BBK 11 Final: ಮೀಸಲಾತಿಯಿಂದಲೇ ಹನುಮಂತ ಫಿನಾಲೆ ಎಂಟ್ರಿ... ವಿವಾದಾತ್ಮಕ ಹೇಳಿಕೆನೀಡಿದ ನಟಿ ಹಂಸ ಫುಲ್ ಟ್ರೋಲ್
ಬಿಗ್‌ಬಾಸ್‌ನ ಇದೇ ಸೀಸನ್‌ನ ಸ್ಪರ್ಧಿ ನಟಿ ಹಂಸ ಹನುಮಂತು ಬಗ್ಗೆ ನೀಡಿರುವ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಅವರ ಹೇಳಿಕೆಗೆ ನೆಟ್ಟಿಗರು ಗರಂ ಆಗಿದ್ದು, ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ. ಕೊನೆಗೆ ನಟಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿರುವ ಪ್ರಸಂಗ ನಡೆದಿದೆ.

BBK 11

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11(BBK 11 Final) ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈ ಸೀಸನ್‌ನ ವಿನ್ನರ್ ಯಾರಾಗಲಿದ್ದಾರೆ? ಬಿಗ್‌ಬಾಸ್ ಟ್ರೋಫಿ ಯಾರ ಮುಡಿಗೇರಲಿದೆ ಎಂಬ ಬಗ್ಗೆ ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಮನೆಯಲ್ಲಿ ಉಳಿದಿರುವ ಹನುಮಂತು, ಮಂಜು, ಮೋಕ್ಷಿತಾ, ತ್ರಿವಿಕ್ರಮ್ ಹಾಗೂ ರಜತ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ದೊಡ್ಮನೆಗೆ ಕಾಲಿಟ್ಟು ಹವಾ ಮೂಡಿಸಿರುವ ಹನುಮಂತನೇ ಗೆಲ್ಲಲಿದ್ದಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ನಡುವೆ ಬಿಗ್‌ಬಾಸ್‌ನ ಇದೇ ಸೀಸನ್‌ನ ಸ್ಪರ್ಧಿ ನಟಿ ಹಂಸ ಹನುಮಂತು ಬಗ್ಗೆ ನೀಡಿರುವ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಅವರ ಹೇಳಿಕೆಗೆ ನೆಟ್ಟಿಗರು ಗರಂ ಆಗಿದ್ದು, ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ. ಕೊನೆಗೆ ನಟಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿರುವ ಪ್ರಸಂಗ ನಡೆದಿದೆ.
ಹಂಸ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಹನುಮಂತ ಫಿನಾಲೆ ಎಂಟ್ರಿ ಬಗ್ಗೆ ಮಾತನಾಡಿದ್ದು, ಹನುಮಂತನ ಬಿಗ್ ಬಾಸ್ ಜರ್ನಿಯನ್ನು ಮೀಸಲಾತಿ ವ್ಯವಸ್ಥೆಗೆ ಹೋಲಿಕೆ ಮಾಡಿದ್ದಾರೆ. ಹನುಮಂತು ಫಿನಾಲೆ ಎಂಟ್ರಿ ಮೀಸಲಾತಿಗೆ ಸಿಕ್ಕ ಗಿಫ್ಟ್ ಇದ್ದಂತೆ ಎಂಬಂತೆ ನಟಿ ಹಂಸ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ಹಂಸ, ನಾನು ಬಿಗ್ಬಾಸ್ ಮನೆಯಲ್ಲಿದ್ದಾಗ ಧನರಾಜ್ ಮತ್ತು ಹನುಮಂತು ಇಬ್ರು ಯಾವುದೋ ಮೂಲೆಯಲ್ಲಿ ಕೂರ್ತಿದ್ರು. ಯಾರ ಜೊತೆ ಕೂಡ ಸರಿಯಾಗಿ ಬೆರೆಯುತ್ತಿರಲಿಲ್ಲ. ಟಾಸ್ಕ್ನಲ್ಲಿ ಸಹ ಅಷ್ಟಕ್ಕಷ್ಟೆ ಎಂಬಂತಿದ್ರು ಎಂದು ಹಂಸ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kiccha Sudeep: ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಅಧಿಕೃತ ವಿದಾಯ; ಈ ಬಾರಿಯ ಫಿನಾಲೆಯೇ ಕೊನೆಯ ನಿರೂಪಣೆ
ಹನುಮಂತ ತಮ್ಮ ಲೋಕದಲ್ಲಿದ್ರು ಸದಾ ಎಲ್ಲೋ ಕಳೆದು ಹೋಗಿರುತ್ತಿದ್ದರು. ಆದರೆ ಈಗ ಹನುಮಂತು ಫಿನಾಲೆಗೆ ಬಂದಿದ್ದಾರೆ. ಸೈಲೆಂಟ್ ಆಗಿ ಇದ್ದುಕೊಂಡೇ ಅವರು ಇಲ್ಲಿವರೆಗೆ ಬಂದಿದ್ದಾರೆ, ಆತ ಅದೃಷ್ಟವಂತ. ಯಾವುದೇ ರಿಯಾಲಿಟಿ ಶೋ ಆದ್ರೂ ಈ ರೀತಿ ಆಗುತ್ತೆ. ಬಡವರು, ಹಳ್ಳಿಯಿಂದ ಬಂದಿರುವವರು ಸುಲಭವಾಗಿ ಫಿನಾಲೆವರೆಗೂ ಹೋಗುತ್ತಾರೆ ಎಂದು ಹಂಸ ಹೇಳಿಕೆ ನೀಡಿದ್ದರು. ಈ ಸಂದರ್ಶನ ಪ್ರಸಾರ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಂಸ ಅವರು ಫುಲ್ ಟ್ರೋಲ್ ಆಗಿದ್ದರು.
ವಿವಾದದ ಬೆನ್ನಲ್ಲೇ ಕ್ಷಮೆ
ಇನ್ನು ಟ್ರೋಲ್ ಆಗುತ್ತಿದ್ದಂತೆ ಹಂಸ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ನಮಸ್ತೆ, ನಾನು ನಿಮ್ಮ ಹಂಸ ನಾರಾಯಣ ಸ್ವಾಮಿ. ನಾನು ಒಂದು ಚಾನೆಲ್ನಲ್ಲಿ ಕೊಟ್ಟ ಇಂಟರ್ವ್ಯೂನಲ್ಲಿ ಒಂದು ಸ್ಟೇಟ್ಮೆಂಟ್ ತುಂಬಾ ಕಾಂಟ್ರವರ್ಶಿಯಲ್ ಆಗಿ ತಿರುವನ್ನು ಪಡೆದುಕೊಂಡಿದೆ. ಖಂಡಿತವಾಗ್ಲೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ ಎಂದಿದ್ದಾರೆ. ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡ್ತಿದ್ದಾರೆ. ನಾನು ನಿಮ್ಮಲ್ಲಿ ಕೇಳ್ಕೊಳ್ತಿರೋದು ಅಷ್ಟೆ. ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದ್ಯೋ ಅವರೆಲ್ಲರ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನ ಕ್ಷಮಿಸಿ ಎಂದು ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ.