ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಬದಲಾಗದ ಶ್ರೇಷ್ಠಾ-ತಾಂಡವ್: ಭಾಗ್ಯ ಫುಡ್ ಬ್ಯುಸಿನೆಸ್ ಮುಚ್ಚೋಕೆ ಹೊಸ ಪ್ಲ್ಯಾನ್

ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಕೂಡ ಜೊತೆಯಾಗಿದ್ದಾಳೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್-ಕನ್ನಿಕಾ ಕಣ್ಣು ಹಾಕಿದ್ದಾರೆ.

ಬದಲಾಗದ ಶ್ರೇಷ್ಠಾ-ತಾಂಡವ್: ಭಾಗ್ಯಾಳನ್ನು ಸೋಲಿಸಲು ಹೊಸ ಪ್ಲ್ಯಾನ್

Bhagya Lakshmi Serial

Profile Vinay Bhat Apr 11, 2025 12:30 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಕೆಡುಕು ಬಯಸಲು ತಾಂಡವ್ ಹಾಗೂ ಶ್ರೇಷ್ಠಾ ನಾನಾ ಪ್ರಯುತ್ನ ಮಾಡುತ್ತಿದ್ದಾರೆ. ಆದರೆ, ಈ ವರೆಗೆ ಇವರು ಮಾಡಿರುವ ಯಾವ ಪ್ಲ್ಯಾನ್ ಕೂಡ ಯಶಸ್ಸು ಕಂಡಿಲ್ಲ. ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಈಗ ಭಾಗ್ಯಾಗೆ ಇವರಿಬ್ಬರ ಕಡೆಯಿಂದ ಮತ್ತೊಂದು ದೊಡ್ಡ ಗಂಡಾಂತರ ಬರುವುದರಲ್ಲಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಕೂಡ ಜೊತೆಯಾಗಿದ್ದಾಳೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್-ಕನ್ನಿಕಾ ಕಣ್ಣು ಹಾಕಿದ್ದಾರೆ.

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದಾರೆ. ಒಂದು ಪ್ಲ್ಯಾನ್ ಫ್ಲಾಫ್ ಆದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡುತ್ತಿದ್ದಾರೆ. ಭಾಗ್ಯ ತನ್ನ ಕೆನ್ನೆಗೆ ಮನಬಂದಂತೆ ಬಾರಿಸಿದ್ದು ಶ್ರೇಷ್ಠಾಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿನ್ನೆ ಶ್ರೇಷ್ಠಾ ತನ್ನ ಗೆಳತಿಯ ಸಹಾಯ ಪಡೆದು 200 ಜನಕ್ಕೆ ಊಟಕ್ಕೆ ರೆಡಿ ಮಾಡಬೇಕು ಎಂದು ಭಾಗ್ಯಾಗೆ ಕರೆ ಮಾಡಿ ಹೇಳು ಎಂದಿದ್ದಳು. ಇದನ್ನು ನಂಬಿ ಭಾಗ್ಯಾ ಊಟ ತಯಾರು ಮಾಡಿ ಲೊಕೇಷನ್​ಗೆ ಬಂದಿದ್ದಳು.

ಆದರೆ, ಇಲ್ಲಿ ಭಾಗ್ಯಾಗೆ ನಿಜಾಂಶ ಗೊತ್ತಾಗಿದೆ. ನಿಜ ತಿಳಿದು ಭಾಗ್ಯ ನೇರವಾಗಿ ಶ್ರೇಷ್ಠಾ ಮನೆಗೆ ಹೋಗುತ್ತಾಳೆ. ಶ್ರೇಷ್ಠಾಳನ್ನು ಕರೆದ ಭಾಗ್ಯ, ಏ ಮನೆಹಾಳಿ.. ನನ್ನ ಜೀವನದಲ್ಲಿ ಇನ್ನು ಏನೆಲ್ಲ ಆಟ ಆಡಬೇಕು ಅಂತ ಅಂದುಕೊಂಡಿದ್ದೀಯಾ ಎಂದು ಹೇಳಿ ರಪರಪನೆ ಮನಬಂದಂತೆ ಕೆನ್ನೆಗೆ ಬಾರಿಸುತ್ತಾಳೆ. ಶ್ರೇಷ್ಠಾಗೆ ಖಡಕ್ ವಾರ್ನ್ ಮಾಡಿ ಅವಳಿಂದಳೇ ಊಟದ ದುಡ್ಡನ್ನು ವಸೂಲಿ ಮಾಡಿಕೊಂಡು ಹೊರಡುತ್ತಾಳೆ. ಇದರಿಂದ ಶ್ರೇಷ್ಠಾಗೆ ಭಾರೀ ಅವಮಾನ ಆಗಿದೆ. ಇದಕ್ಕಾಗಿ ಮತ್ತೆ ಕನ್ನಿಕಾಳ ಮೊರೆ ಹೋಗಿದ್ದಾರೆ.



