ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BBK 11: ಅಭಿಮಾನಿಗಳ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್: ಉಳಿದಿರೋದು ಕೇವಲ ತೀರ್ಪು

ಇದೀಗ ಇಂದಿ ಬಿಗ್ ಬಾಸ್ ಮನೆಗೆ ಅಭಿಮಾನಿ ದೇವರಿಗಳು ಬಂದಿದ್ದಾರೆ. ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್, ಉಳಿದಿರೋದು ಕೇವಲ ತೀರ್ಪು ಎಂದು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರೊಮೊ ಹಂಚಿಕೊಂಡಿದೆ.

ಅಭಿಮಾನಿಗಳ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್: ಉಳಿದಿರೋದು ಕೇವಲ ತೀರ್ಪು

BBK 11 Fans

Profile Vinay Bhat Jan 23, 2025 8:20 AM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಕೊನೆಯ ಘಟ್ಟದಲ್ಲಿದೆ. ಸುಮಾರು 17 ವಾರಗಳ ಕಾಲ ನಡೆದುಕೊಂಡ ಬಂದ ಶೋ ಈಗ ಅಂತ್ಯದ ಸಮೀಪದಲ್ಲಿದೆ. ಇನ್ನೇನು ಕೇವಲ ಎರಡು ದಿನಗಳಲ್ಲಿ ಗ್ರ್ಯಾಂಡ್ ಫಿನಾಲೇ ನಡೆಯಲಿದ್ದು, ಬಿಬಿಕೆ 11 ವಿನ್ನರ್ ಯಾರು ಎಂಬುದು ಘೋಷಣೆ ಆಗಲಿದೆ. ಸದ್ಯ ಫಿನಾಲೆ ಕಂಟೆಸ್ಟೆಂಟ್ ಆಗಿ ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಕಿಶನ್ ಇದ್ದಾರೆ. ಇದೀಗ ಫಿನಾಲೇ ವೀಕ್​ನಲ್ಲಿ ಬಿಗ್ ಬಾಸ್ ಮನೆಗೆ ಅಭಿಮಾನಿಗಳು ಬಂದಿದ್ದಾರೆ.

ಫಿನಾಲೆ ವೀಕ್ ಆಗಿರುವ ಕಾರಣ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್ ಏನನ್ನು ನೀಡಲಾಗುತ್ತಿಲ್ಲ. ಬದಲಾಗಿ ಮಂಗಳವಾರ-ಬುಧವಾರ ಮನೆಯೊಳಗೆ ಕಲರ್ಸ್ ಕನ್ನಡ ಫ್ಯಾಮಿಲಿ ಮೆಂಬರ್ಸ್ ಬಂದು ಹೋದರು. ಮಂಗಳವಾರ ಯಜಮಾನ ಸೀರಿಯಲ್ ತಂಡದ ಮುಖ್ಯ ಪಾತ್ರಧಾರಿಗಳು ಬಂದಿದ್ದರು. ಬುಧವಾರ ಮಜಾ ಟಾಕೀಸ್ ತಂಡ ಹಾಗೂ ಜನವರಿ 27 ರಿಂದ ಆರಂಭವಾಗಲಿರುವ ಹೊಸ ವಧು ಧಾರಾವಾಹಿ ತಂಡದ ವಧು ಮತ್ತು ಸಾರ್ಥಕ್ ದೊಡ್ಮನೆಗೆ ಬಂದರು. ಇವರನ್ನು ಕಂಡು ಸ್ಪರ್ಧಿಗಳು ಫುಲ್ ಖುಷಿ ಆಗಿದ್ದು, ಸಖತ್ ಎಂಜಾಯ್ ಮಾಡಿದರು.

ಇದೀಗ ಇಂದಿ ಬಿಗ್ ಬಾಸ್ ಮನೆಗೆ ಅಭಿಮಾನಿ ದೇವರಿಗಳು ಬಂದಿದ್ದಾರೆ. ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಫಿನಾಲೆ ಕಂಟೆಸ್ಟೆಂಟ್ಸ್, ಉಳಿದಿರೋದು ಕೇವಲ ತೀರ್ಪು ಎಂದು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರೊಮೊ ಹಂಚಿಕೊಂಡಿದೆ. ತನ್ನ ಕಂಪ್ಲೀಟ್ ಜರ್ನಿಯನ್ನು ನೆರೆದಿರುವ ಪ್ರೇಕ್ಷಕ ಪ್ರಭುಗಳ ಎದುರು ಬಿಚ್ಚಿಡುತ್ತಿರೊ ಫಿನಾಲೆ ಕಂಟೆಸ್ಟೆಂಟ್ ಎಂದು ಪ್ರೊಮೋದಲ್ಲಿದೆ.

ಗಾರ್ಡರ್ ಏರಿಯಾ ಪೂರ್ತಿ ಅಭಿಮಾನಿಗಳು ತುಂಬಿದ್ದು ತಮ್ಮ ನೆಚ್ಚಿನ ಸ್ಪರ್ಧಿಗಳ ಪೋಸ್ಟರ್ ಹಿಡಿದು ಲವ್ ಯು ತ್ರಿವಿಕ್ರಮ್, ವೋಟ್ ಫಾರ್ ಹನುಮಂತ ಎಂದೆಲ್ಲ ಬರೆದುಕೊಂಡು ಬಂದಿದ್ದಾರೆ. ಫಿನಾಲೆ ಕಂಟೆಸ್ಟೆಂಟ್​ಗಳು ಒಬ್ಬೊಬ್ಬರಾಗಿ ಗಾರ್ಡರ್ ಏರಿಯಾದಲ್ಲಿರುವ ಕಟಕಟೆಯಲ್ಲಿ ನಿಂತು ತಮ್ಮ ಜರ್ನಿಯ ಬಗ್ಗೆ ಹೇಳಿ ವೋಟ್ ಮಾಡುವಂತೆ ಕೇಳಿಕೊಳ್ಳಬೇಕು.



ಮೊದಲಿಗೆ ಬಂದ ಹನುಮಂತು, ನಿಮ್ಮನ್ನ ನೋಡಿ ಹೆದರಿಗೆ ಆಗುತ್ತದೆ ಎಂದು ಹೇಳಿದ್ದಾರೆ. ತ್ರಿವಿಕ್ರಮ್ ಮಾತನಾಡಿ ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮಲ್ಲಿ ಒಬ್ಬ ಅಣ್ಣನೊ-ತಮ್ಮನೊ-ಮಗನೊ ಆಗಿ ನುಗ್ಗೊಂಡು ಬಂದು ನಿಂತುಕೊಂಡರೆ ಈ ತರ ಇರ್ತಾನೆ ಅಂದುಕೊಳ್ಳಿ ಎಂದಿದ್ದಾರೆ. ಇಲ್ಲಿ ಬಂದಿರೋದು ನಾವು ಒಬ್ರೆ.. ಆಟ ಆಡೋದು ನಾವು ಒಬ್ರೆ.. ಗೆಲ್ಲೋದು ಒಬ್ರೆ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ.

Kannada Bigg Boss 11 Grand Finale Voting: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು ವಿನ್ ಆಗಬೇಕಾದ್ರೆ ವೋಟ್ ಮಾಡೋದು ಹೇಗೆ?