ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಭಾಗ್ಯಾಗೆ ಐ ಲವ್ ಯೂ ಎಂದು ಖುಷಿ ಪಡಿಸಿದ ತನ್ವಿ: ತಲೆಕೆಳಗಾಯ್ತು ತಾಂಡವ್​ನ ಎಲ್ಲ ಪ್ಲ್ಯಾನ್

ಬೆಳಗ್ಗೆ ಎದ್ದು ತನ್ವಿ ತಾಂಡವ್ ಕೊಟ್ಟ ಮೊಬೈಲ್ ನೋಡುತ್ತಾಳೆ. ಆಗ ಮೊಬೈಲ್‌ನಲ್ಲಿ ಸಿಮ್ ಆಕ್ಟಿವೇಟ್ ಆಗಿರುತ್ತದೆ. ಮೊದಲ ಯಾರಿಗೆ ಮಾಡೋದು ಎಂದು ಯೋಚಿಸಿ.. ಕೊನೆಗೆ ಅಮ್ಮನಿಗೆ ಮಾಡ್ತೇನೆ ಎಂದು ಭಾಗ್ಯಗೆ ಕರೆ ಮಾಡುತ್ತಾಳೆ. ಕರೆ ಸ್ವೀಕರಿಸುತ್ತಲೇ, ಅಮ್ಮಾ ಐ ಲವ್ ಯೂ ಎಂದು ಹೇಳುತ್ತಾಳೆ.

ಭಾಗ್ಯಾಗೆ ಐ ಲವ್ ಯೂ ಎಂದ ತನ್ವಿ: ತಲೆಕೆಳಗಾಯ್ತು ತಾಂಡವ್​ ಪ್ಲ್ಯಾನ್

Bhagya Lakshmi serial

Profile Vinay Bhat Feb 21, 2025 12:09 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ಮಗಳ ತನ್ವಿ ಬರ್ತ್ ಡೇ ಸೆಲೆಬ್ರೇಷನ್ ಎಲ್ಲ ಮುಕ್ತಾಯಗೊಂಡಿದೆ. ಮಗಳ ಹುಟ್ಟುಹಬ್ಬಕ್ಕೋಸ್ಕರ ಭಾಗ್ಯಾ ಪಟ್ಟ ಕಷ್ಟ ಅಷ್ಟಿಟ್ಟಲ್ಲ. ಅತ್ತ ಕೆಲಸವೂ ಇಲ್ಲದೆ.. ಇತ್ತ ಹಣವೂ ಇಲ್ಲದೆ ಮಗಳಿಗೆ ಏನಾದರು ಗಿಫ್ಟ್ ಕೊಡಲು ಅವಳದೇ ಬರ್ತ್ ಡೇ ಪಾರ್ಟಿಯಲ್ಲಿ ಜೋಕರ್ ವೇಷ ತೊಟ್ಟು ನಟಿಸಬೇಕಾಯಿತು. ಆದರೆ, ಇಲ್ಲೂ ಆಕೆಗೆ ಖುಷಿ ಎಂಬುದು ಸಿಗಲಿಲ್ಲ. ಭಾಗ್ಯಾ ಕೊಟ್ಟ ಗಿಫ್ಟ್​ನಿಂದ ಮಗಳು ತನ್ವಿ ಸಂತಸಗೊಂಡಿಲ್ಲ. ಇದರಿಂದ ಭಾಗ್ಯಾಳಿಗೆ ತುಂಬಾ ಬೇಜಾರಾಗಿದೆ. ಆದರೆ, ಅದನ್ನು ತೋರಿಸಿಕೊಂಡಿಲ್ಲ. ಮರುದಿನ ತನ್ನ ತಪ್ಪಿನ ಅರಿವಾಗಿ ತನ್ವಿ ಅಮ್ಮನಿಗೆ ಐ ಲವ್ ಯು ಎಂದು ಹೇಳಿದ್ದಾರೆ.

