ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಒಂದು ವಾರ ಮಿಡಲ್ ಕ್ಲಾಸ್ ಜೀವನ: ಭಾಗ್ಯ ಮನೆಗೆ ಬಂದು ಚಾಲೆಂಜ್ ಶುರುಮಾಡಿದ ಆದೀಶ್ವರ್

ಭಾಗ್ಯಾಳ ಎಲ್ಲ ಮಾತಿಗೆ ಒಪ್ಪಿ ಮರುದಿನ ಆದೀಶ್ವರ್ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ಇಲ್ಲುಕೂಡ ಭಾಗ್ಯ ಖಡಕ್ ಆಗಿ ಮಾತನಾಡಿದ್ದಾಳೆ. ಮನೆಯ ಕೆಲಸ ಎಲ್ಲ ನೀವೇ ಮಾಡಬೇಕು.. ಒಂದು ವಾರಕ್ಕೆ ಮೂರು ಶರ್ಟ್, ಎರಡು ಪ್ಯಾಂಟ್ ಅಷ್ಟೇ ಉಪಯೋಗಿಸಬೇಕು.. ದಿನಕ್ಕೆ 150 ರೂಪಾಯಿ ಅಷ್ಟೇ ಖರ್ಚು ಮಾಡಬೇಕು ಎಂದಿದ್ದಾಳೆ.

ಭಾಗ್ಯ ಮನೆಗೆ ಬಂದು ಚಾಲೆಂಜ್ ಶುರುಮಾಡಿದ ಆದೀಶ್ವರ್

Bhagya Lakshmi Serial

Profile Vinay Bhat Aug 18, 2025 1:14 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಸವಾಲ್ ಹಾಕಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಶುರುಮಾಡಿದ್ದಾನೆ. ಇದಕ್ಕೆಲ್ಲ ಕಾರಣವಾಗಿದ್ದು ಆ 25 ಲಕ್ಷ ಹಣ. ಆದೀಯ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದ ಕಾರಣ ಆಕೆಗೆ 25 ಲಕ್ಷ ರೂ. ಗಿಫ್ಟ್ ನೀಡಲು ಆದೀ ಮುಂದಾಗಿದ್ದ. ಅದರಂತೆ ಆದೀ ಆ ಹಣವನ್ನು ಭಾಗ್ಯಾಗೆ ನೀಡಿದ್ದಾನೆ. ಆದರೆ, ಸ್ವಾಭಿಮಾನಿ ಭಾಗ್ಯಾಗೆ ಈ ಹಣ ಭಾರವಾಗಿದೆ.. ನನಗೆ ಬೇಡ ಎನ್ನುತ್ತಾಳೆ. ಹೀಗಾಗಿ ಅದನ್ನು ಕೊಡಲು ಆದೀ ಆಫೀಸ್​ಗೆ ಬಂದಿದ್ದಾಳೆ. ಇಲ್ಲಿ ಇಬ್ಬರ ಮಧ್ಯೆ ಸಣ್ಣ ಜಗಳ ನಡೆದಿದ್ದು, ಆದೀಶ್ವರ್, ನಾನು ಒಂದು ವಾರ ನಿಮ್ಮಂತೆ ಮಿಡಲ್ ಕ್ಲಾಸ್​ನಲ್ಲಿ ಜೀವನ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ.

ಭಾಗ್ಯ ಮೊದಲಿಗೆ ಆ ಹಣವನ್ನು ತೆಗೆದುಕೊಂಡು ನೇರವಾಗಿ ಆದೀಶ್ವರ್ ಮನೆಗೆ ತೆರಳಿದ್ದಾಳೆ. ನೀವಿದನ್ನ ನನಗೆ ಕೊಟ್ಟಾಗಿನಿಂದ ಇದು ಉಡುಗೊರೆ ಅನಿಸುತ್ತಿಲ್ಲ.. ಹೊರೆ ಅನಿಸುತ್ತಿದೆ ಎಂದು ಭಾಗ್ಯ ಹೇಳಿದ್ದಾಳೆ. ಆಘ ಭಾಗ್ಯಾಗೆ ಆದೀ ಒಂದು ಕಂಡೀಷನ್ ಹಾಕುತ್ತಾನೆ. ನೀವು ನಮ್ಮ ಕಂಪನಿಯ ಬ್ಯುಸಿನೆಸ್ ಪಾರ್ಟ್ನರ್.. ಒಂದು ದುಡ್ಡು ಇಟ್ಟುಕೊಳ್ಳಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಆಗಿ ಎರಡೇ ಆಯ್ಕೆ ಇರೋದು ಎಂದು ಹೇಳಿದ್ದಾನೆ. ಇದು ಭಾಗ್ಯಾಳನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಬಳಿಕ ನೇರವಾಗಿ ಆದೀಶ್ವರ್ ಆಫೀಸ್​ಗೆ ತೆರಳಿದ ಭಾಗ್ಯ, ಈ ದುಡ್ಡು ಎಷ್ಟು ಭಾರ ಆಗ್ತಿದೆ ಗೊತ್ತ.. ನಮ್ಮಂತ ಮಿಡಲ್ ಕ್ಲಾಸ್ ವ್ಯಕ್ತಿಗಳಿಗೆ ಇಷ್ಟೊಂದು ದುಡ್ಡು ಬಂದಾಗ ಅದು ಭಾರ ಅಂತಾನೆ ಅನಿಸುತ್ತದೆ ಎಂದಿದ್ದಾಳೆ.

