ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trivikram: ಇನ್​ಸ್ಟಾ ಮೂಲಕ ಮುದ್ದು ಸೊಸೆ ಧಾರಾವಾಹಿ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ತ್ರಿವಿಕ್ರಮ್

Muddu Sose Kannada Serial: ಈ ಕುರಿತು ತ್ರಿವಿಕ್ರಮ್ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಮಾ ಜೊತೆ ಬೈಕ್ನಲ್ಲಿ ಕುಳಿತುಕೊಂಡಿರುವ ಫೋಟೋ ಅಪ್ಲೋಡ್ ಮಾಡಿರುವ ತ್ರಿವಿಕ್ರಮ್, ‘‘ವಿದ್ಯಾ & ಭದ್ರ ಆದಷ್ಟು ಬೇಗ ನಿಮ್ಮ ಮುಂದೆ’’ ಎಂದು ಬರೆದುಕೊಂಡಿದ್ದಾರೆ.

ಮುದ್ದು ಸೊಸೆ ಧಾರಾವಾಹಿ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ತ್ರಿವಿಕ್ರಮ್

Trivikram Muddu Sose

Profile Vinay Bhat Mar 24, 2025 6:55 AM

ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಶುರುವಾಗಲಿದೆ. ಈ ಸೀರಿಯಲ್​ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್​ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ (Muddu Sose Kannada Serial) ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೆ ಪ್ರೋಮೋ ಕೂಡ ರಿಲೀಸ್​ ಆಗಿತ್ತು. ಇದೀಗ ತ್ರಿವಿಕ್ರಮ್ ಈ ಧಾರಾವಾಹಿ ಕುರಿತು ಹೊಸ ಅಪ್ಡೇಟ್ ಕೊಟ್ಟಿದ್ದಾರೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂದ್ದರು. ಬಳಿಕ ಮದುವೆ ಮನೆಯಲ್ಲಿ ತ್ರಿವಿಕ್ರಮ್ ತಾಳಿ ಕಟ್ಟುವ ವೇಳೆ ಪೊಲೀಸರು ಬಂದು ತಡೆದಿದ್ದನ್ನು ತೋರಿಸಲಾಗಿತ್ತು. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಸದ್ಯದಲ್ಲೇ ಪ್ರಸಾರ ಕಾಣಲಿದೆ.

ಈ ಕುರಿತು ತ್ರಿವಿಕ್ರಮ್ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಮಾ ಜೊತೆ ಬೈಕ್​ನಲ್ಲಿ ಕುಳಿತುಕೊಂಡಿರುವ ಫೋಟೋ ಅಪ್ಲೋಡ್ ಮಾಡಿರುವ ತ್ರಿವಿಕ್ರಮ್, ‘‘ವಿದ್ಯಾ & ಭದ್ರ ಆದಷ್ಟು ಬೇಗ ನಿಮ್ಮ ಮುಂದೆ’’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳಂತು ತ್ರಿವಿಕ್ರಮ್ ಅವರನ್ನು ನೋಡಲು ಕಾದು ಕುಳಿತಿದ್ದಾರೆ.

ಮೊನ್ನೆಯಷ್ಟೆ ಬಿಡುಗಡೆಯಾದ ಪ್ರೊಮೋದಲ್ಲಿ ಹೀರೋ-ಹೀರೋಯಿನ್‌ ಮದುವೆ ನಡೆಯುತ್ತಿರುತ್ತದೆ. ಇನ್ನೂ ಹತ್ತನೇ ಕ್ಲಾಸ್‌ ಓದುತ್ತಿದ್ದ ನಾಯಕಿ ವಿದ್ಯಾಗೆ ಈಗಲೇ ಮದುವೆ ಆಗೋ ಆಸೆ ಇರೋದಿಲ್ಲ. ಈ ಮದುವೆ ಬೇಡ ಎಂದರೂ ಯಾರೂ ಅವಳ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಹೀಗಾಗಿ ಅವಳು ಮದುವೆ ದಿನ ಪೊಲೀಸರಿಗೆ ಫೋನ್‌ ಮಾಡಿ, ಬಾಲ್ಯವಿವಾಹ ಆಗುತ್ತಿದೆ ಎಂದು ವಿಷಯ ತಿಳಿಸುತ್ತಾಳೆ. ಇನ್ನೇನು ಹೀರೋ, ವಿದ್ಯಾಗೆ ತಾಳಿ ಕಟ್ತಾನೆ ಎನ್ನುವಷ್ಟರಲ್ಲಿ ಪೊಲೀಸರ ಆಗಮನ ಆಗುತ್ತದೆ.

