ನಾಗರ್ಜುನ್‌ ಶೋ ನಡೆಸಿಕೊಟ್ಟಿದ್ದರು. ಸಿನಿಮಾ ಸೇರಿದಂತೆ ಇತರ ಕಾರಣಗಳಿಂದ ಮುಂದಿನ ಬಿಗ್ ಬಾಸ್ ಶೋ ನಿರೂಪಕಣೆ ಮಾಡಲು ನಾಗಾರ್ಜುನಗೆ ಸಾಧ್ಯವಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

ನಾಗಾರ್ಜುನ್ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ವಿಜಯ ದೇವರಕೊಂಡ ಜೊತೆ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿದೆ ಎಂದು ವರದಿಯಾಗಿತ್ತು. ಆದರೀಗ ಬಿಗ್ ಬಾಸ್ ಕಾರ್ಯಕ್ರಮವನ್ನು ಈ ಬಾರಿ ಬಾಲಯ್ಯ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಸದ್ಯ ಆಂಧ್ರದಲ್ಲಿ ಹರಿದಾಡುತ್ತಿದೆ. ಇನ್ನು ಬಾಲಯ್ಯ ಈಗಾಗಲೇ ಅನ್‌ಸ್ಟಾಪೆಬಲ್ ವಿತ್ ಎನ್‌ಬಿಕೆ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ತಮ್ಮ ಮಾತು, ಹಾವ, ಭಾವದಿಂದ ತೆಲುಗು ನಾಡಿನ ಪ್ರೇಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ.

Vinay Gowda: ಜೈಲಲ್ಲಿದ್ದಾಗ ಸುದೀಪ್ ಸರ್ ಕರೆ ಮಾಡಿ..: ಕಿಚ್ಚನ ಋಣ ಮರೆಯಲ್ಲ ಎಂದ ವಿನಯ್ ಗೌಡ

ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಾಲಯ್ಯ ಅವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಿಗ್ ಬಾಸ್ ಆಯೋಜಕರು ಬಂದಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಬಾಲಯ್ಯ ಬಿಗ್‌ ಬಾಸ್‌ ಶೋ ಮಾಡಲು ಒಪ್ಪಿದರೆ, ತೆಲುಗು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗೋದು ಪಕ್ಕಾ. ಇದೇ ವರ್ಷದ ಸೆಪ್ಟೆಂಬರ್ ನಲ್ಲಿ ಬಿಗ್‌ ಬಾಸ್‌ ತೆಲುಗು -9 ಆರಂಭಗೊಳ್ಳುವ ಸಾಧ್ಯತೆಯಿದೆ.

ಏತನ್ಮಧ್ಯೆ, ಸೀಸನ್ 9 ರ ಸ್ಪರ್ಧಿಗಳ ಬಗ್ಗೆ ಈಗಾಗಲೇ ಹಲವಾರು ಹೆಸರುಗಳು ಬಹಿರಂಗಗೊಂಡಿವೆ. ಹೊಸ ಸ್ಪರ್ಧಿಗಳ ಜೊತೆಗೆ, ಹಲವಾರು ಮಾಜಿ ಸ್ಪರ್ಧಿಗಳು ಸಹ ಸೀಸನ್ 9 ರಲ್ಲಿ ಸದ್ದು ಮಾಡಲಿದ್ದಾರೆ ಎಂದು ಹೇಳಲಾಗಿದೆ. ಧಾರಾವಾಹಿ ಖ್ಯಾತಿಯ ಕಾವ್ಯಾ, ತೇಜಸ್ವಿನಿ, ದೇವ್ ಜಾನಿ, ಶಿವಕುಮಾರ್, ರಿತು ಚೌಧರಿ ಮತ್ತು ಮಾಜಿ ಸ್ಪರ್ಧಿ ಸೋನಿಯಾ ಕೂಡ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.