ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ KGF ಸ್ಟಾರ್ ಜೂ. ರಾಕಿ ಭಾಯ್ ಎಂಟ್ರಿ: ಭಾಗ್ಯ ಲಕ್ ಬದಲಾಗುತ್ತಾ?

ರೆಸಾರ್ಟ್ ಮ್ಯಾನೇಜರ್ ಭಾಗ್ಯಾಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸದ್ಯ ಹೊಸ ಕೆಲಸಕ್ಕೆ ಮತ್ತೆ ಅಲಿಯಬೇಕಾಗಿ ಬಂದಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಗೆ ಜೂನಿಯರ್ ರಾಕಿ ಭಾಯ್ ಎಂಟ್ರಿ ಕೊಟ್ಟು ಭಾಗ್ಯಾಳನ್ನು ಭೇಟಿಯಾಗಿದ್ದಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿಗೆ KGF ಸ್ಟಾರ್ ಜೂ. ರಾಕಿ ಭಾಯ್ ಎಂಟ್ರಿ

Bhagya Lakshmi Serial

Profile Vinay Bhat Mar 21, 2025 12:20 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯಾಳ ಕಷ್ಟದ ದಿನಗಳು ಕೊನೆಗೊಳ್ಳುವ ಎಲ್ಲ ಲಕ್ಷಣ ಕಾಣುತ್ತಿದೆ. ತಾಂಡವ್​ನ ಕುತಂತ್ರದಿಂದ ಇದ್ದ ಒಂದು ಸಣ್ಣ ಕೆಲಸ ಕೂಡ ಕಳೆದುಕೊಂಡಿರುವ ಭಾಗ್ಯ ಸದ್ಯ ಖಾಲಿ ಕೈಯಲ್ಲಿದ್ದಾಳೆ. ಜೋಕರ್ ವೇಷ ಹಾಕಿಕೊಂಡು ರೆಸಾರ್ಟ್​ನಲ್ಲಿ ನೃತ್ಯ ಮಾಡುತ್ತಾಳೆ ಎಂಬ ವಿಚಾರವನ್ನು ತಿಳಿದ ತಾಂಡವ್ ಇದಕ್ಕೂ ಕಲ್ಲು ಹಾಕಿದ್ದಾನೆ. ಪರಿಣಾಮ ರೆಸಾರ್ಟ್ ಮ್ಯಾನೇಜರ್ ಭಾಗ್ಯಾಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸದ್ಯ ಹೊಸ ಕೆಲಸಕ್ಕೆ ಮತ್ತೆ ಅಲಿಯಬೇಕಾಗಿ ಬಂದಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಗೆ ಜೂನಿಯರ್ ರಾಕಿ ಭಾಯ್ ಎಂಟ್ರಿ ಕೊಟ್ಟು ಭಾಗ್ಯಾಳನ್ನು ಭೇಟಿಯಾಗಿದ್ದಾನೆ.

ತಾಂಡವ್ ಮತ್ತು ಶ್ರೇಷ್ಠಾ ಕಡೆಯಿಂದ ಭಾಗ್ಯ ಸಾಕಷ್ಟು ಅವಮಾನ ಅನುಭವಿಸುತ್ತಾಳೆ. ಜೀವನ ಮಾಡೋದು ಅಂದ್ರೆ ಅಡುಗೆ ಮನೆಯಲ್ಲಿ ಸೌಟು ಅಲ್ಲಾಡಿಸಿದಷ್ಟು ಸುಲಭ ಅಂತ ಅಂದುಕೊಂಡಿದ್ಯಾ? ಎಂದು ತಾಂಡವ್ ಹೇಳಿರುವ ಮಾತು ಭಾಗ್ಯಾಳಿಗೆ ನಾಟಿದೆ. ಈ ಮಾತಿನಿಂದ ಆಕೆ ತುಂಬಾ ಬೇಜಾರು ಪಡುತ್ತಾಳೆ. ಆದರೆ, ಇದೇ ಅಂಶ ಭಾಗ್ಯಾಳ ಜೀವನದ ಟರ್ನಿಂಗ್ ಪಾಯಿಂಟ್ ಎಂಬಂತೆ ಕಾಣುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದು ಜೂನಿಯರ್ ರಾಕಿ ಭಾಯ್ ಅನ್ಮೋಲ್‌ ಭಟ್ಕಲ್‌ ಆಡಿದ ಮಾತು.