ಹೋಟೆಲ್ ಒಂದರಲ್ಲಿ ಶ್ರೇಷ್ಠಾ-ತಾಂಡವ್ ಹಾಗೂ ಕನ್ನಿಕಾ ಭೇಟಿ ಆಗಿದ್ದಾರೆ. ಭಾಗ್ಯ ನನಗೆ ಯಾವ ರೀತಿ ಶತ್ರುವೊ ನಿನಗೆ ಕೂಡ ಅದೇರೀತಿ ಶತ್ರು ಎಂದು ಕನ್ನಿಕಾಳನ್ನು ಪ್ಯಾಂಪರ್ ಮಾಡಿದ್ದಾನೆ ತಾಂಡವ್. ಅವಳು ಯಾವುದೋ ಫುಡ್ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ದಾಳೆ.. ನಾಳೆ ಒಂದು ದಿನ ದುಡ್ಡು ದುಡಿಯೋಕೆ ಶುರು ಮಾಡಿದ್ರೆ ನಿನ್ನ ಕೂಡ ಸುಮ್ಮನೆ ಬಿಡಲ್ಲ.. ಅದಕ್ಕೆ ಏನಾದ್ರು ಒಂದು ಮಾಡ್ಲೇ ಬೇಕು ಎಂದು ಹೇಳಿದ್ದಾನೆ. ಇದನ್ನ ಕೇಳಿದ ಕನ್ನಿಕಾ, ಅದಕ್ಕೆ ಏನು ಮಾಡ್ಬೇಕು?, ನೀವಿಬ್ಬರು ಸೇರ್ಕೊಂಡು ಅದೇರೀತಿ ಬ್ಯುಸಿನೆಸ್ ಸ್ಟಾರ್ಟ್ ಮಾಡ್ತೀರಾ?, ಅದಕ್ಕೆ ನನ್ನ ಸಹಾಯ ಬೇಕಾ? ಎಂದು ಕೇಳುತ್ತಾಳೆ.

ಇದರಿಂದ ಕೋಪಗೊಂಡ ತಾಂಡವ್, ನಿನ್ನಿಂದ ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡೋಕೆ ಹೆಲ್ಫ್ ಬೇಡ.. ಅವ್ಳು ಸ್ಟಾರ್ಟ್ ಮಾಡಿದ್ದಾಳೆ ಅಲ್ವಾ ಬ್ಯುಸಿನೆಸ್ ಅದನ್ನ ಸ್ಟಾಪ್ ಮಾಡ್ಬೇಕು ಎಂದು ಹೇಳಿದ್ದಾನೆ. ಆಗ ಕನ್ನಿಕಾ, ಈಗೇನು ಭಾಗ್ಯಾಳ ಬ್ಯುಸಿನೆಸ್ ನಡಿಬಾರದು, ಅವಳು ಬೀದಿಗೆ ಬರಬೇಕು ಅಲ್ವಾ.. ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ.. ಇನ್ಮುಂದೆ ಭಾಗ್ಯ ಫುಡ್ ಬ್ಯುಸಿನೆಸ್ ನಡಿಯಲ್ಲ ಎಂದು ಹೇಳುತ್ತಾಳೆ. ಕನ್ನಿಕಾಳ ಮಾತು ಕೇಳಿ ಶ್ರೇಷ್ಠಾ-ತಾಂಡವ್​ಗೆ ಖುಷಿ ಆಗುತ್ತದೆ. ಸದ್ಯ ಭಾಗ್ಯಾಳ ಕೈತುತ್ತನ್ನು ಇವರು ಹೇಗೆ ನಿಲ್ಲಿಸುತ್ತಾರೆ?, ಭಾಗ್ಯ ಇದನ್ನು ಹೇಗೆ ನಿಭಾಯಿಸುತ್ತಾಳೆ? ಎಂಬುದನ್ನು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Lakshmi Baramma: ಲಕ್ಷ್ಮೀ ಬಾರಮ್ಮ ಕೊನೆಯ ಎಪಿಸೋಡ್​ನಲ್ಲಿ ಬಿಗ್ ಟ್ವಿಸ್ಟ್; ಬೆಟ್ಟದಿಂದ ಬಿದ್ದು ಕಾವೇರಿ ಸಾವು