ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Krishna Rukku Serial: ಎಲ್ಲವನ್ನ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು? ಪ್ರೋಮೋಗೆ ವೀಕ್ಷಕರ ಮೆಚ್ಚುಗೆ

Krishna Rukku Kannada Serial: ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು. ಅಕ್ಷಯ್‌ ನಾಯಕ್‌ ಮತ್ತು ನಟಿ ಮೌನ ಗುಡ್ಡೆಮನೆ ಅಭಿನಯಿಸುತ್ತಿರುವ ‘ಕೃಷ್ಣ ರುಕ್ಕು’ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಮೊದಲು ಪ್ರೋಮೋದಲ್ಲಿ ಕೃಷ್ಣ(ಅಕ್ಷಯ್‌) ಒಂದ್‌ ಕೈಯಲ್ಲಿ ಅಮ್ಮನ ಫೋಟೋ, ಮತ್ತೊಂದ್ದು ಕೈಯಲ್ಲಿ ಡ್ರಿಂಕ್ಸ್‌ ಬಾಟಲ್‌ ಹಿಡಿದು ನಶೆಯಲ್ಲಿ ತೇಲಾಡುವ ದೃಶ್ಯ ಇದೆ. ಈಗ ಎರಡನೇ ಪ್ರೋಮೋದಲ್ಲಿ ಒಟ್ಟಾರೆ ಸೀರಿಯಲ್‌ ಕಥೆ ಏನು ಎಂಬುದು ರಿವೀಲ್‌ ಆಗಿದೆ.

Krishna Rukku: ಕಷ್ಟ ಎದುರಿಸಿ ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ರುಕ್ಕು?

‘ಕೃಷ್ಣ ರುಕ್ಕು’ ಧಾರಾವಾಹಿ -

Yashaswi Devadiga
Yashaswi Devadiga Feb 23, 2026 8:49 AM

ಜೀ ವಾಹಿನಿಯಲ್ಲಿ ಸಾಕಷ್ಟು ಉತ್ತಮ ಧಾರಾವಾಹಿಗಳು (Kannada Serial) ಪ್ರಸಾರ ಕಾಣುತ್ತಿದೆ. TRPಯಲ್ಲಿಯೂ ಬಹುತೇಕ ಜೀ ಕನ್ನಡ ಧಾರಾವಾಹಿಗಳೇ ಇರ್ತವೆ. ಜೀ ಕನ್ನಡ ವಾಹಿನಿಯು ಎರಡು ಹೊಸ ಧಾರಾವಾಹಿಗಳ ಪ್ರೋಮೋನ ಹಂಚಿಕೊಂಡಿದೆ. ‘ಕೃಷ್ಣ ರುಕ್ಕು’ ( Krishna Rukku) ಎಂಬುದು ಧಾರಾವಾಹಿಯ ಹೆಸರು. ಅಕ್ಷಯ್‌ ನಾಯಕ್‌ ಮತ್ತು ನಟಿ ಮೌನ ಗುಡ್ಡೆಮನೆ ಅಭಿನಯಿಸುತ್ತಿರುವ ‘ಕೃಷ್ಣ ರುಕ್ಕು’ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಮೊದಲು ಪ್ರೋಮೋದಲ್ಲಿ ಕೃಷ್ಣ(ಅಕ್ಷಯ್‌) ಒಂದ್‌ ಕೈಯಲ್ಲಿ ಅಮ್ಮನ ಫೋಟೋ, ಮತ್ತೊಂದ್ದು ಕೈಯಲ್ಲಿ ಡ್ರಿಂಕ್ಸ್‌ ಬಾಟಲ್‌ ಹಿಡಿದು ನಶೆಯಲ್ಲಿ ತೇಲಾಡುವ ದೃಶ್ಯ ಇದೆ. ಈಗ ಎರಡನೇ ಪ್ರೋಮೋದಲ್ಲಿ ಒಟ್ಟಾರೆ ಸೀರಿಯಲ್‌ ಕಥೆ ಏನು ಎಂಬುದು ರಿವೀಲ್‌ ಆಗಿದೆ.

ಮುದ್ದಾದ ತಂಗಿಯರ ಮುದ್ದಿನ ಅಣ್ಣ

ಒಬ್ಬ ಅಣ್ಣ ಮುದ್ದಾದ ಮೂರು ತಂಗಿಯರು. ಇನ್ನೊಂದು ಕಡೆ ದೊಡ್ಡ ಮನೆಯಲ್ಲಿ ಸೂರ್ಯ ಪ್ರಕಾಶ್‌. ಅಣ್ಣನ ಕುಟುಂಬದಲ್ಲಿ ದೊಡ್ಡ ತಂಗಿಯ ಮದುವೆ ತಯಾರಿ ನಡೆಯುತ್ತ ಇರುತ್ತೆ. ಹೀಗಾಗಿ ಅಣ್ಣ, ತಂಗಿ ಮದುವೆ ಆಗೋ ಹುಡುಗನ ಜೊತೆ ಕಾರ್ಡ್‌ ಹಂಚಲು ಹೋಗಿರ್ತಾನೆ. ಆದರೆ ದೊಡ್ಮನೆ ಸೂರ್ಯ ಪ್ರಕಾಶ್‌ ಮಗ ಕುಡಿತದ ಚಟಕ್ಕೆ ಒಳಗಾಗಿರ್ತಾನೆ. ಆತ ಕುಡಿದ ಮತ್ತಿನಲ್ಲಿ, ನಾಯಕಿಯ ಅಣ್ಣನ ಆಟೋಗೆ ಆಕ್ಸಿಡೆಂಟ್‌ ಮಾಡಿರುತ್ತಾನೆ.