ಹಸೆಮಣೆ ಮೇಲೆ ಕೂತಿದ್ದ ತ್ರಿವಿಕ್ರಮ್​ಗೆ ಅರ್ಚಕರು ದೇವರಿಗೆ ನಮಸ್ಕಾರ ಮಾಡಿ ಎಂದಾಗ, ನನಗೆ ಹಾಗೂ ನಮ್ಮ ನೆರೆಯವರಿಗೆ ನಮ್ಮ ಅಪ್ಪಯ್ಯನ ದೇವರು. ಅವರಿಗೆ ಆಲ್ ರೆಡಿ ನಮಸ್ಕಾರ ಮಾಡಿ ಆಗಿದೆ. ನೀವೂ ಮುಂದುವರೆಸಿ ಎಂದಿದ್ದಾರೆ. ಹಾಗೇ ತಾಳಿ ಕಟ್ಟುವ ಸಮಯಕ್ಕೆ ಬಂದ ಪೊಲೀಸರು, ಇಷ್ಟು ಚಿಕ್ಕವಯಸ್ಸಿಗೆನೆ ಮದುವೆ ಮಾಡಿಕೊಳ್ಳುತ್ತಿರುವುದು ಅಪರಾಧ ಎಂದು ತ್ರಿವಿಕ್ರಮ್ ತಂದೆಯನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ, ಈ ಮದುವೆನಾ ನಿಲ್ಲಿಸೋದಕ್ಕೆ ಪೊಲೀಸರನ್ನ ಕರೆಸಿ, ನಮ್ಮ ಅಪ್ಪಯ್ಯನ ಅರೆಸ್ಟ್ ಆಗುವಂತೆ ಮಾಡಿರೋರು ಇಲ್ಲಿನೇ ಇದ್ದೀರಾ ಅಂತ ಗೊತ್ತು. ಅದು ಯಾವನೇ ಆಗಿದ್ದರು ಸುಮ್ಮನೆ ಬಿಡಕ್ಕಿಲ್ಲ. ಏನಮ್ಮಿ ಈ ಜನ್ಮದಲ್ಲಿ ನೀನೆ ನನ್ನ ಹೆಂಡತಿ ಎಂಬ ಡೈಲಾಗ್ ಹೊಡೆದಿದ್ದಾರೆ ತ್ರಿವಿಕ್ರಮ್. ಇವರ ಹಳ್ಳಿ ಸೊಗಡಿನ ಮಾತಿನ ಶೈಲಿ ಕಂಡು ಅಭಿಮಾನಿ ಫಿದಾ ಆಗಿದ್ದು, ಹೊಸ ಧಾರಾವಾಹಿಗಾಗಿ ಕಾದು ಕುಳಿತಿದ್ದಾರೆ. ಅಂದಹಾಗೆ ಮುದ್ದು ಸೊಸೆ ತಮಿಳು ಧಾರಾವಾಹಿಯ ರಿಮೇಕ್​ ಆಗಿದೆ.

Puttakkana Makkalu: ವೀಕ್ಷಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಪುಟ್ಟಕ್ಕನ ಮಕ್ಕಳು: ಸೀರಿಯಲ್​ನಿಂದ ಹೊರಬಂದ ಮತ್ತೊಬ್ಬ ನಟಿ