ಭಾಗ್ಯ ಪದೇ ಪದೇ ಮಿಡಲ್ ಕ್ಲಾಸ್.. ಮಿಡಲ್ ಕ್ಲಾಸ್ ಎಂಬ ವಿಚಾರ ತೆಗೆದಾಗ ಆದೀಶ್ವರ್​ಗೂ ಇದು ಕೋಪ ತರಿಸಿದೆ. ಹೀಗಾಗಿ ಆದೀ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ. ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಅದೇನೊ ಕಷ್ಟ ಅದು-ಇದು ಅಂತ ಹೇಳ್ತೀತಿ ಅಲ್ವಾ ಅದೇನು ಅಂತ ನಾನೂ ನೋಡ್ತೀನಿ.. ಮಿಡಲ್ ಕ್ಲಾಸ್ ಜನರಿಗೆ ಇಷ್ಟೊಂದು ದುಡ್ಡು ತೆಗೊಂಡ್ರೆ ಕಷ್ಟ ಅಂತೀರಿ ಅಲ್ವಾ ಅದೇನು ಕಷ್ಟ ಅಂತ ನಾನೂ ನೋಡ್ತೀನಿ.. ಈ ಚಾಲೆಂಜ್​ನಲ್ಲಿ ನಾನು ವಿನ್ ಆದ್ರೆ ಏನು ಪ್ರಶ್ನೆ ಮಾಡದೆ ಈ ದುಡ್ಡನ್ನು ನೀವು ತೆಗೋಬೇಕು.. ಅಕಸ್ಮಾತ್ ನೀವು ಗೆದ್ದರೆ ಈ ಹಣವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಮೊದಲು ಭಾಗ್ಯ ಒಪ್ಪುವುದಿಲ್ಲ. ನೀವು ಈಗ ಜೀವಿಸ್ತಾ ಇರೋ ಜೀವನಕ್ಕೂ.. ನಮ್ಮ ಜೀವನಕ್ಕೂ ತುಂಬಾ ಬದಲಾವಣೆ ಇದೆ ಎನ್ನುತ್ತಾಳೆ. ಬಳಿಕ, ಏನೇ ಆದ್ರು ನನ್ನಿಂದ ಇವರು ದುಡ್ಡು ತೆಗೆದುಕೊಳ್ಳುವುದು ತುಂಬಾ ಮುಖ್ಯ.. ಹೇಗಿದ್ರು ಇವರು ಈ ಚಾಲೆಂಜ್​ನಲ್ಲಿ ಗೆಲ್ಲಲ್ಲ, ಆಗ ದುಡ್ಡು ವಾಪಾಸ್ ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಂಡು ಭಾಗ್ಯ ಇದಕ್ಕೆ ಒಪ್ಪುತ್ತಾಳೆ. ಭಾಗ್ಯ ಕೂಡ ಈ ಚಾಲೆಂಜ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದು, ನಿಮ್ಮ ದಿನಚರಿ, ಜಾಗ ಎಲ್ಲ ಬದಲಾಗಬೇಕು.. ಅರಮನೆ ಯಂತಹ ಮನೆಯನ್ನು ಬುಟ್ಟು ಬದುಕಬೇಕು ಎಂದು ಹೇಳಿದ್ದಾಳೆ.



ಭಾಗ್ಯಾಳ ಎಲ್ಲ ಮಾತಿಗೆ ಒಪ್ಪಿ ಮರುದಿನ ಆದೀಶ್ವರ್ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ಇಲ್ಲುಕೂಡ ಭಾಗ್ಯ ಖಡಕ್ ಆಗಿ ಮಾತನಾಡಿದ್ದಾಳೆ. ಮನೆಯ ಕೆಲಸ ಎಲ್ಲ ನೀವೇ ಮಾಡಬೇಕು.. ಒಂದು ವಾರಕ್ಕೆ ಮೂರು ಶರ್ಟ್, ಎರಡು ಪ್ಯಾಂಟ್ ಅಷ್ಟೇ ಉಪಯೋಗಿಸಬೇಕು.. ದಿನಕ್ಕೆ 150 ರೂಪಾಯಿ ಅಷ್ಟೇ ಖರ್ಚು ಮಾಡಬೇಕು.. ನೀವು ಕಾಮತ್ ಫ್ಯಾಮಿಲಿ ಅವರು ಅಂತ ಎಲ್ಲೂ ಪವರ್ ಯೂಸ್ ಮಾಡಬಾರದು.. ಇದಕ್ಕೆಲ್ಲ ಒಪ್ಪಿಕೊಂಡ ಆದೀಶ್ವರ್ ಈ ಚಾಲೆಂಜ್ ಗೆಲ್ಲೋದು ನಾನೇ ಎಂದು ಮತ್ತೊಮ್ಮೆ ಉಚ್ಚರಿಸಿದ್ದಾನೆ. ಸದ್ಯ ಭಾಗ್ಯ-ಆದೀ ನಡುವಣ ಚಾಲೆಂಜ್ ಜುಗಲ್​ಬಂದಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಒಂದು ವಾರ ಪೂರ್ತಿ ಇವರಿಬ್ಬರ ನಡುವಣ ಚಾಲೆಂಜ್ ಎಪಿಸೋಡ್ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನೋಡಬೇಕಿದೆ.

Shobha Shetty: ಶುರುವಾಯಿತು ಶೋಭಾ ಶೆಟ್ಟಿ ಮದುವೆ ಕಾರ್ಯ?: ವೈರಲ್ ಆಗುತ್ತಿದೆ ಫೋಟೋ