ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trivikram: ತ್ರಿವಿಕ್ರಮ್-ರಂಜಿತ್ ಸ್ನೇಹದಲ್ಲಿ ಬಿರುಕು?: ನಿಶ್ಚಿತಾರ್ಥಕ್ಕೆ ಬರದಿರಲು ಕಾರಣ ರಿವೀಲ್

ತ್ರಿವಿಕ್ರಮ್ ರಂಜಿತ್ ನಿಶ್ಚಿತಾರ್ಥಕ್ಕೆ ಗೈರಾಗಿದ್ದರು. ಇದರ ಬೆನ್ನಲ್ಲೇ ಇವರಿಬ್ಬರು ಬೇರಾಗಿದ್ದಾರೆ. ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಪೋಸ್ಟ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿತು. ಬಿಗ್ ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ರಂಜಿತ್ ಹಾಗೂ ತ್ರಿವಿಕ್ರಮ್‌ ಮನೆಯಿಂದ ಹೊರ ಬರುತ್ತಿದ್ದಂತೆ ದೂರಾದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ರಂಜಿತ್ ನಿಶ್ಚಿತಾರ್ಥಕ್ಕೆ ತ್ರಿವಿಕ್ರಮ್ ಬರದಿರಲು ಕಾರಣ ರಿವೀಲ್

Ranjith and Trivikram

Profile Vinay Bhat Mar 31, 2025 7:35 AM

ಬಿಗ್ ​ಬಾಸ್ ಕನ್ನಡ​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ (Ranjith Engagement) ಅವರು ಇತ್ತೀಚೆಗಷ್ಟೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲ ಆಪ್ತರನ್ನು ಮಾತ್ರ ಕರೆದು ಮಾರ್ಚ್ 06 ಗುರುವಾದಂದು ತಾನು ಪ್ರೀತಿಸಿದ ಹುಡುಗಿಯ ಜೊತೆ ಎಂಗೇಜ್ ಆಗಿದ್ದರು. ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಮದುವೆ ತಯಾರಿಯಲ್ಲಿರುವ ಈ ಜೋಡಿ ಪ್ರೀ ವೆವೆಡ್ಡಿಂಗ್ ಫೋಟೋ ಶೂಟ್ ಕೂಡ ಮಾಡಿದೆ.

ರಂಜಿತ್ ಅವರ ಎಂಗೇಜ್ಮೆಂಟ್​ಗೆ ಬಿಗ್ ​ಬಾಸ್​ ಸ್ಪರ್ಧಿಗಳು ಕೂಡ ಆಗಮಿಸಿದ್ದರು. ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ ಹಾಗೂ ಭವ್ಯಾ ಗೌಡ ಬಂದು ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭಹಾರೈಸಿದ್ದರು. ಬಂದಿದ್ದ ಬಿಬಿಕೆ 11 ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದರು. ಮಾಧ್ಯಮದ ಜೊತೆ ಮಾತನಾಡುವಾಗ ಕೂಡ ಇವರೆಲ್ಲ ರಂಜಿತ್ ಜೊತೆಗೇ ಇದ್ದರು. ಆದರೆ, ರಂಜಿತ್ ಅವರ ತುಂಬಾ ಕ್ಲೋಸ್ ಫ್ರೆಂಡ್ ತ್ರಿವಿಕ್ರಮ್ ಮಾತ್ರ ಈ ಮುಖ್ಯ ಸಮಾರಂಭಕ್ಕೆ ಬಂದಿರಲಿಲ್ಲ.