ರೆಸಾರ್ಟ್​ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ಬಳಿಕ ತಾಂಡವ್ ಮಗಳು ತನ್ವಿಗೆ ನಿನಿಗೆ ಎಷ್ಟು ಸರ್​ಪ್ರೈಸ್ ಕೊಟ್ಟರು ಕಡಿಮೆನೇ ಎಂದು ಹೇಳಿ ಹೊಸ ಐಫೋನ್ ಗಿಫ್ಟ್ ಕೊಡುತ್ತಾನೆ. ಇದನ್ನ ನೋಡಿ ತನ್ವಿ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾಳೆ. ಅತ್ತ ಭಾಗ್ಯಾ ರೆಸಾರ್ಟ್​ನಲ್ಲಿ ಜೋಕರ್ ವೇಷ ತೊಟ್ಟಿದ್ದಕ್ಕೆ ಸಿಕ್ಕ ಹಣ ಪಡೆದುಕೊಂಡು ಮಗಳಿಗೆ ಮೊಬೈಲ್ ಒಂದನ್ನು ಖರೀದಿಸಿದ್ದಾಳೆ.

ತನ್ವಿ ಮನೆಗೆ ಬಂದ ಬಳಿಕ ಇಲ್ಲೂ ಕೇಕ್ ಕಟ್ ಮಾಡಲಾಗುತ್ತದೆ. ಕೇಕ್ ತಿಂದ ಬಳಿಕ ಭಾಗ್ಯಾ, ಬಂಗಾರಿ ಇಷ್ಟೇ ಅಲ್ಲ.. ನಿನ್ಗೆ ತುಂಬಾ ಇಷ್ಟ ಆಗುವ ವಸ್ತುವೊಂದು ನಿನಗೋಸ್ಕರ ಕಾಯ್ತಾ ಇದೆ.. ಅದನ್ನ ನೋಡಿದ್ರೆ ನೀವು ತುಂಬಾ ಖುಷಿ ಪಡ್ತೀಯ ಎಂದು ಹೇಳಿ ತಾನು ಕಷ್ಟಪಟ್ಟು ತಂದ ಮೊಬೈಲ್ ಗಿಫ್ಟ್ ಕೊಡುತ್ತಾಳೆ. ಆದರೆ, ಇದನ್ನು ನೋಡಿ ತನ್ವಿ ಮುಖ ಸಪ್ಪೆ ಮಾಡುತ್ತಾಳೆ.. ಅಮ್ಮ ನೀನು ಯಾಕೆ ಫೋನ್ ಗಿಫ್ಟ್ ತೆಗೊಂಡು ಬಂದೆ.. ನನ್ಗೆ ಪಪ್ಪಾ ಆಲ್ರೆಡಿ ಫೋನ್ ಗಿಫ್ಟ್ ಮಾಡಿದ್ದಾರೆ.. ಸಖತ್ ಆಗಿದೆ ಆ ಫೋನ್ ಎಂದು ಹೇಳಿ ಹೊಸ ಐಫೋನ್ ಅನ್ನು ತೋರಿಸುತ್ತಾಳೆ. ಇದನ್ನ ಕೇಳಿ ಭಾಗ್ಯಾಗೆ ಅಳು ಬರುತ್ತದೆ.

ಇದೆಲ್ಲ ಆದ ಬಳಿಕ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮ್ಮನ ಜತೆ ನಡೆದುಕೊಂಡ ರೀತಿಯನ್ನು ಗುಂಡಣ್ಣ ತನ್ವಿ ಬಳಿ ವಿಚಾರಿಸಿದ್ದಾನೆ. ನಿನ್ನನ್ನು ಅಮ್ಮ ಅಷ್ಟೊಂದು ಪ್ರೀತಿಸುತ್ತಾಳೆ, ನಿನಗಾಗಿ ಅಷ್ಟೊಂದು ಕಷ್ಟಪಡುತ್ತಾಳೆ, ಆದರೆ ನೀನು ಯಾಕೆ ಅವಳಿಗೆ ಅಷ್ಟೊಂದು ತೊಂದರೆ ಕೊಟ್ಟೆ, ನೋವು ಮಾಡಿದೆ ಎಂದು ಕೇಳುತ್ತಾನೆ. ನೀನು ಬ್ಯಾಡ್ ಮಗಳು ಎಂದು ಹೇಳುತ್ತಾನೆ. ಅವನ ಮಾತು ಕೇಳಿ ತನ್ವಿಗೆ ತಪ್ಪಿನ ಅರಿವಾಗುತ್ತದೆ.



