Bhavya Gowda: ಕರ್ಣ ಧಾರಾವಾಹಿ ವಿವಾದದ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ಪ್ರತ್ಯಕ್ಷವಾದ ಭವ್ಯಾ ಗೌಡ
ಭವ್ಯಾ ಗೌಡ ಸೋಷಿಯಲ್ ಮೀಡಿಯಾಕ್ಕೆ ಕಮ್ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ನಿಟ್ಟುಸಿರುವ ಬಿಡುವಂತಾಗಿದೆ. ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಭವ್ಯಾ ಇದ್ದಾರೆ. ಇದರ ಜೊತೆಗೆ ಭವ್ಯಾ ತಂಗಿ ಪಾತ್ರದಲ್ಲಿ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ.

Bhaya Gowda Karna Serial

ಝೀ ಕನ್ನಡ ವಾಹಿನಿಯಲ್ಲಿ ಜೂನ್ 16 ರಂದು ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿದ್ದ ಬಹುನಿರೀಕ್ಷಿತ ಹೊಸ ಕರ್ಣ ಧಾರಾವಾಹಿಯ (Karna Serial) ಪ್ರಸಾರವನ್ನು ಕೊನೇ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಿದ್ದು ಗೊತ್ತೇ ಇದೆ. ಈ ಧಾರಾವಾಹಿ ಸದ್ಯಕ್ಕೆ ಟೆಲಿಕಾಸ್ಟ್ ಆಗುವುದಿಲ್ಲ ಎಂಬ ಮಾಹಿತಿಯನ್ನು ವಾಹಿನಿ ನೀಡಿತ್ತು. ಸದ್ಯ ಈ ಧಾರಾವಾಹಿಯ ಹೊಸ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಝೀ ಕನ್ನಡವು ಮಾಹಿತಿ ನೀಡಿದೆ. ಮೂಲಗಳ ಪ್ರಕಾರ ಈ ಧಾರಾವಾಹಿ ಪ್ರಸಾರ ಕಾಣದಿರಲು ಕಾರಣ ಭವ್ಯಾ ಗೌಡ ಎನ್ನಲಾಗುತ್ತಿದೆ.
ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸತ್ತಿದ್ದಾರೆ. ಮೂಲಗಳ ಪ್ರಕಾರ ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್ ಜೊತೆಗೆ ಭವ್ಯಾ ಗೌಡ ಅವರ ಅಗ್ರೀಮೆಂಟ್ ಆಗಿತ್ತು. ಅಗ್ರೀಮೆಂಟ್ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತಿಲ್ಲ. ಇದನ್ನೇ ಇಟ್ಟುಕೊಂಡು ಪ್ರತಿಸ್ಪರ್ಧಿ ಚಾನೆಲ್ ಕೋರ್ಟ್ ಮೆಟ್ಟಿಲೇರಿತು. ಹೀಗಾಗಿ ಕರ್ಣ ಧಾರಾವಾಹಿ ಪ್ರಸಾರಕ್ಕೆ ಸ್ಟೇ ತಂದಿದೆ.
ತನ್ನ ಪ್ರೊಮೋ ಮೂಲಕವೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಯಿತು. ಈ ಧಾರಾವಾಹಿ ಪ್ರಸಾರ ಆಗುತ್ತಿಲ್ಲ ಎಂಬ ಸುದ್ದಿಯ ಜೊತೆಗೆ ಭವ್ಯಾ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಿಂದ ಕರ್ಣ ಧಾರಾವಾಹಿಯ ಎಲ್ಲ ಪೋಸ್ಟರ್ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದರು.
ಈ ವಿವಾದದ ಬಳಿಕ ಭವ್ಯಾ ಅವರು ಸೈಲೆಂಟ್ ಆಗಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಆದರೀಗ ವಿವಾದದ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ಪ್ರಮೋಷನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ. ನೀವು ಇನ್ಸ್ಟಾದಿಂದ ದೂರವಾಗಿಲ್ಲ ಥ್ಯಾಂಕ್ಯು ಗಾಡ್, ಈ ವಿವಾದ ಎಲ್ಲ ಬೇಗ ಮುಗಿದು ಆದಷ್ಟು ಬೇಗ ನಿಮ್ಮನ್ನ ನೋಡಲು ಕಾತುರರಾಗಿದ್ದೇವೆ. ನೀವಿಲ್ಲದೆ ಕರ್ಣ ಧಾರಾವಾಹಿಯನ್ನು ನಾವು ನೋಡುವುದಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
Bhagya Lakshmi Serial: ಓಡಿ ಹೋಗಿ ಮದುವೆ ಆದ ಕಿಶನ್-ಪೂಜಾ?: ತಾಳಿ ಕಟ್ಟುವಾಗ ಬಂದಳು ಭಾಗ್ಯ
ಒಟ್ಟಾರೆ ಭವ್ಯಾ ಗೌಡ ಸೋಷಿಯಲ್ ಮೀಡಿಯಾಕ್ಕೆ ಕಮ್ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ನಿಟ್ಟುಸಿರುವ ಬಿಡುವಂತಾಗಿದೆ. ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಭವ್ಯಾ ಇದ್ದಾರೆ. ಇದರ ಜೊತೆಗೆ ಭವ್ಯಾ ತಂಗಿ ಪಾತ್ರದಲ್ಲಿ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ನಮ್ರತಾ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ ಭವ್ಯಾ ಪಾತ್ರದ ಹೆಸರು ನಿಧಿ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರು ಕಾಣಿಸಿಕೊಳ್ತಿದ್ದಾರೆ.