ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಲು ಬಂದ ತಾಂಡವ್​ಗೆ ವೈಷ್ಣವ್ ದರ್ಶನ

ಮದುವೆ ದಿನ ತಾಂಡವ್ ನೇರವಾಗಿ ಹಾಲ್ಗೆ ಬಂದಿದ್ದು, ಈ ಮದುವೆ ನಿಲ್ಲಿಸಿಯೇ ತೀರುತ್ತೇನೆ ಎಂದು ಹೊರಟಿದ್ದಾನೆ. ಆದರೆ, ಈ ಸಂದರ್ಭ ಇದರಲ್ಲೊಂದು ಬಿಗ್ ಟ್ವಿಸ್ಟ್ ಕೊಡಲಾಗಿದೆ. ಮದುವೆ ನಿಲ್ಲಿಸಲು ಹೊರಟ ತಾಂಡವ್ಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ ಅಡ್ಡ ಬಂದಿದ್ದಾನೆ.

ಮದುವೆ ನಿಲ್ಲಿಸಲು ಬಂದ ತಾಂಡವ್​ಗೆ ವೈಷ್ಣವ್ ದರ್ಶನ

Bhagya Lakshmi Serial

Profile Vinay Bhat Jul 11, 2025 11:52 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಕಲ್ಯಾಣೋತ್ಸವ ಶುರುವಾಗಿದೆ. ಭಾಗ್ಯ ಮನೆಯವರಂತು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇವರ ಸಾಲಿಗೆ ಈಗ ಭಾಗ್ಯ ಪತಿ ತಾಂಡವ್ ಕೂಡ ಸೇರಿದ್ದಾನೆ. ಮದುವೆ ದಿನ ತಾಂಡವ್ ನೇರವಾಗಿ ಹಾಲ್​ಗೆ ಬಂದಿದ್ದು, ಈ ಮದುವೆ ನಿಲ್ಲಿಸಿಯೇ ತೀರುತ್ತೇನೆ ಎಂದು ಹೊರಟಿದ್ದಾನೆ. ಆದರೆ, ಈ ಸಂದರ್ಭ ಇದರಲ್ಲೊಂದು ಬಿಗ್ ಟ್ವಿಸ್ಟ್ ಕೊಡಲಾಗಿದೆ. ಮದುವೆ ನಿಲ್ಲಿಸಲು ಹೊರಟ ತಾಂಡವ್​ಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್​ ಅಡ್ಡ ಬಂದಿದ್ದಾನೆ.

ಪೂಜಾ- ಕಿಶನ್ ಮದುವೆ ನಡೆಯಬಾರದು ಎಂದು ನಾನಾ ಅಡೆತಡೆಗಳು ಬಂದರೂ ಈಗ ಅದನ್ನೆಲ್ಲ ದಾಟಿ ಕಲ್ಯಾಣ ದಿನಕ್ಕೆ ಬಂದು ನಿಂತಿದೆ. ಆದರೆ, ಮದುವೆ ದಿನ ಕೂಡ ಈ ಮದುವೆ ನಡೆಯಲೇ ಬಾರದು ಎಂದು ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಮಾಡಿದ್ದಾರೆ. ಭಾಗ್ಯಾಳ ಜೊತೆ ಮೀನಾಕ್ಷಿ ಎಮೋಷನಲ್ ಆಟವಾಡುತ್ತಿದ್ದಾಳೆ. ಮದುವೆಗೆ ವಿವಿಐಪಿಗಳು ಬರ್ತಾರೆ.. ಅವರ ನಿರೀಕ್ಷೆ ತಲುಪಲಿಲ್ಲ ಎಂದರೆ ನಮಗೆ ಅವಮಾನ.. ಹೀಗಾಗಿ ಮದುವೆ ಜವಾಬ್ದಾರಿಯನ್ನ ನಾವೇ ವಹಿಸಿಕೊಳ್ತೇನೆ ಎಂದು ಭಾಗ್ಯ ಫ್ಯಾಮಿಲಿ ಮುಂದೆ ಮೀನಾಕ್ಷಿ ಹೇಳಿದ್ದಾಳೆ.

ಅದರಂತೆ ಮೀನಾಕ್ಷಿ ಹೇಳಿದ ರೀತಿಯಲ್ಲೇ ಎಲ್ಲ ನಡೆಯುತ್ತಿದೆ. ಭಾಗ್ಯ ಮಾತಿಗೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ. ನಮ್ಮ ಶಾಸ್ತ್ರದ ಪ್ರಕಾರ ಈ ಮದಿವೆ ಆಗಬೇಕು ಎಂದು ಭಾಗ್ಯ ಹೇಳಿದರೂ ಅದಕ್ಕೆ ಮೀನಾಕ್ಷಿ ಕಿವಿಗೊಡುವುದಿಲ್ಲ.. ಆ ಮೂಲಕ ಭಾಗ್ಯಗೆ ಇದು ತನ್ನ ತಂಗಿ ಮದುವೆ ಅಂತ ಅನಿಸಬಾರದು ಮತ್ತು ಎಲ್ಲಾ ಕೆಲಸಗಳಿಂದ ಭಾಗ್ಯಳನ್ನ ಆಚೆ ಇಟ್ಟು ಆಕೆಯನ್ನ ಎಮೋಷನಲ್‌ ಆಗಿ ಬ್ರೇಕ್ ಡೌನ್ ಮಾಡುವುದು ಮೀನಾಕ್ಷಿಯ ಪ್ಲಾನ್. ಎಮೋಷನಲ್ ಆಗಿ ಬ್ರೇಕ್ ಡೌನ್ ಆಗುವ ಭಾಗ್ಯ ಮದುವೆಯನ್ನೂ ನಿಲ್ಲಿಸುತ್ತಾಳೆ ಅಂತ ಮೀನಾಕ್ಷಿ ಭಾವಿಸಿದ್ದಾಳೆ.

