Puttakkana Makkalu: ವೀಕ್ಷಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಪುಟ್ಟಕ್ಕನ ಮಕ್ಕಳು: ಸೀರಿಯಲ್ನಿಂದ ಹೊರಬಂದ ಮತ್ತೊಬ್ಬ ನಟಿ
ಪುಟ್ಟಕ್ಕನ ಮಕ್ಕಳು ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಮೊದಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಈ ಧಾರಾವಾಹಿಯಿಂದ ಈಗ ಮತ್ತೊಬ್ಬ ನಟಿ ಹೊರಬಂದಿದ್ದಾರೆ.

Puttakkana Makkalu Serial

ಕೆಲವು ತಿಂಗಳುಗಳ ಹಿಂದೆ ಧಾರಾವಾಹಿ ಟಿಆರ್ಪಿಯಲ್ಲಿ ನಂಬರ್ ಸ್ಥಾನದಲ್ಲಿದ್ದು ಕಿರುತೆರೆ ಲೋಕವನ್ನು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ವರ್ಷದ ಹತ್ತನೇ ವಾರ ಈ ಧಾರಾವಾಹಿಗೆ ಸಿಕ್ಕ ಟಿವಿಆರ್ ಕೇವಲ 4.6. ಸೀರಿಯಲ್‌ನಲ್ಲಿ ಆದ ಪಾತ್ರಗಳ ಬದಲಾವಣೆ ದೊಡ್ಡ ಹೊಡೆತ ಬಿದ್ದಿತು. ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಮೊದಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಈ ಧಾರಾವಾಹಿಯಿಂದ ಈಗ ಮತ್ತೊಬ್ಬ ನಟಿ ಹೊರಬಂದಿದ್ದಾರೆ.
ಈ ಹಿಂದೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿದ್ದಳು ಮಗಳು ಸ್ನೇಹಾ. ಕಷ್ಟಗಳನ್ನು ಎದುರಿಸಿ ಐಎಎಸ್ ಪರೀಕ್ಷೆ ಬರೆದು ಡಿಸಿ ಆಗಿದ್ದಳು. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಆದರೆ, ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಹೀಗೆ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೆ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರ ಈ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ, ಡಿಸಿ ಸ್ನೇಹಾ ಸಾಯೋ ಮೊದಲು ಅಂಗಾಗ ದಾನ ಮಾಡಿರುತ್ತಾಳೆ. ಸ್ನೇಹಾಳ ಹೃದಯವನ್ನ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಮತ್ತೊಂದು ಜೀವಕ್ಕೆ ಕಸಿ ಮಾಡಲಾಯಿತು. ಆ ಹೃದಯವನ್ನ ಪಡೆದುಕೊಂಡು ಪುಟ್ಟಕನ ಮನೆಯಲ್ಲೇ ವಾಸಿಸುತ್ತಿದ್ದಳು ಸ್ನೇಹ.
ಪುಟ್ಟಕ್ಕನ ಮಗಳು ಸ್ನೇಹಾಳ ಪಾತ್ರಕ್ಕೆ ಇವರು ರೀಪ್ಲೇಸ್ ಅಲ್ಲದಿದ್ದರೂ, ಇದೇ ಬೇರೆ ಪಾತ್ರವಾಗಿದ್ದರೂ ವೀಕ್ಷಕರು ಯಾಕೋ ಈ ಸ್ನೇಹಾಳನ್ನು ಅಷ್ಟು ಇಷ್ಟಪಡಲಿಲ್ಲ. ಕಂಠಿಗೆ ಈ ಸ್ನೇಹಾ ಸೂಟ್ ಆಗಲ್ಲ ಎಂದೇ ಹೇಳುತ್ತಾ ಬಂದರು. ಆದರೂ ಹೊಸ ಪಾತ್ರಕ್ಕೆ ಒಗ್ಗಿಕೊಳ್ಳುವಷ್ಟರಲ್ಲಿಯೇ ಈಗ ಈ ಸ್ನೇಹಾ ಪಾತ್ರಧಾರಿಯನ್ನು ಮತ್ತೆ ಬದಲಾಯಿಸಲಾಗಿದೆ.
ಇದೀಗ ಡಿಸಿ ಸ್ನೇಹಾಳ ಹೃದಯವನ್ನು ಪಡೆದುಕೊಂಡು ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್ ಸೀರಿಯಲ್ನಿಂದ ಆಚೆ ಬಂದಿದ್ದಾರೆ. ಝೀ ಕನ್ನಡ ರಿಲೀಸ್ ಮಾಡಿದ ಹೊರ ಪ್ರೋಮೋದಲ್ಲಿ ಅಪೂರ್ವ ನಾಗರಾಜ್ ಬದಲು ಮತ್ತೊಬ್ಬ ನಟಿಯ ಎಂಟ್ರಿಯಾಗಿದೆ. ರಾಮಾಚಾರಿ ಸೀರಿಯಲ್‌ನಲ್ಲಿ ರುಕ್ಮಿಣಿ ಪಾತ್ರ ಮಾಡಿ, ಸೀರಿಯಲ್ ಅನ್ನು ಮಧ್ಯೆಯೇ ಬಿಟ್ಟಿದ್ದ ನಟಿ ವಿಧ್ಯಾ ರಾಜ್ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅತ್ತ ಈ ವಿಚಾರ ತಿಳಿದ ಅಭಿಮಾನಿಗಳು ಇನ್ಮೇಲೆ ಸೀರಿಯಲ್ ನೋಡಲ್ಲ ಎಂದು ಕಾಮೆಂಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ನೇಹಾ ಸಾವಿನ ನಂತರ ಕಥೆ ಎತ್ತಲೋ ಸಾಗುತ್ತಿದೆ, ಈ ಕಥೆಯೇ ಬೇಡ ಅಂತಾನೂ ಹೇಳ್ತಿದ್ದಾರೆ ಜನ.
Bhagya Lakshmi Serial: ಮಗಳಿಗೆ ಪಾಠ ಕಲಿಸಲು ಕಟುವಾದ ಭಾಗ್ಯ: ಕೋಪಗೊಂಡ ತನ್ವಿ