Bigg Boss 11 Runner up Prize Money: ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ಗೆ ಸಿಕ್ಕ ಹಣವೆಷ್ಟು ಗೊತ್ತೇ?
ತ್ರಿವಿಕ್ರಮ್ ಅವರು 2 ಕೋಟಿಗೂ ಹೆಚ್ಚು ವೋಟ್ ಪಡೆದಿದ್ದಾರೆ. ಇದು ಕಳೆದ ಬಾರ ಬಿಗ್ ಬಾಸ್ ವಿನ್ನರ್ನ ವೋಟ್ ಆಗಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಎಲ್ಲರೂ ತ್ರಿವಿಕ್ರಮ್ ಜಯಶಾಲಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈ ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಹನುಮಂತನಿಗೆ (5,23,89,318) 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್ಸ್ ಬಂದಿದೆ. ತ್ರಿವಿಕ್ರಮ್ಗೆ ರನ್ನರ್- ಅಪ್ ಪಟ್ಟ ಸಿಕ್ಕಿದೆ.
ಬಿಬಿಕೆ 11 ಫಿನಾಲೆಗೆ ಆರು ಜನರ ಕಂಟೆಸ್ಟೆಂಟ್ ಇದ್ದರು. ಭವ್ಯಾ ಗೌಡ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ರಜತ್ ಕಿಶನ್ ಹಾಗೂ ಮೋಕ್ಷಿತಾ ಫಿನಾಲೆ ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶನಿವಾರ ಭವ್ಯಾ ಗೌಡ ಮೊದಲಿಗರಾಗಿ ಹೊರಬಂದರು. ಬಳಿಕ ಉಗ್ರಂ ಮಂಜು 4ನೇ ರನ್ನರ್ ಅಪ್ ಆಗಿ ಆಚೆ ಬಂದರು. 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಹೊರಬಂದರು.
ಕೊನೆಯಲ್ಲಿ ರಜತ್ ಕಿಶನ್, ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಸ್ಟೇಜ್ಗೆ ಬರುವ ಮುನ್ನ ಸುದೀಪ್ ಅವರು ಬಿಗ್ ಬಾಸ್ ಮನೆಯ ಮೈನ್-ಸ್ವಿಚ್ ಆಫ್ ಮಾಡಿ ಎಲ್ಲ ಲೈಟ್ಗಳನ್ನು ನಂದಿಸಿ ಹೊರಟರು.
ಸ್ಟೇಜ್ ಮೇಲೆ ನಡೆದ ರೆಡ್ ಲೈಟ್ - ಗ್ರೀನ್ ಲೈಟ್ ಚಟುವಟಿಕೆಯಲ್ಲಿ ರೆಡ್ ಲೈಟ್ ಪಡೆದುಕೊಂಡು 2ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಹೊರಗುಳಿದರು. ಅಂತಿಮವಾಗಿ ಹನುಮಂತ ತ್ರಿವಿಕ್ರಮ್ ಪೈಕಿ ಕಿಚ್ಚ ಸುದೀಪ್ ಅವರು ಹಳ್ಳಿ ಹೈದನ್ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು.
ತ್ರಿವಿಕ್ರಮ್ ರನ್ನರ್-ಅಪ್ ಆಗಿದ್ದಾರೆ. ಟ್ರೋಫಿ ಗೆಲ್ಲ ಬೇಕು ಎಂಬುದು ಹನುಮಂತ ಅವರ ದೊಡ್ಡ ಕನಸು ಆಗಿರಲಿಲ್ಲ. ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೆ ದೊಡ್ಡ ಗೆಲುವು ಎಂದಿದ್ದರು. ಅತ್ತ ತ್ರಿವಿಕ್ರಮ್ ಅವರಿಗೆ ಟ್ರೋಫಿ ಗೆಲ್ಲುವುದು ದೊಡ್ಡ ಕನಸಾಗಿತ್ತು. ಇದೀಗ ಆ ಕನಸು ನುಚ್ಚುನೂರಾಗಿದೆ. ಆದರೆ, ರನ್ನರ್ ಅಪ್ ಆಗಿದ್ದು ಖುಷಿ ಇದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ತ್ರಿವಿಕ್ರಮ್ ಅವರು 2 ಕೋಟಿಗೂ ಹೆಚ್ಚು ವೋಟ್ ಪಡೆದಿದ್ದಾರೆ. ಇದು ಕಳೆದ ಬಾರ ಬಿಗ್ ಬಾಸ್ ವಿನ್ನರ್ನ ವೋಟ್ ಆಗಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಅತ್ತ ಹನುಮಂತ ಅವರಿಗೆ 50 ಲಕ್ಷ ಮತ್ತು ಟ್ರೋಫಿ ಸಿಕ್ಕಿದೆ.
ತ್ರಿವಿಕ್ರಮ್ ಅವರು ಇಡೀ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಳ್ಳೆಯ ಪ್ಲೇಯರ್ ಹಾಗೂ ಮಾತುಗಾರ ಎನಿಸಿಕೊಂಡಿರುವ ಇವರು ಅನೇಕ ಬಾರಿ ಟಾಸ್ಕ್ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಫಿನಾಲೆ ವೀಕ್ನಲ್ಲಿ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದರು. ‘‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ. ಆಟ ಆಡೋದ್ರಲ್ಲಿ ಉತ್ತಮ.. ಉತ್ತಮೋತ್ತಮ ತ್ರಿವಿಕ್ರಮ’’ ಎಂದು ಬಿಗ್ ಬಾಸ್ ಹೇಳಿದ್ದರು.