ಮೀನಾಕ್ಷಿ ಪ್ಲ್ಯಾನ್​ಗೆ ಕನ್ನಿಕಾ ಸಪೋರ್ಟ್ ಮಾಡುತ್ತಿದ್ದಾಳೆ. ಆದರೆ, ಆದೀಶ್ವರ್​ ಬದಲಾದಂತೆ ಕಾಣುತ್ತಿದ್ದಾನೆ. ಮೀನಾಕ್ಷಿ ಬಂದು ಆದೀ ಬಳಿ ಈ ಮದುವೆ ನಿಲ್ಲಿಸಲು ಏನಾದರು ಪ್ಲ್ಯಾನ್ ಮಾಡು ಎಂದು ಹೇಳುತ್ತಾಳೆ. ಆದರೆ, ಆದೀ ನನಗೆ ಏನು ಮಾಡಬೇಕು ಅಂತಾನೆ ಗೊತ್ತಾಗುತ್ತಿಲ್ಲ.. ಭಾಗ್ಯಾನ ಜಡ್ಜ್ ಮಾಡಲು ಆಗುತ್ತಿಲ್ಲ.. ಭಾಗ್ಯ ದುಡ್ಡಿಗೆ ಆಸೆ ಪಡುತ್ತಿದ್ದಾಳೆ ಅಂತ ನನಗೆ ಅನಿಸುತ್ತಿಲ್ಲ.. ಕಿಶನ್​ಗೆ ದುಡ್ಡು ಕೊಡಲ್ಲ ಅಂತ ವಿಲ್ ಬರೆಸಬೇಕಾದ್ರೆನೆ ಅವಳು ಈ ಮದುವೆ ನಿಲ್ಲಿಸಬೇಕಿತ್ತು.. ಆದರೆ ಆಕೆ ಹಾಗೆ ಮಾಡ್ಲಿಲ್ಲ.. ಇಷ್ಟೆಲ್ಲ ಆದ ಮೇಲೂ ಭಾಗ್ಯ ನಾರ್ಮಲ್ ಆಗಿ ಮದುವೆ ಮಾಡಿಸುತ್ತಿದ್ದಾಳೆ ಅಂದ್ರೆ ನಂಗೆ ನಂಬೋಕೆ ಆಗುತ್ತಿಲ್ಲ.. ಭಾಗ್ಯ ಮೋಸ ಮಾಡುವವರು ಅಂತ ನಂಗೆ ಅನಿಸುತ್ತಿಲ್ಲ ಎಂದಿದ್ದಾನೆ.

ಮತ್ತೊಂದೆಡೆ ಪೂಜಾ ಮದುವೆ ವಿಷಯ ತಿಳಿದು, ಈ ಮದುವೆ ಅದು ಹೇಗೆ ನಡೆಯುತ್ತೊ ನೋಡುತ್ತೇನೆ ಎಂದು ಮದುವೆ ನಿಲ್ಲಿಸಲು ತಾಂಡವ್ ಹಾಲ್​ಗೆ ಬಂದಿದ್ದಾನೆ. ಇದನ್ನ ಗಮನಿಸಿದ ಕುಸುಮಾ, ತಾಂಡವ್​ನನ್ನು ಎಳೆದುಕೊಂಡು ಬಂದು ಹೊರಟು ಹೋಗು ಇಲ್ಲಿಂದ ಎಂದಿದ್ದಾಳೆ. ಆದ್ರೆ, ಇದಕ್ಕೆ ಒಪ್ಪದ ತಾಂಡವ್, ನೀನು ಇವತ್ತು ಎಷ್ಟೇ ಕಷ್ಟ ಪಟ್ಟರೂ ನಾನು ಈ ಮದುವೆಯನ್ನ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹೊರಡುತ್ತಾನೆ.



ಹೀಗೆ ಮದುವೆ ನಿಲ್ಲಿಸಲು ಹೊರಟಾಗ ಅಲ್ಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ವೈಷ್ಣವ್ ಬಂದಿದ್ದಾನೆ. ತಾಂಡವ್​ ದಾರಿಗೆ ಅಡ್ಡಲಾಗಿ ವೈಷ್ಣವ್ ನಿಂತಿದ್ದಾನೆ. ಈ ಕುರಿತು ಪ್ರೊಮೋ ಹಂಚಿಕೊಂಡಿರುವ ಕಲರ್ಸ್ ಕನ್ನಡ, ಕೇಡು ಮಾಡುವವನ ತಡೆಯೋಕೆ ಅಪರೂಪದ ಬಂದುವೇ ಬಂದ ಎಂದು ಹೇಳಿದೆ. ಸದ್ಯ ಧಾರಾವಾಹಿ ರೋಚಕ ಘಟ್ಟಕ್ಕೆ ತಲುಪಿದೆ. ಈ ಮದುವೆ ನಿಲ್ಲಿಸಲು ನಾನಾ ಪ್ಲ್ಯಾನ್ ಆಗುತ್ತಿದೆ… ಅಂತಿಮವಾಗಿ ಮದುವೆ ನಡೆಯುತ್ತಾ?, ಮೀನಾಕ್ಷಿ, ಕನ್ನಿಕಾ ಹಾಗು ತಾಂಡವ್ ಏನು ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Rajesh Dhruva: ಶ್ರೀಗೌರಿ ಧಾರಾವಾಹಿ ದಿಢೀರ್ ನಿಂತಿದ್ದು ಏಕೆ?, ಲಕ್ಷ.. ಲಕ್ಷ ಲಾಸ್ ಆಗಿದ್ದು ಯಾರಿಗೆ?