ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actress Tamanna as Ambassador: ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

ಕರ್ನಾಟಕ ಸರಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ, 2030ರ ವೇಳೆಗೆ 5000 ಕೋಟಿ ರು. ಮಾರುಕಟ್ಟೆ ಮಾಡಬೇಕೆಂಬ ಉದ್ದೇಶದಿಂದ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿ ಕೊಂಡಿದೆ. ಆದರೆ ತಮನ್ನಾ ಬದಲಿಗೆ ಕರ್ನಾಟಕದ ‘ಬೆಡಗಿ’ಯರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಿತ್ತು. ಕರ್ನಾಟಕದಲ್ಲಿ ತಮನ್ನಾಗಿಂತ ಸುಂದರಿಯರು ಇಲ್ಲವೇ ಎನ್ನುವ ಕೊಂಕನ್ನು ರಾಜ್ಯದ ಕೆಲವರು ಎತ್ತಿದ್ದಾರೆ.

ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

-

Ashok Nayak
Ashok Nayak Feb 11, 2026 6:14 AM

ಕಂಪನಿಯ ಉತ್ಪನ ವನ್ನು ದೇಶಾದ್ಯಂತ ಬೆಳೆಸಲು ದೇಶಾದ್ಯಂತ ಪರಿಚಿತವಿರುವ ನಟಿ ಭಾಟಿಯಾ ಆಯ್ಕೆ

ಬಾಲಿವುಡ್ಡಲ್ಲೂ ಚಿರಪರಿಚಿತ ದ.ಭಾರತದ ಜನಪ್ರಿಯ ನಟಿಗೆ ಮನ್ನಣೆ

ವಿರೋಧಕ್ಕೆ ಹಲವರ ವಿರೋಧ ಮೈಸೂರು ಸ್ಯಾಂಡಲ್‌ಗೆ ತಮನ್ನಾ ರಾಯಭಾರಿ: ತಪ್ಪೇನು?

ಬೆಂಗಳೂರು: ದ.ಭಾರತದ ಖ್ಯಾತ ನಟಿ, ಇತ್ತೀಚೆಗೆ ಬಾಲಿವುಡ್ʼನಲ್ಲೂ ಜನಪ್ರಿಯವಾಗಿರುವ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯನ್ನಾಗಿ ನೇಮಿಸುತ್ತಿದ್ದಂತೆ ಕರ್ನಾಟಕದಲ್ಲಿ ಕೆಲವರ ‘ವಿರೋಧ’ ಶುರುವಾಗಿದೆ.

ತಮನ್ನಾ ನೇಮಕದಿಂದ ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾಗಿದೆ ಎನ್ನುವುದು ಅವರು ನೀಡುತ್ತಿರುವ ಕಾರಣ. ಆದರೆ ತಮನ್ನಾ ಆಯ್ಕೆಗೂ, ಕನ್ನಡದಿಂದ ಅಸ್ಮಿತೆಗೂ ಎಲ್ಲಿಂದೆಲ್ಲಿಗೆ ಸಂಬಂಧ ಎನ್ನುವು ದಕ್ಕೆ ಉತ್ತರ ಮಾತ್ರ ಸಿಗುತ್ತಿಲ್ಲ.

ಕರ್ನಾಟಕ ಸರಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ, 2030ರ ವೇಳೆಗೆ 5000 ಕೋಟಿ ರು. ಮಾರುಕಟ್ಟೆ ಮಾಡಬೇಕೆಂಬ ಉದ್ದೇಶದಿಂದ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿ ಕೊಂಡಿದೆ. ಆದರೆ ತಮನ್ನಾ ಬದಲಿಗೆ ಕರ್ನಾಟಕದ ‘ಬೆಡಗಿ’ಯ ರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಿತ್ತು. ಕರ್ನಾಟಕದಲ್ಲಿ ತಮನ್ನಾಗಿಂತ ಸುಂದರಿ ಯರು ಇಲ್ಲವೇ ಎನ್ನುವ ಕೊಂಕನ್ನು ರಾಜ್ಯದ ಕೆಲವರು ಎತ್ತಿದ್ದಾರೆ.

ಇದನ್ನೂ ಓದಿ: Tamannaah Bhatia: ತಮನ್ನಾ ಭಾಟಿಯಾ ಗ್ಲಾಮರ್‌ ಲುಕ್ಸ್‌ಗೆ ಮನಸೋತ ಫ್ಯಾನ್ಸ್‌

ಕರ್ನಾಟಕದಲ್ಲಿ ತಮನ್ನಾ ಮೀರಿದ ಬೆಡಗಿಯರು ಇದ್ದಾರೆ, ಇಲ್ಲ ಎನ್ನುವುದು ಮೈಸೂರು ಸ್ಯಾಂಡಲ್ ವಿಷಯದಲ್ಲಿ ಅಪ್ರಸ್ತುತ. ಕೆಎಂಎಫ್ ಸೇರಿದಂತೆ ವಿವಿಧ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಕರ್ನಾಟಕ ರಾಜ್ಯದ ಮಾರುಕಟ್ಟೆಯನ್ನು ಆದ್ಯತೆಯಾಗಿ ತೆಗೆದುಕೊಂಡು ‘ರಾಯಭಾರಿ’ಗಳನ್ನು ನೇಮಿಸಿಕೊಂಡಿದ್ದರಿಂದ ಕನ್ನಡಿಗರಿಗೆ ಆದ್ಯತೆ ನೀಡಿವೆ.

