Bhagya Lakshmi Serial: ಭಾಗ್ಯಾ ಬದುಕಲ್ಲಿ ಭರವಸೆಯ ಹೊಸ ಮಿಂಚು: ಕೆಲಸ ಸಿಕ್ಕೇ ಬಿಡ್ತು
ದೇವರೆ ಏನಾದರು ಒಂದು ದಾರಿ ತೋರಿಸು.. ನಮ್ಮ ಮನೆಯವರ ಸಮಸ್ಯೆ ಎಲ್ಲ ಪರಿಹಾರ ಆಗೋ ತರ ಒಂದೇ ಒಂದು ದಾರಿ ತೋರಿಸು ಎಂದು ದೇವರ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಾಳೆ. ಆಗ ಬಲಗಡೆಯಿಂದ ಹೂ ಬೀಳುತ್ತದೆ.. ಇದನ್ನು ನೋಡಿ ಭಾಗ್ಯಾಗೆ ಖುಷಿ ಆಗುತ್ತದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾ ಮನೆಯ ಲೋನ್ ಕಟ್ಟಲು ಪರದಾಡುತ್ತಿದ್ದಾಳೆ. ಭಾಗ್ಯಾ ಮನೆಯಲ್ಲಿ ಕಷ್ಟಗಳ ಸರಮಾಲೆಯೇ ಬರುತ್ತಿದೆ. ತಾಂಡವ್-ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಮಾಡಿ ಮನೆಯಲ್ಲಿದ್ದ ಚಿನ್ನವನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ. ಲೋನ್ ಕಟ್ಟಲು ಏನು ಮಾಡೋದು ಎಂದು ಗೊತ್ತಾಗದೆ ಏನಾದರು ಕೆಲಸ ಸಿಗುತ್ತ ಎಂದು ಅಲೆಯುತ್ತಿರುವಾಗ ದಿನಕ್ಕೆ 50,000 ರೂ. ಸಿಗುವ ಕೆಲಸವೊಂದು ಭಾಗ್ಯಾಗೆ ಸಿಕ್ಕಿದೆ. ಇದರಿಂದ ಭಾಗ್ಯಾ ಬದುಕಲ್ಲಿ ಭರವಸೆ ಮೂಡಿದೆ.
ಭಾಗ್ಯಾ ಮನೆಯ ಲೋನ್ ಕಟ್ಟಲು ನಾನಾ ಪ್ರಯತ್ನ ಮಾಡುತ್ತಾಳೆ. ಆದರೆ, ಹಣ ಸಾಕಾಗುವುದಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ ಮನೆಯಲ್ಲಿರುವ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಡಲು ಮುಂದಾಗುತ್ತಾಳೆ. ಆದರೆ, ಈ ವಿಚಾರ ತಾಂಡವ್-ಶ್ರೇಷ್ಠಾಗೆ ಗೊತ್ತಾಗುತ್ತದೆ. ತಾಂಡವ್ ತನ್ನ ಮಗಳು ತನ್ವಿಗೆ ಫೋನ್ ಮಾಡಿ ಭಾಗ್ಯಾಳ ಪ್ಲ್ಯಾನ್ ಏನು ಎಂಬುದನ್ನು ಬಾಯಿ ಬಿಡಿಸಲು ಟ್ರೈ ಮಾಡುತ್ತಾನೆ. ಭಾಗ್ಯಾಳ ಗುಟ್ಟನ್ನು ತನ್ವಿ ರಟ್ಟು ಮಾಡುತ್ತಾಳೆ.
ಅಮ್ಮ ಮನೆಯನ್ನು ಉಳಿಸಿಕೊಳ್ಳಲು ವಿವಿಧ ಪ್ರಯತ್ನ ಮಾಡುತ್ತಿದ್ದಾಳೆ. ಮನೆಯಲ್ಲಿ ಇರುವ ಚಿನ್ನವನ್ನು ಒಟ್ಟುಗೂಡಿಸಿ, ಬ್ಯಾಂಕ್‌ನಲ್ಲಿ ಇಟ್ಟು, ಅದರಲ್ಲಿ ಬಂದ ಹಣದಿಂದ ಸಾಲದ ಕಂತು ಕಟ್ಟುತ್ತಾಳೆ ಎಂದು ಎಲ್ಲ ವಿವರ ತಾಂಡವ್‌ಗೆ ನೀಡುತ್ತಾಳೆ. ಈ ಮೂಲಕ ತಾಂಡವ್‌ಗೆ ಭಾಗ್ಯಳ ಪ್ಲ್ಯಾನ್ ಗೊತ್ತಾಗುತ್ತದೆ. ತಾಂಡವ್-ಶ್ರೇಷ್ಠಾ ನೇರವಾಗಿ ಭಾಗ್ಯಾ ಮನೆಗೆ ಬಂದು, ನಾನು ಈ ಮನೆಯ ಮಾಜಿ ಮಗ, ಈ ಮನೆಯಲ್ಲಿ ನನ್ನದು ಚಿನ್ನ ಇದೆ, ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಅದು ನಾನು ದುಡಿದು, ಕೊಡಿಸಿದ ಚಿನ್ನ, ಹೀಗಾಗಿ ಅದರ ಮೇಲೆ ನನಗೆ ಹಕ್ಕಿದೆ, ಭಾಗ್ಯನಿಗೆ ಅದರ ಮೇಲೆ ಅಕ್ಕಿಲ್ಲ.. ಅದನ್ನು ನಾನೇ ತೆಗೆದುಕೊಂಡು ಹೋಗುವೆ ಎಂದು ತಾಂಡವ್ ಹೇಳುತ್ತಾನೆ.
