Bigg Boss 11 Grand Finale Winner: ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಎತ್ತಿ ಹಿಡಿದ ಹನುಮಂತ: ತ್ರಿವಿಕ್ರಮ್ ರನ್ನರ್-ಅಪ್
ಕೊನೆಯಲ್ಲಿ ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಅಂತಿಮವಾಗಿ ಹನುಮಂತ ಅವರ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಎಲ್ಲರೂ ತ್ರಿವಿಕ್ರಮ್ ಜಯಶಾಲಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈ ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇವರು 50 ಲಕ್ಷ ಹಣವನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಬಿಬಿಕೆ 11ನ ವಿಕಿಪೀಡಿಯಾ ಪೇಜ್ನಲ್ಲಿ ಕೂಡ ಅಧಿಕೃತ ಘೋಷಣೆಗು ಮುನ್ನವೇ ಹನುಮಂತ ಹೆಸರೇ ವಿನ್ನರ್ ಎಂದಿತ್ತು.
ಬಿಬಿಕೆ 11 ಫಿನಾಲೆಗೆ ಆರು ಜನರ ಕಂಟೆಸ್ಟೆಂಟ್ ಇದ್ದರು. ಭವ್ಯಾ ಗೌಡ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ರಜತ್ ಕಿಶನ್ ಹಾಗೂ ಮೋಕ್ಷಿತಾ ಫಿನಾಲೆ ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶನಿವಾರ ಭವ್ಯಾ ಗೌಡ ಮೊದಲಿಗರಾಗಿ ಹೊರಬಂದರು. ಬಳಿಕ ಉಗ್ರಂ ಮಂಜು 4ನೇ ರನ್ನರ್ ಅಪ್ ಆಗಿ ಆಚೆ ಬಂದರು. 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಹೊರಬಂದರು.
ಕೊನೆಯಲ್ಲಿ ರಜತ್ ಕಿಶನ್, ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಸ್ಟೇಜ್ಗೆ ಬರುವ ಮುನ್ನ ಸುದೀಪ್ ಅವರು ಬಿಗ್ ಬಾಸ್ ಮನೆಯ ಮೈನ್-ಸ್ವಿಚ್ ಆಫ್ ಮಾಡಿ ಎಲ್ಲ ಲೈಟ್ಗಳನ್ನು ನಂದಿಸಿ ಹೊರಟರು.
ಸ್ಟೇಜ್ ಮೇಲೆ ನಡೆದ ರೆಡ್ ಲೈಟ್ - ಗ್ರೀನ್ ಲೈಟ್ ಚಟುವಟಿಕೆಯಲ್ಲಿ ರೆಡ್ ಲೈಟ್ ಪಡೆದುಕೊಂಡು 2ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಹೊರಗುಳಿದರು. ಅಂತಿಮವಾಗಿ ಹನುಮಂತ ತ್ರಿವಿಕ್ರಮ್ ಪೈಕಿ ಕಿಚ್ಚ ಸುದೀಪ್ ಅವರು ಹಳ್ಳಿ ಹೈದನ್ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದಾರೆ. ತ್ರಿವಿಕ್ರಮ್ ರನ್ನರ್-ಅಪ್ ಆಗಿದ್ದಾರೆ. ಟ್ರೋಫಿ ಗೆಲ್ಲ ಬೇಕು ಎಂಬುದು ಹನುಮಂತ ಅವರ ದೊಡ್ಡ ಕನಸು ಆಗಿರಲಿಲ್ಲ. ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೆ ದೊಡ್ಡ ಗೆಲುವು ಎಂದಿದ್ದರು. ಅತ್ತ ತ್ರಿವಿಕ್ರಮ್ ಅವರಿಗೆ ಟ್ರೋಫಿ ಗೆಲ್ಲುವುದು ದೊಡ್ಡ ಕನಸಾಗಿತ್ತು. ಇದೀಗ ಆ ಕನಸು ನುಚ್ಚುನೂರಾಗಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸೀಸನ್ 11ರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ. ಹೀಗಾಗಿಯೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆಲ್ಲಬಹುದು ಎನ್ನಲಾಗಿತ್ತು, ಅದೀಗ ನಿಜವಾಗಿದೆ.
ಹನುಮಂತ ಅವರು ಇಡೀ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಪ್ಲೇಯರ್ ಎನಿಸಿಕೊಂಡಿರುವ ಇವರು ಅನೇಕ ಬಾರಿ ಟಾಸ್ಕ್ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಫಿನಾಲೆ ವೀಕ್ನಲ್ಲಿ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದರು. ‘‘ಬಿಗ್ ಬಾಸ್ನ ಈ ಸೀಸನ್ನ ಒಂದು ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ತ್ರತಿಭೆ ಹನುಮಂತ.. ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’’ ಎಂದಿದ್ದರು.
BBK 11 Final: ಬಿಗ್ ಬಾಸ್ ಟೈಟಲ್ ಗೆಲ್ಲುವ ಮೋಕ್ಷಿತಾ ಕನಸು ಭಗ್ನ; 4ನೇ ಸ್ಥಾನಕ್ಕೆ ತೃಪ್ತಿ