BBK 11 Finale, Trivikram: ‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ’ ಎಂದ ಬಿಗ್ ಬಾಸ್
ತನ್ನ ಅನುಭವವನ್ನು ಹಂಚಿಕೊಳ್ಳಲು ತ್ರಿವಿಕ್ರಮ್ ಬಂದಾಗ, ‘‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ. ಆಟ ಆಡೋದ್ರಲ್ಲಿ ಉತ್ತಮ.. ಉತ್ತಮೋತ್ತಮ ತ್ರಿವಿಕ್ರಮ’’ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 11ರ (Bigg Boss Kannada 11) ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೇವಲ ಎರಡು ದಿನಗಳು ಮಾತ್ರ ಉಳಿದಿದೆ. ಇಡೀ ನಾಡಿನ ಕುತೂಹಲ ಹೆಚ್ಚಿಸಿರುವ ಈ ಶೋನ ವಿನ್ನರ್ ಯಾರು?, ಕಪ್ ಯಾರು ಗೆಲ್ಲುತ್ತಾರೆ ಎನ್ನುವುದು ಫಿನಾಲೆಯಲ್ಲಿ ಗೊತ್ತಾಗಲಿದೆ. ಕಳೆದ ಬಿಗ್ ಬಾಸ್ನಂತೆ ಈ ಬಾರಿಯ ಫಿನಾಲೆಗೆ 6 ಸ್ಪರ್ಧಿಗಳು ಉಳಿದುಕೊಂಡಿದ್ದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಉಗ್ರಂ ಮಂಜು, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಪೈ, ಹನುಮಂತ ಹಾಗೂ ರಜತ್ ಕಿಶನ್ ನಡುವೆ ಒಬ್ಬರಿಗೆ ಮಾತ್ರ ಆ ಅದೃಷ್ಟ ಒಲಿದು ಬರಲಿದೆ.
ಹೀಗಿರುವಾಗ ಈ ಆರೂ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವಗಳನ್ನು ಜನರ ಜೊತೆ ಹಂಚಿಕೊಳ್ಳಲಿದ್ದಾರೆ. ಬಿಗ್ ಬಾಸ್ ಜರ್ನಿ ಹೇಗಿತ್ತು, ಅಲ್ಲಿನ ಅಡೆತಡೆಗಳು ಏನು, ಯಾರು ಟಾರ್ಗೆಟ್ ಮಾಡಿದರು, ಟಾಸ್ಕ್ಗಳನ್ನು ಹೇಗೆಲ್ಲಾ ಆಡಲಾಯಿತು ಎನ್ನುವ ಮಾಹಿತಿಯನ್ನು ಅಭಿಮಾನಿ ದೇವರುಗಳ ಜೊತೆ ಶೇರ್ ಮಾಡಿಕೊಳ್ಳಲಿದ್ದಾರೆ. ನನಗೆ ವೋಟ್ ಮಾಡಿ ಗೆಲ್ಲಿಸಿ ಎಂದು ತಮ್ಮದೇ ಮಾದರಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ವೋಟ್ ಕೇಳಲಿದ್ದಾರೆ.
ಇದಕ್ಕಾಗಿ ಬಿಗ್ ಬಾಸ್ ವೇದಿಕೆ ಕೂಡ ಸಿದ್ಧ ಪಡಿಸಿದ್ದಾರೆ. ಗಾರ್ಡರ್ ಏರಿಯಾ ಪೂರ್ತಿ ಅಭಿಮಾನಿಗಳು ತುಂಬಿದ್ದು ತಮ್ಮ ನೆಚ್ಚಿನ ಸ್ಪರ್ಧಿಗಳ ಪೋಸ್ಟರ್ ಹಿಡಿದು ಲವ್ ಯು ತ್ರಿವಿಕ್ರಮ್, ವೋಟ್ ಫಾರ್ ಹನುಮಂತ ಎಂದೆಲ್ಲ ಬರೆದುಕೊಂಡು ಬಂದಿದ್ದಾರೆ. ಫಿನಾಲೆ ಕಂಟೆಸ್ಟೆಂಟ್ಗಳು ಒಬ್ಬೊಬ್ಬರಾಗಿ ಗಾರ್ಡರ್ ಏರಿಯಾದಲ್ಲಿರುವ ಕಟಕಟೆಯಲ್ಲಿ ನಿಂತು ತಮ್ಮ ಜರ್ನಿಯ ಬಗ್ಗೆ ಹೇಳಿ ವೋಟ್ ಮಾಡುವಂತೆ ಕೇಳಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತ್ರಿವಿಕ್ರಮ್ ಅವರು ಕಪ್ ಗೆಲ್ಲುವ ಸನಿಹದಲ್ಲೇ ಇದ್ದಾರೆ. ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ಉತ್ತಮ ಆಟಗಾರ ಹಾಗೂ ಮಾತುಗಾರ ಎನಿಸಿಕೊಂಡಿರುವ ಇವರು ಅನೇಕ ಬಾರಿ ಟಾಸ್ಕ್ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇದೀಗ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದಾರೆ.
ಬಿಗ್ ಬಾಸ್ ಮನೆಯ ಜರ್ನಿ ಹೇಗಿತ್ತು ಎಂದು ಅಭಿಮಾನಿಗಳ ಜೊತೆ ಇಂದು ರಾತ್ರಿಯ ಎಪಿಸೋಡ್ನಲ್ಲಿ ಕಂಟೆಸ್ಟೆಂಟ್ಸ್ ಹಂಚಿಕೊಳ್ಳಲಿದ್ದಾರೆ. ತನ್ನ ಅನುಭವವನ್ನು ಹಂಚಿಕೊಳ್ಳಲು ತ್ರಿವಿಕ್ರಮ್ ಬಂದಾಗ, ‘‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ. ಆಟ ಆಡೋದ್ರಲ್ಲಿ ಉತ್ತಮ.. ಉತ್ತಮೋತ್ತಮ ತ್ರಿವಿಕ್ರಮ’’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮಲ್ಲಿ ಒಬ್ಬ ಅಣ್ಣನೊ-ತಮ್ಮನೊ-ಮಗನೊ ಆಗಿ ನುಗ್ಗೊಂಡು ಬಂದು ನಿಂತುಕೊಂಡರೆ ಈ ತರ ಇರ್ತಾನೆ ಅಂದುಕೊಳ್ಳಿ ಎಂದಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳ ಸಾರ್ಥಕ ಕ್ಷಣಗಳು!
— Colors Kannada (@ColorsKannada) January 23, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/F7hrc9Das6
ಇನ್ನು ಮೋಕ್ಷಿತಾ ಬಗ್ಗೆ ಮಾತನಾಡಿದ ಬಿಗ್ ಬಾಸ್, ‘‘ಈ ಮನೆಯಲ್ಲಿ ಸರಳತೆಗೆ ಮತ್ತೊಂದು ಹೆಸರು ಮೋಕ್ಷಿತಾ’’ ಎಂದು ಹೇಳಿದ್ದಾರೆ. ‘‘ಬಿಗ್ ಬಾಸ್ನ ಈ ಸೀಸನ್ನ ಒಂದು ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ತ್ರತಿಭೆ ಹನುಮಂತ.. ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’’ ಎಂದು ಹನುಮಂತು ಬಗ್ಗೆ ಬಿಗ್ ಬಾಸ್ ಮಾತನಾಡಿದ್ದಾರೆ.
BBK 11: ಅಭಿಮಾನಿಗಳ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್: ಉಳಿದಿರೋದು ಕೇವಲ ತೀರ್ಪು