ಅದರಂತೆ ತಾಂಡವ್-ಶ್ರೇಷ್ಠಾ ಎಲ್ಲ ಚಿನ್ನವನ್ನು ತೆಗೆದುಕೊಂಡು ಹೋಗುತ್ತಾರೆ. ಭಾಗ್ಯಾಗೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆದರೂ ನಾನು ಏನಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡುತ್ತೇನೆ ಎಂದು ಭಾಗ್ಯಾ ಮನೆಯಿಂದ ಹೊರಡುತ್ತಾಳೆ. ಮೊದಲ ಸಲ ಗುರಿಯೇ ಗೊತ್ತಿಲ್ಲದ ದಾರಿ ಕಡೆ ಹೆಜ್ಜೆ ಇಡೋಕೆ ಹೋಗ್ತಾ ಇದ್ದೇನೆ. ಇವತ್ತು ದುಡ್ಡು ಕಟ್ಟಲೇ ಬೇಕು ಎಂಬ ಭಯ.. ಕಟ್ಟೇ ಕಟ್ಟುತ್ತೇನೆ ಎಂಬ ಆತ್ಮವಿಶ್ವಾಸ.. ಇದೆರಡೇ ನನ್ನ ಹತ್ರ ಇರೋದು ಎಂದು ಹೇಳಿ ದೇವಸ್ಥಾನಕ್ಕೆ ತೆರಳುತ್ತಾಳೆ.
ದೇವರೆ ಏನಾದರು ಒಂದು ದಾರಿ ತೋರಿಸು.. ನಮ್ಮ ಮನೆಯವರ ಸಮಸ್ಯೆ ಎಲ್ಲ ಪರಿಹಾರ ಆಗೋ ತರ ಒಂದೇ ಒಂದು ದಾರಿ ತೋರಿಸು ಎಂದು ದೇವರ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತಾಳೆ. ಆಗ ಬಲಗಡೆಯಿಂದ ಹೂ ಬೀಳುತ್ತದೆ.. ಇದನ್ನು ನೋಡಿ ಭಾಗ್ಯಾಗೆ ಖುಷಿ ಆಗುತ್ತದೆ. ಅದರಂತೆ ಭಾಗ್ಯಾಗೆ ದೇವಸ್ಥಾನದಲ್ಲಿ ಅಡುಗೆ ಮಾಡಿ ಕೊಡಲು ಕೆಲಸ ಸಿಗುತ್ತದೆ. ಪುರೋಹಿತರು ಭಾಗ್ಯಾಗೆ ಕೆಲಸ ಮಾಡಿಕೊಡುವಲ್ಲಿ ಸಹಾಯ ಮಾಡುತ್ತಾರೆ.
250 ಜನಕ್ಕೆ ಅಡುಗೆ ಮಾಡಿಕೊಡಬೇಕು.. ನೀನು ಸೋಲ ವಾರದು.. ನನ್ನನ್ನೂ ಸೋಲಲು ಬಿಡಬಾರದು ಎಂದು ಕೆಲಸ ಕೊಡಿಸಿದವರು ಹೇಳುತ್ತಾರೆ. ಇದಕ್ಕೆ ಭಾಗ್ಯಾ, ಖಂಡಿತಾ ಎಲ್ಲ ಅಡುಗೆ ಮಾಡಿ ಕೊಡುತ್ತೇನೆ ಎನ್ನುತ್ತಾಳೆ. ಆದ್ರೆ, ಭಾಗ್ಯಾ ಒಬ್ಬಳೆ ಇರುವುದನ್ನು ಕಂಡು.. ಏನಮ್ಮ ನೀನು ಒಬ್ಬಳೆ ಇದ್ದೀಯಾ.. 250 ಜನಕ್ಕೆ ಹೇಗೆ ಅಡುಗೆ ಮಾಡುತ್ತೀಯ ಎಂದು ಕೇಳುತ್ತಾರೆ. ಅದಕ್ಕೆ ಭಾಗ್ಯಾ ನನ್ನ ಹತ್ರ ಜನ ಇದ್ದಾರೆ.. ನಾನು ಅಡುಗೆ ಮಾಡುತ್ತೇನೆ ಎನ್ನುತ್ತಾಳೆ. ಹೀಗೆ ಭಾಗ್ಯಾ ಅತ್ತೆ ಕುಸುಮಾ ಅವರಿಗೆ ಕಾಲ್ ಮಾಡಿ ಅಡುಗೆ ಮಾಡುವ ಕೆಲಸ ಸಿಕ್ಕಿದೆ.. ಇವತ್ತು ಒಂದು ದಿನ ಅಡುಗೆ ಮಾಡಿದರೆ 50,000 ರೂಪಾಯಿ ನೀಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮನೆಯ ಲೋನ್ ಕಟ್ಟಬಹುದು. ನಿಮ್ಮ ಸಹಾಯ ಬೇಕು ಅತ್ತೆ ಎಂದು ಹೇಳುತ್ತಾಳೆ. ಸದ್ಯ ಭಾಗ್ಯಾ ತನಗೆ ಸಿಕ್ಕಿರುವ ಕೆಲಸವನ್ನು ಹೇಗೆ ನಿಭಾಯಿಸುತ್ತಾಳೆ, ಅಷ್ಟು ಜನರಿಗೆ ಅಡುಗೆ ಮಾಡಿ ಹೇಗೆ ಕೊಡುತ್ತಾಳೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.