Anusha Rai-Trivikram: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನುಷಾ ರೈ-ತ್ರಿವಿಕ್ರಮ್: ಹಗ್ ಮಾಡುತ್ತಿರುವ ವಿಡಿಯೋ ವೈರಲ್
ಬಂದ ಕೂಡಲೇ ತ್ರಿವಿಕ್ರಮ್ ಅವರನ್ನು ಹಗ್ ಮಾಡಿದ ಅನುಷಾ ರೈ ಇಬ್ಬರೂ ಕೆಲಹೊತ್ತು ಮಾತನಾಡಿದರು. ಇವರಿಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ತ್ರಿವಿಕ್ರಮ್-ಅನುಷಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.
![ಅನುಷಾ ರೈ-ತ್ರಿವಿಕ್ರಮ್ ಹಗ್ ಮಾಡುತ್ತಿರುವ ವಿಡಿಯೋ ವೈರಲ್](https://cdn-vishwavani-prod.hindverse.com/media/original_images/Trivikram_and_Anusha_Rai_1.jpg)
Trivikram and Anusha Rai
![Profile](https://vishwavani.news/static/img/user.png)
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಸ್ಪರ್ಧಿಗಳು ಶೋ ಮುಗಿದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದರೆ ಇನ್ನೂ ಕೆಲವರು ಕೆಲ ಸಮಾರಂಭದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಬಿಬಿಕೆ 11 ವಿನ್ನರ್ ಹನುಮಂತ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಇದೀಗ ಅನುಷಾ ರೈ ಹಾಗೂ ತ್ರಿವಿಕ್ರಮ್ ಜೊತೆಯಾಗಿ ಪ್ರೊಗ್ರಾಂ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಹೊಸ ಸಿನಿಮಾ ಒಂದು ತೆರೆಗೆ ಬರಲು ಸಜ್ಜಾಗಿದೆ, ಅದುವೇ ಭುವನಂ ಗಗನಂ. ಪ್ರಮೋದ್ ಹಾಗೂ ಪೃಥ್ವಿ ಅಂಬಾರ್ ನಟನೆಯ ಭುವನಂ ಗಗನಂ ಚಿತ್ರ ಇದೇ ಫೆಬ್ರವರಿ 14ಕ್ಕೆ ಅಂದರೆ ಪ್ರೇಮಿಗಳ ದಿನ ತೆರೆ ಕಾಣಲಿದೆ. ಇದೀಗ ಚಿತ್ರದ ಪ್ರೇಸ್ಪೀಟ್ ನಡೆದಿದ್ದು ಬಿಗ್ ಬಾಸ್ ಸ್ಪರ್ಧಿಗಳಾಗ ತ್ರಿವಿಕ್ರಮ್ ಮತ್ತು ಅನುಷಾ ಸೇರಿ ಚಿತ್ರತಂಡ ಹಾಗೂ ಇನ್ನಿತರ ಅತಿಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ತ್ರಿವಿಕ್ರಮ್-ಅನುಷಾ ಪ್ರಮುಖ ಹೈಲೇಟ್ ಆದರು.
ಬಂದ ಕೂಡಲೇ ತ್ರಿವಿಕ್ರಮ್ ಅವರನ್ನು ಹಗ್ ಮಾಡಿದ ಅನುಷಾ ಇಬ್ಬರೂ ಕೆಲಹೊತ್ತು ಮಾತನಾಡಿದರು. ಇವರಿಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ (video credit: digital cini adda And namma kfi). ಅಂದಹಾಗೆ ತ್ರಿವಿಕ್ರಮ್-ಅನುಷಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರವಷ್ಟೆ ತ್ರಿವಿಕ್ರಮ್ ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ರೋಡ್ ಶೋ ಮಾಡಿದ್ದರು. ಈ ಸಂದರ್ಭ ತ್ರಿವಿಕ್ರಮ್ ಜೊತೆ ಅನುಷಾ ಹಾಗೂ ಭವ್ಯಾ ಕೂಡ ಕಾಣಿಸಿಕೊಂಡಿದ್ದರು.
ಅನುಷಾ ರೈ ತುಮಕೂರಿನ ಗುಬ್ಬಿಯವರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ತ್ರಿವಿಕ್ರಮ್ ಕೂಡ ತುಮಕೂರಿನ ಗುಬ್ಬಿಯವರೇ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಈ ವಿಚಾರವನ್ನು ರಿವೀಲ್ ಮಾಡಿದ್ದು ಅನುಷಾ ರೈ. ತ್ರಿವಿಕ್ರಮ್ ಹಾಗೂ ಅನುಷಾ ರೈ ಅವರು ಒಂದೇ ಊರಿನವರಾಗಿದ್ದಾರೆ. ಇಷ್ಟೇ ಅಲ್ಲ ಇವರಿಬ್ಬರು ಒಂದೇ ಶಾಲೆ ಹಾಗೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರಂತೆ. ಅಷ್ಟೇ ಅಲ್ಲ ತ್ರಿವಿಕ್ರಮ್ ಸೀನಿಯರ್ ಆಗಿದ್ದು, ಅನುಷಾ ರೈ ಜೂನಿಯರ್ ಆಗಿದ್ದರಂತೆ. ಈ ಬಗ್ಗೆ ಖುದ್ದು ಅನುಷಾ ರೈ ಅವರೇ ತಮ್ಮ ಯ್ಯೂಟೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ತ್ರಿವಿಕ್ರಮ್-ಅನುಷಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಭುವನಂ ಗಗನಂ ಚಿತ್ರದ ಬಗ್ಗೆ ಹೇಳುವುದಾದರೆ, ಇದರ ಟ್ರೇಲರ್ ಫೆ. 9ರಂದು ಬಿಡುಗಡೆಯಾಗಿದೆ, ಚಿತ್ರ ಫೆಬ್ರವರಿ 14ಕ್ಕೆ ತೆರೆ ಕಾಣಲಿದೆ. ಎಸ್‌ವಿಸಿ ಫಿಲಂಸ್ ಬ್ಯಾನರ್‌ನಡಿ ಎಂ. ಮುನೇಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು, ನಿರ್ದೇಶನವನ್ನೂ ಮಾಡಿದ್ದಾರೆ. ಇದೊಂದು ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದೆ. ಪ್ರಮೋದ್ ಹಾಗೂ ಪೃಥ್ವಿ ಅವರ ಟ್ರ್ಯಾಕ್‌ಗಳು ಬೇರೆ ಬೇರೆಯಾಗಿ ಸಾಗುತ್ತಾ ಬಂದು ಒಂದು ಹಂತದಲ್ಲಿ ಜೊತೆಯಾಗುತ್ತದಂತೆ. ಪ್ರಮೋದ್ ಜೋಡಿಯಾಗಿ ರಚೆಲ್ ಡೇವಿಡ್ ಹಾಗೂ ಪೃಥ್ವಿ ಅಂಬರ್‌ಗೆ ಜೋಡಿಯಾಗಿ ಅಶ್ವಥಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಹರಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Rajath Kishan, BBK 11: ಸುದೀಪ್-ದರ್ಶನ್ ಒಂದಾದ್ರೆ ತಿರುಪತಿಗೆ ಹೋಗಿ ತಲೆ ಬೋಳಿಸ್ತೀನಿ ಎಂದ ರಜತ್