ಇದನ್ನೂ ಓದಿ: Maa Inti Bangaram: ಸಮಂತಾ- ದೂದ್ ಪೇಡಾ ದಿಗಂತ್‌ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್‌ ಡೇಟ್‌ ಅನೌನ್ಸ್‌

ತಂಗಿಯ ಸೇಡು

ಅಲ್ಲೇ ಅಣ್ಣ ಹಾಗೂ ತಂಗಿ ಮದುವೆ ಆಗೋ ಹುಡುಗ ಅಸುನೀಗುತ್ತಾರೆ. ಹೀಗಾಗಿ ಎರಡನೇ ತಂಗಿ ಅಣ್ಣನ ಮನೆಯ ಜವಾಬ್ದಾರಿ ವಹಿಸಿಕೊಂಡರೆ, ಹುಡುಗನನ್ನು ಕಳೆದುಕೊಂಡ ನೋವಿನಲ್ಲಿ ಮೊದಲ ತಂಗಿ, ಸೂರ್ಯಪ್ರಕಾಶ್‌ ಮನೆಗೆ ಸೊಸೆಯಾಗಿ, ಆ ಮನೆಯನ್ನು ಹಾಳು ಮಾಡೇ ಮಾಡುತ್ತೇನೆ ಎಂದು ಶಪಥ ಮಾಡುತ್ತಾಳೆ. ಸೊಸೆಯಾಗಿ ಬಂದು ಸೇಡು ತೀರಿಸಿಕೊಳ್ತಾಳೆ.

ತದ್ವಿರುದ್ಧ ಸ್ವಭಾವದ ‘ಕೃಷ್ಣ ರುಕ್ಕು’

ಅದೇ ಮನೆಗೆ ಎರಡನೇ ತಂಗಿ, (ಮೌನಾ) ನಾಯಕ ಕೃಷ್ಣನನ್ನು ಮದುವೆ ಆಗುತ್ತಾಳೆ. ಒಂದು ಕಡೆ ಕುಡಿತದ ಚಟಕ್ಕೆ ಒಳಗಾಗಿರೋ ಗಂಡನನ್ನು ನಿಭಾಯಿಸೋ, ಇನ್ನೊಂದು ಕಡೆ ದೊಡ್ಮನೆ ಸೊಸೆಯಾಗಿ, ಮತ್ತೊಂದು ಕಡೆ ಅಕ್ಕನ ಸೇಡಿನ ವಿರುದ್ಧ ನಿಂತು ಗಂಡನ ಮನೆ , ತವರು ಮನೆ ಜವಬ್ದಾರಿ ವಹಿಸೋ ರುಕ್ಮಣಿ ಕಥೆ ಇದಾಗಿದೆ.

ನಾಯಕಿ ರುಕ್ಕು, ಸರಳ, ಸುಂದರ ವದನದ ಮುಗುಳ್ನಗೆಯ ಚೆಲುವೆ. ಒಡೆದ ಕನ್ನಡಿಯಲ್ಲೂ ಕನಸು ಕಾಣುವ ವ್ಯಕ್ತಿತ್ವ ಅವಳದ್ದು.

ಗಾಯಕ ನವೀನ್‌ ಸಜ್ಜು ‘ಕೃಷ್ಣ ರುಕ್ಕು’ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಮೂವರು ತಂಗಿಯರಿಗೆ ಅಣ್ಣನ ಪಾತ್ರ ಮಾಡುತ್ತಿದ್ದಾರೆ. ಸಹೋದರಿಯರ ಪಾತ್ರದಲ್ಲಿ ಮೌನ ಗುಡ್ಡೆಮನೆ ಜೊತೆಗೆ ‘ಜೋಡಿ ಹಕ್ಕಿ’ ಖ್ಯಾತಿಯ ಸ್ನೇಹಾ ಹೊನ್ನೆಗೌಡ, ಮತ್ತೋರ್ವ ಸಹೋದರಿ ಪಾತ್ರದಲ್ಲಿ ‘ಸುಭಷ್ಯ ಶೀಘ್ರಂ’ ಖ್ಯಾತಿಯ ದಿವ್ಯಶ್ರೀ ನಾಯಕ್‌ ಸುಳ್ಯ ನಟಿಸುತ್ತಿದ್ದಾರೆ.

ಇದನ್ನೂ ಓದಿ: Dhurandhar 2 vs Toxic: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೀಗೆ ಹೇಳೋದಾ ಆರ್​​ಜಿವಿ? ಗರಂ ಆದ್ರು ಕನ್ನಡಿಗರು

'ಪಾರು' ಧಾರಾವಾಹಿ ನಂತರ ಮತ್ತೆ ಜೀ ವಾಹಿನಿಗೆ ಮರಳಿರುವ ನಟ, ನಿರ್ದೇಶಕರಾದ ಎಸ್‌ ನಾರಾಯಣ್‌ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.