ತ್ರಿವಿಕ್ರಮ್ ರಂಜಿತ್ ನಿಶ್ಚಿತಾರ್ಥಕ್ಕೆ ಗೈರಾಗಿದ್ದರು. ಇದರ ಬೆನ್ನಲ್ಲೇ ಇವರಿಬ್ಬರು ಬೇರಾಗಿದ್ದಾರೆ. ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಪೋಸ್ಟ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿತು. ಬಿಗ್ ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ರಂಜಿತ್ ಹಾಗೂ ತ್ರಿವಿಕ್ರಮ್‌ ಮನೆಯಿಂದ ಹೊರ ಬರುತ್ತಿದ್ದಂತೆ ದೂರಾದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೀಗ ರಂಜಿತ್ ಅವರು ತ್ರಿವಿಕ್ರಮ್ ಎಂಗೇಜ್ಮೆಂಟ್​ಗೆ ಬರದಿರಲು ಅಸಲಿ ಕಾರಣವನ್ನು ವಿವರಿಸಿದ್ದಾರೆ.

Lakshmi Baramma Serial: ಮುಕ್ತಾಯದ ಹಂತದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ: ಕ್ಲೈಮ್ಯಾಕ್ಸ್ ಫೋಟೋ ವೈರಲ್

ಖಾಸಗಿ ಯೂಟ್ಯೂಬ್ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ರಂಜಿತ್, ತ್ರಿವಿಕ್ರಮ್‌ಗೆ ನಾನು ಈ ವಿಚಾರ ಹೇಳಿದ ತಕ್ಷಣ ಅತ್ತಿಗೆ ರೆಡಿಯಾದ್ರಾ..ಹಾಗಿದ್ದರೆ ನಿಶ್ಚಿತಾರ್ಥಕ್ಕೆ ನಾವೆಲ್ಲಾ ರೆಡಿ..ರೆಡಿ ಅಂದಿದ್ದ. ಅವನು ಇವರನ್ನು ನೋಡಲು ಕಾಯುತ್ತಿದ್ದ. ಆದರೆ ಅದು ಇನ್ನೂ ಆಗಿಲ್ಲ. ಎರಡು ಸಲ ಭೇಟಿಯಾಗಲು ಪ್ಲಾನ್‌ ಮಾಡಿದ್ದೇವು. ಅದು ಆಗಲಿಲ್ಲ, ಕೊನೆಗೆ ಎಂಗೇಜ್‌ಮೆಂಟ್‌ಗೆ ಬಾ ಎಂದು ಹೇಳಿದೆ. ಅವನು ಕೂಡ ಬಂದೇ ಬರುತ್ತೇನೆ ಎಂದು ಹೇಳಿದ್ದ. ಆದರೆ ಕೊನೆಗೆ ನೋಡಿದರೆ ಅವನಿಗೆ ಹೊಸ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಅದರಿಂದ ಅವನು ಶೂಟಿಂಗ್‌ನಲ್ಲಿ ಬ್ಯೂಸಿಯಾದ ಎಂದು ನಿಜ ಕಾರಣ ತಿಳಿಸಿದ್ದಾರೆ.

ಇತ್ತೀಚಿಗೆ ಫೋನ್‌ ಮಾಡಿದಾಗ ಕೂಡ ಆದಷ್ಟು ಬೇಗ ಸಿಕ್ಕೇ ಸಿಗುತ್ತೇನೆ ಎಂದು ಹೇಳಿದ್ದಾನೆ. ಸದ್ಯಕ್ಕೆ ಹೊಸ ಧಾರಾವಾಹಿ ಶೂಟಿಂಗ್‌ ಇದೆ ಅವನಿಗೆ. ನಾನು ಸಹ ಸಮಯ ಸಿಕ್ಕಾಗ ಸಿಗು ಅಂತಾ ಹೇಳಿದ್ದೇನೆ. ಅಲ್ಲದೇ ಮದುವೆಗೆ ಮಾತ್ರ ಮಿಸ್‌ ಮಾಡಬೇಡಾ ಅಂತಾನೇ ಹೇಳಿದ್ದೇನೆ. ಅವನು ಕೂಡ ಬಂದೇ ಬಂದೇ ಬರುತ್ತೇನೆ ಅಂತಾ ಹೇಳಿದ್ದಾನೆ ಎಂದು ರಂಜಿತ್‌ ಹೇಳಿದ್ದಾರೆ.