ಆದರೆ ಕೆಎಸ್‌ಡಿಎಲ್ ತನ್ನ ಮಾರುಕಟ್ಟೆಯನ್ನು ಉತ್ತರ ಭಾರತ ಜತೆಗೆ ಅನ್ಯ ದೇಶಗಳಿಗೂ ವಿಸ್ತರಿಸಿ ಕೊಳ್ಳಬೇಕೆಂಬ ಉದ್ದೇಶದಿಂದ ರಾಯಭಾರಿಯನ್ನು ನೇಮಿಸಿಕೊಂಡಿದೆ. ದೇಶ, ಜಗತ್ತಿನ ಮಾರುಕಟ್ಟೆ ಯನ್ನು ಗುರಿ ಮಾಡಿಕೊಂಡಾಗ ಅಂತಹದ್ದೇ ವ್ಯಕ್ತಿಯನ್ನು ಬಳಸಬೇಕಾಗುತ್ತದೆ. ಇದರಲ್ಲಿ ತಪ್ಪೇನು ಇನ್ನೊಂದು ದೃಷ್ಟಿಕೋನ ಹೊಂದಿರುವರ ಬಲವಾದ ಪ್ರಶ್ನೆ.

Tamanna and MBP

ಒಂದು ವೇಳೆ ಮೈಸೂರು ಸ್ಯಾಂಡಲ್ ಕರ್ನಾಟಕವನ್ನು ಗುರಿ ಮಾಡಿಕೊಂಡು ತನ್ನ ವ್ಯಾಪಾರ ವಿಸ್ತರಣೆ ಮಾಡಿಕೊಳ್ಳಲು ತಮನ್ನಾ ಅವರನ್ನು ಆಯ್ಕೆ ಮಾಡಿದ್ದರೆ, ಆಗ ಈಗ ಬರುತ್ತಿರುವ ಕೊಂಕು ಮಾತುಗಳಿಗೆ ಅರ್ಥವಿರುತ್ತಿತ್ತು. ಆದರೆ ಸ್ವತಃ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೇ ‘ಕೆಎಸ್‌ಡಿ ಎಲ್ ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030ರ ಹೊತ್ತಿಗೆ 5000 ಕೋಟಿ ರು.ಗೆ ಏರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವ ಜನಾಂಗವನ್ನು ತಲುಪಲು ಸಾಮಾಜಿಕ ಜಾಲ ತಾಣದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋಔರ್ಸ್‌ಗಳನ್ನು ಹೊಂದಿರುವ ನಟಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿಯೂ ಮೈಸೂರು ಸ್ಯಾಂಡಲ್ ಸೋಪ್‌ ಗೆ ಮಾರುಕಟ್ಟೆ ಸೃಷ್ಟಿಸಲಾಗುವುದು’ ಎಂದು ಹೇಳಿದ್ದಾರೆ. ಮಾರುಕಟ್ಟೆ ದೃಷ್ಟಿಯಿಂದ ಸರಕಾರದ ಈ ತೀರ್ಮಾನದಲ್ಲಿ ತಪ್ಪೇನಿದೆ?

ವಿರೋಧಿಸುವವರ ನಿಲುವಲ್ಲೇ ವಿರೋಧಾಭಾಸ

ಬಿಜೆಪಿಯ ಹಲವು ನಾಯಕರು ನಟಿ ತಮನ್ನಾ ಅವರ ಆಯ್ಕೆಯನ್ನು ವಿರೋಧಿಸುವುದಕ್ಕೆ ಪ್ರಮುಖ ಕಾರಣ ಆಕೆ ಕರ್ನಾಟಕದವರಲ್ಲ ಎನ್ನುವುದಾಗಿದೆ. ಈ ಹಿಂದೆಯೂ ಇದೇ ವಿಷಯಕ್ಕೆ ಪ್ರತಿಪಕ್ಷಗಳು ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಕರ್ನಾಟಕದಲ್ಲಿರುವ ನಟ-ನಟಿಯರನ್ನು ರಾಯಭಾರಿ ಗಳನ್ನಾಗಿ ಮಾಡಿಕೊಳ್ಳಬೇಕು ಎನ್ನುವುದು ಪ್ರತಿಪಕ್ಷಗಳ ಆಗ್ರಹ. ಆದರೆ ಮೈಸೂರು ಸ್ಯಾಂಡಲ್ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದರೂ, ಅದನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಉದ್ದೇಶ ದಿಂದ ಬಾಲಿವುಡ್‌ನಲ್ಲೂ ಗುರ್ತಿಸಿಕೊಂಡಿರುವ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಮೂಲಕ ಭಾರೀ ಜನಪ್ರಿಯತೆ ಹೊಂದಿರುವ ನಟಿಯನ್ನು ನೇಮಿಸಿಕೊಳ್ಳಲಾಗಿದೆ. ಹೀಗಿರು ವಾಗ, ಉತ್ತರ ಭಾರತ, ಹೊರದೇಶದಲ್ಲಿಯೂ ಪರಿಚಯವಿರುವ ನಟಿಯನ್ನೇ ಆಯ್ಕೆ ಮಾಡಿ ಕೊಳ್ಳುವುದು ಅನಿವಾರ್ಯ. ಈ ವಿಷಯದಲ್ಲಿ ಕರ್ನಾಟಕ ಅಸ್ಮಿತೆ ಎನ್ನುವುದಕ್ಕಿಂತ ಮುಖ್ಯವಾಗಿ, ‘ವ್ಯವಹಾರಿಕ’ ವಾಗಿ ಲಾಭ-ನಷ್ಟವನ್ನು ನೋಡಬೇಕಾಗುತ್ತದೆ.