ಬೆಳಗ್ಗೆ ಎದ್ದು ತನ್ವಿ ತಾಂಡವ್ ಕೊಟ್ಟ ಮೊಬೈಲ್ ನೋಡುತ್ತಾಳೆ. ಆಗ ಮೊಬೈಲ್‌ನಲ್ಲಿ ಸಿಮ್ ಆಕ್ಟಿವೇಟ್ ಆಗಿರುತ್ತದೆ. ಮೊದಲ ಯಾರಿಗೆ ಮಾಡೋದು ಎಂದು ಯೋಚಿಸಿ.. ಕೊನೆಗೆ ಅಮ್ಮನಿಗೆ ಮಾಡ್ತೇನೆ ಎಂದು ಭಾಗ್ಯಗೆ ಕರೆ ಮಾಡುತ್ತಾಳೆ. ಕರೆ ಸ್ವೀಕರಿಸುತ್ತಲೇ, ಅಮ್ಮಾ ಐ ಲವ್ ಯೂ ಎಂದು ಹೇಳುತ್ತಾಳೆ. ಇದು ನನ್ನ ಮೊಬೈಲ್‌ನಲ್ಲಿ ಮಾಡಿದ ಮೊದಲ ಕರೆ ಎಂದು ಹೇಳಿ, ನಿನ್ನೆ ನಿನ್ನ ಜತೆ ತಪ್ಪಾದಿ ನಡೆದುಕೊಂಡೆ, ನನ್ನನ್ನು ಕ್ಷಮಿಸು ಎಂದು ಹೇಳುತ್ತಾಳೆ. ಅವಳ ಮಾತು ಕೇಳಿದ ಭಾಗ್ಯಗೆ ಕಣ್ಣು ತುಂಬಿ ಬರುತ್ತದೆ.



ಆ ಬಳಿಕ ಎರಡನೇ ಕರೆ ತಾಂಡವ್​ಗೆ ಮಾಡುತ್ತಾಳೆ. ತಾಂಡವ್ ಕಾಲ್ ರಿಸೀವ್ ಮಾಡಿದ ಕೂಡಲೇ.. ನಿನಗೆ ಆವಾಗಿನಿಂದ ಕಾಲ್ ಮಾಡ್ತಾ ಇದ್ದೇನೆ ಬ್ಯುಸಿ ಅಂತ ಬರ್ತಿದೆ ಎಂದು ಹೇಳುತ್ತಾನೆ. ಆಗ ನಾನು ಮೊದಲ ಕರೆ ಅಮ್ಮನಿಗೆ ಮಾಡಿದೆ ಎಂದು ತನ್ವಿ ಹೇಳುತ್ತಾಳೆ. ಇದನ್ನು ಕೇಳಿ ತಾಂಡವ್‌ಗೆ ಕೋಪ ಬಂದು ಕಾಲ್ ಕಟ್ ಮಾಡುತ್ತಾನೆ. ಲಕ್ಷ ಲಕ್ಷ ದುಡ್ಡು ಸುರಿಸಿ ಫೋನ್ ಕೊಡಿಸಿರೋದು ನಾನು.. ಇವಳು ಹೋಗಿ ಹೋಗಿ ಫಸ್ಟ್ ಕಾಲ್ ಭಾಗ್ಯಾಗೆ ಮಾಡಿದ್ದಾಳೆ.. ಏನು ಕೊಡಿಸಿದ್ರೂ ಇವಳಿಗೆ ಆ ಭಾಗ್ಯಾನೇ ಇಂಪಾರ್ಟೆಂಟ್ ಎಂದು ಕೋಪಗೊಳ್ಳುತ್ತಾನೆ. ಸದ್ಯ ಭಾಗ್ಯಾಳ ಮನೆಯವರನ್ನು ತನ್ನತ್ತ ಸೆಳೆಯಲು ತಾಂಡವ್​ನ ಹೊಸ ಪ್ಲ್ಯಾನ್ ಏನು?, ಒಂದು ಕೆಲಸಕ್ಕಾಗಿ ಅಲೆದಾಡುತ್ತಿರುವ ಭಾಗ್ಯಾಗೆ ಕೆಲಸ ಸಿಗುತ್ತಾ ಎಂಬುದು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Drone Prathap: ಕಿರುತೆರೆಯಲ್ಲಿ ಮತ್ತೆ ಮಿಂಚಲು ಬಂದ ಡ್ರೋನ್ ಪ್ರತಾಪ್: ಯಾವ ಶೋ..?