ಕೆಜಿಎಫ್ ಸಿನಿಮಾದಲ್ಲಿ ಜೂನಿಯರ್ ರಾಕಿ ಭಾಯ್ ಪಾತ್ರ ಮಾಡಿದ್ದ ಹುಡುಗ ಕೂಡ ಎಲ್ಲರಿಗೂ ನೆನಪಿದ್ದೆ ಇರುತ್ತಾನೆ. ಆತ ಅನ್ಮೋಲ್ ಭಟ್ಕಲ್. ಇದೀಗ ಭಾಗ್ಯಲಕ್ಷ್ಮೀ ಧಾರಾವಾಹಿಗೆ ಈತನ ಎಂಟ್ರಿಯಾಗಿದೆ. ಭಾಗ್ಯಾಳ ಲೈಫ್ ಜೂನಿಯರ್ ರಾಕಿ ಭಾಯ್‌ನಿಂದ ಬದಲಾಗುವ ಎಲ್ಲಾ ಸೂಚನೆ ಸಿಕ್ಕಂತಾಗಿದೆ. ಹಿಂದಿನ ಎಪಿಸೋಡ್​ನಲ್ಲಿ ಭಾಗ್ಯ ಹಾಗೂ ಗುಂಡಣ್ಣ ಮನೆಗೆ ಬರೋವಾಗ ಅನ್ಮೋಲ್ ಪರಿಚಯ ಆಗುತ್ತದೆ. ಗುಂಡಣ್ಣ ಈತ ನನ್ನ ಫ್ರೆಂಡ್ ಎಂದು ಭಾಗ್ಯಾಗೆ ಪರಿಚಯ ಮಾಡಿಕೊಡುತ್ತಾನೆ. ಹಾಗೆಯೆ ಅನ್ಮೋಲ್ ಭಾಗ್ಯ ಮಾಡಿದ ಅಡುಗೆಯ ಕೈರುಚಿ ಸವಿದಿರುತ್ತಾನೆ.



ಮರುದಿನ ಭಾಗ್ಯಾಳ ಮನೆಯನ್ನು ಹುಡುಕಿಕೊಂಡು ಬಂದ ಅನ್ಮೋಲ್ ಅವರ ಮನೆಗೆ ಬಂದು ಭಾಗ್ಯಾಳ ಕೈರುಚಿಯನ್ನು ಹೊಗಳುತ್ತಾನೆ. ಜೂನಿಯರ್ ರಾಕಿ ಭಾಯ್ ಇರುವುದು ಹಾಸ್ಟೆಲ್‌ನಲ್ಲಿ. ಭಾಗ್ಯಾಳ ಕೈ ರುಚಿ ಈಗ ಹಾಸ್ಟೆಲ್‌ ಹುಡುಗರಿಗೆ ಇಷ್ಟವಾಗಿದೆ. ನಮ್ಮ ಹಾಸ್ಟೆಲ್‌ ಹುಡುಗರು ಮನೆ ಊಟವನ್ನು ಮಿಸ್‌ ಮಾಡಿಕೊಳ್ತಿದ್ದಾರೆ. ನೀವು ಏನು ಮಾಡಿದ್ರೂ ಚೆನ್ನಾಗಿ ಮಾಡ್ತೀರಾ. ನಿಮ್ಮ ಊಟ ಹಾಸ್ಟೆಲ್‌ ಹುಡುಗರಿಗೆ ಸಿಕ್ಕಿದರೆ ತುಂಬ ಖುಷಿಯಾಗ್ತಾರೆ ಅಂತ ಹೇಳುತ್ತಾನೆ.

