ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maryade Ramanna Serial: ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು; ಈ ಸೀರಿಯಲ್‌ ಅಂತ್ಯ!

Maryade Ramanna Kannada Serial: ಇತ್ತೀಚೆಗೆ ಕಿರುತೆರೆಯಲ್ಲಿ ಸಾಕಷ್ಟು ಹೊಸ ಧಾರಾವಾಹಿಗಳು ಬರುತ್ತಿವೆ. ಧಾರಾವಾಹಿಗಳಿಗೆ ಅವರದ್ದೇ ಆದ ವೀಕ್ಷಕರು ಇದ್ದಾರೆ. ಹೊಸ ಧಾರಾವಾಹಿಯ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೋಮೋ ನೋಡಿದ ವೀಕ್ಷಕರು ಹಳ್ಳಿ ಸೊಗಡಿನ ಈ ಕಥೆ ಜನರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಹಾಗಾದ್ರೆ ಯಾವ ಧಾರಾವಾಹಿ ಅದು? ಎಲ್ಲಿ ಪ್ರಸಾರ?

ಹೊಸ ಧಾರಾವಾಹಿ ʻಮರ್ಯಾದೆ ರಾಮಣ್ಣʼ ಬಂದಾಯ್ತು!

ಮರ್ಯಾದೆ ರಾಮಣ್ಣ ಧಾರಾವಾಹಿ -

Yashaswi Devadiga
Yashaswi Devadiga Feb 17, 2026 7:24 PM

ಇತ್ತೀಚೆಗೆ ಕಿರುತೆರೆಯಲ್ಲಿ ಸಾಕಷ್ಟು ಹೊಸ ಧಾರಾವಾಹಿಗಳು (New Serial) ಬರುತ್ತಿವೆ. ಧಾರಾವಾಹಿಗಳಿಗೆ ಅವರದ್ದೇ ಆದ ವೀಕ್ಷಕರು ಇದ್ದಾರೆ. ಹೊಸ ಧಾರಾವಾಹಿಯ ಪ್ರೋಮೊ (Promo) ಈಗಾಗಲೇ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೋಮೋ ನೋಡಿದ ವೀಕ್ಷಕರು ಹಳ್ಳಿ ಸೊಗಡಿನ ಈ ಕಥೆ (Story) ಜನರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಹಾಗಾದ್ರೆ ಯಾವ ಧಾರಾವಾಹಿ ಅದು? ಎಲ್ಲಿ ಪ್ರಸಾರ?

ವಿಭಿನ್ನ ಹಾಗೂ ರೋಚಕ ಕಥೆ

ಜಗದ್ಧಾತ್ರಿ ಹಾಗೂ ಕೃಷ್ಣರುಕ್ಕು ಧಾರಾವಾಹಿಗಳು ಬರಲಿವೆ ಎನ್ನಲಾಗಿತ್ತು. ಈಗ ಇನ್ನೊಂದು ಸೀರಿಯಲ್‌ ಕೂಡ ಬರಲಿದ್ದು, ಪ್ರೋಮೋ ರಿಲೀಸ್‌ ಆಗಿದೆ. ಅದು ಕೂಡ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ. ವಿಭಿನ್ನ ಹಾಗೂ ರೋಚಕ ಕಥೆಯೊಂದಿಗೆ ವಾಹಿನಿ ಸಜ್ಜಾಗಿದೆ. ಅದೇ 'ಮರ್ಯಾದೆ ರಾಮಣ್ಣ'. ಈ ಹಿಂದೆ ಜೋಡಿಹಕ್ಕಿ ಧಾರಾವಾಹಿಯಲ್ಲಿ ಪೈಲ್ವಾನ್‌ ಕಥೆ ಇತ್ತು. ಆದರೆ ಇಲ್ಲಿ ಇರೋದು ವಿಭಿನ್ನ ತಾಯಿಯಾಗಿ ಬ್ರಹ್ಮಚೈರ್ಯ ಪಾಲಿಸುವ ಪೈಲ್ವಾನ್‌ ರಾಮಣ್ಣನ ಕಥೆ ಇಲ್ಲಿದೆ.

ಇದನ್ನೂ ಓದಿ: Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

ಯಾರು ನಟಿಸುತ್ತಿದ್ದಾರೆ?

ಪೈಲ್ವಾನ್‌ ರಾಮಣ್ಣನ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ರಿವೀಲ್‌ ಮಾಡಿಲ್ಲ. ಆದರೆ ವೀಕ್ಷಕರು ಮಾತ್ರ ಚೇತನ್‌ ಚಂದ್ರ ಅವರು ನಟಿಸುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ರಾಮಣ್ಣ, ನಿಜ ಜೀವನದಲ್ಲಿ ಎಂತಹ ಸವಾಲುಗಳನ್ನು ಎದುರಿಸುತ್ತಾನೆ ಎಂಬುದೇ ಕಥೆ. 'ಮರ್ಯಾದೆ ರಾಮಣ್ಣ' ಕೇವಲ ಕುಸ್ತಿ ಅಖಾಡದ ಕಥೆಯಲ್ಲ, ಇದು ಮಣ್ಣಿನ ಸಂಸ್ಕೃತಿ ಕಥೆ ಆಗಿದೆ.

ಸದ್ಯಕ್ಕೆ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟನ ಶಕ್ತಿಶಾಲಿ ವ್ಯಕ್ತಿತ್ವ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರ ಕಾಣಲಿದೆ ಎನ್ನಲಾಗುತ್ತಿದೆ.

ಯಾವ ಸೀರಿಯಲ್‌ ಅಂತ್ಯ?

ಚೇತನ್‌ ಚಂದ್ರ ಅವರು ಈ ಹಿಂದೆ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ಲೀಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿಯೂ ಅವರೇ ಎನ್ನಲಾಗುತ್ತಿದೆ. ಆದರೆ ಯಾವುದೇ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ವಾಹಿನಿಯಾಗಲಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Amruthadhaare Serial: ಭೂಮಿ ಕಾಳಜಿಯನ್ನು ಅಪಾರ್ಥ ಮಾಡ್ಕೊಂಡ್ಳಾ ಮಲ್ಲಿ?

ಮರ್ಯಾದೆ ರಾಮಣ್ಣ ಧಾರಾವಾಹಿ ಪ್ರಸಾರ ಆಗಲಿದೆ ಎಂದಾದರೆ, ಇನ್ನೊಂದು ಸೀರಿಯಲ್‌ ಅಂತ್ಯ ಆಗಬೇಕಿದೆ. ಸ್ನೇಹದ ಕಡಲಲ್ಲಿ, ನೀ ಇರಲು ಜೊತೆಯಲ್ಲಿ ಧಾರಾವಾಹಿಗಳ ಮಧ್ಯೆ ಒಂದು ಸೀರಿಯಲ್‌ ಅಂತ್ಯ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.