ಸದ್ಯ ಭಾಗ್ಯ ಇದೇ ವಿಚಾರವನ್ನು ಗಟ್ಟಿಯಾಗಿ ತೆಗೆದುಕೊಂಡಿದ್ದಾಳೆ. ಹಾಸ್ಟೆಲ್‌ಗೆ ಭಾಗ್ಯಾಳೆ ಅಡುಗೆ ಮಾಡಿಕೊಡುವ ಸಾಧ್ಯತೆ ಇದೆ. ಅಲ್ಲದೆ ಭಾಗ್ಯಗೆ ಹೊಸ ಯೋಚನೆಯೊಂದು ಹೊಳೆದಿದೆ. ಅವಳು ಊಟದ ಡಬ್ಬಗಳನ್ನು ಖರೀದಿಸಿದ್ದಾಳೆ. ಮನೆಯಲ್ಲೇ ಊಟ ತಯಾರಿಸಿ, ಡಬ್ಬಾಕ್ಕೆ ಹಾಕಿ, ಅದನ್ನು ಹೊರಗಡೆ ಮಾರಾಟ ಮಾಡುವ ಯೋಜನೆ ಅವಳದ್ದಾಗಿದೆ. ಹೀಗಾಗಿ ಅವಳು ಮನೆಗೆ ಬಂದು ಈ ವಿಚಾರ ಹೇಳಿದಾಗ, ಪೂಜಾ ಮತ್ತು ಸುಂದರಿ ಅದಕ್ಕೆ ಬೇಡ ಎನ್ನುತ್ತಾರೆ. ಭಾಗ್ಯ ತಾಯಿಯೂ ಮಗಳ ಕೆಲಸ ಸರಿಯಲ್ಲ ಎಂದು ಬೈಯುತ್ತಾರೆ.



ಆದರೆ ಕುಸುಮಾ ಮತ್ತು ಧರ್ಮರಾಜ್ ಮಾತ್ರ, ಭಾಗ್ಯಳ ಕೆಲಸಕ್ಕೆ ಪ್ರೋತ್ಸಾಹ ಕೊಡುತ್ತಾರೆ. ಅವಳ ಯೋಚನೆ ಸರಿಯಾಗಿದೆ, ನಾವು ನಿನ್ನ ಜೊತೆ ಇರುತ್ತೇವೆ ಎಂದು ಬೆನ್ನು ತಟ್ಟುತ್ತಾರೆ. ತನ್ನ ಹೊಸ ಉದ್ಯಮಕ್ಕೆ ಚೆಂದದ ಹೆಸರು ಕೂಡ ಇಟ್ಟಿದ್ದಾಳೆ. ಹೆಸರಿಡೋಕೆ ಸಹಾಯ ಮಾಡಿ ಅಂತ ಗುಂಡಣ್ಣ ಕೇಳಿದಾಗ, ಅವನು ‘ಕೈ ತುತ್ತು’ ಅಂತ ಹೇಳಿದ್ದಾನೆ. ಈ ಮೂಲಕ ಭಾಗ್ಯಾ ತನ್ನದೇ ಸ್ವಂತ ಉದ್ಯಮ ಮಾಡಲು ಹೊರಟಿದ್ದಾಳೆ. ಜೂನಿಯರ್ ರಾಕಿ ಬಾಯ್ ಕೃಪೆಯಿಂದ ಭಾಗ್ಯಾಗೆ ಈ ಯೋಜನೆ ಹೊಳೆದಿದೆ. ಇದು ಯಾವ ರೀತಿ ಸಾಗುತ್ತದೆ?, ತಾಂಡವ್-ಶ್ರೇಷ್ಠಾ ಈ ಕೆಲಸವನ್ನು ಹಾಳು ಮಾಡಲು ಏನು ಪ್ಲ್ಯಾನ್ ಮಾಡುತ್ತಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Chaithra Kundapura: ಬಾಯ್ಸ್ vs ಗರ್ಲ್ಸ್ ನಲ್ಲಿ ನಾಗವಲ್ಲಿಯಾಗಿ ಬದಲಾದ ಚೈತ್ರಾ ಕುಂದಾಪುರ