Chaithra Kundapura Marriage: ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚೈತ್ರಾ ಕುಂದಾಪುರ: ನಾಳೆಯೇ ಮದುವೆ..?
ಇದೀಗ ಮಜಾ ಟಾಕೀಸ್ ನಲ್ಲಿ ಚೈತ್ರಾ ಮದುವೆ ವಿಷ್ಯ ಮತ್ತೆ ಚರ್ಚೆಯಾಗಿದೆ. ಚೈತ್ರಾ ಕುಂದಾಪುರ ಮದುವೆ ಆಗ್ತಿರೋದು ಕನ್ಫರ್ಮ್ ಆಗಿದೆ. ಕರಾವಳಿಯ ಕೆಲ ಸ್ಥಳೀಯ ಸುದ್ದಿ ಮಾಧ್ಯಮ ಮೇ.9 ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ವರದಿ ಮಾಡಿದೆ.

Chaithra Kundapura

ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ ಮನೆಯಲ್ಲಿದ್ದಾಗ ಮದುವೆಯ ಕುರಿತು ಚರ್ಚೆಯಾಗಿತ್ತು. ಚೈತ್ರಾ ಅವರ ತಾಯಿ ಕೂಡ ಮದುವೆಯ ಮಾತುಗಳನ್ನಾಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮದುವೆ ಮಾಡಬೇಕು ಎಂದು ಅವರು ಹೇಳಿದ್ದರು. ಅಲ್ಲದೆ ತನಗೆ ನಿಶ್ಚಯ ಆಗಿರುವ ವಿಚಾರವನ್ನು ಕೂಡ ಚೈತ್ರಾ ದೊಡ್ಮನೆಯೊಳಗೆ ಹೇಳಿದ್ದರು. ಇದೀಗ ಮಜಾ ಟಾಕೀಸ್ ನಲ್ಲಿ ಚೈತ್ರಾ ಮದುವೆ ವಿಷ್ಯ ಮತ್ತೆ ಚರ್ಚೆಯಾಗಿದೆ. ಚೈತ್ರಾ ಕುಂದಾಪುರ ಮದುವೆ ಆಗ್ತಿರೋದು ಕನ್ಫರ್ಮ್ ಆಗಿದೆ.
ಮಜಾ ಟಾಕೀಸ್ ಶೋಗೆ ಬಂದ ಧರ್ಮ ಕೀರ್ತಿರಾಜ್, ಅನುಷಾ ಹಾಗೂ ಚೈತ್ರಾರನ್ನು ವೆಲ್ ಕಮ್ ಮಾಡಿದ ಸೃಜನ್ ಲೋಕೇಶ್, ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಆಗಿದೆ ಎನ್ನುತ್ತಲೇ ಮಾತು ಶುರು ಮಾಡಿದರು. ಲವ್ ಮ್ಯಾರೇಜಾ ಇಲ್ಲ ಅರೇಂಜ್ಡ್ ಮ್ಯಾರೇಜಾ ಎನ್ನುವ ಸೃಜನ್ ಪ್ರಶ್ನೆಗೆ ಚೈತ್ರಾ ಎರಡೂ ಎಂದು ಉತ್ತರ ನೀಡಿದರು. ತಕ್ಷಣ ಮಧ್ಯ ಮಾತನಾಡಿದ ಅನುಷಾ, ಅವರದ್ದು 12 ವರ್ಷದ ಲವ್ ಸ್ಟೋರಿ ಎಂದಿದ್ದಾರೆ. ಇದಕ್ಕೆ ಚೈತ್ರಾ ತಲೆದೂಗಿ ಯಸ್ ಎಂದಿದ್ದಲ್ಲದೆ, ಕಾಲೇಜಿನಲ್ಲಿ ಲವ್ ಸ್ಟೋರಿ ಶುರುವಾಗಿದ್ದು ಎಂದಿದ್ದಾರೆ.
‘‘ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದಿರುವ ಚೈತ್ರಾ ಕುಂದಾಪುರ, ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದಲ್ಲಿ ಮನೆಯವರ ನಡುವೆ ಮಾತುಕಥೆಗಳು ಇನ್ನು ನಡೆಯಬೇಕಿದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ, ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ’’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಎಲ್ಲರಂತೆ ನಮ್ಮದು ರೋಮ್ಯಾಂಟಿಕ್ ಆಗಿ ಪ್ರೀತಿ ಶುರು ಆಗ್ಲಿಲ್ಲ. ನನ್ನನ್ನು ದ್ವೇಷಿಸುವವರೆ ಈಗ ಪ್ರೀತಿಸ್ತಿದ್ದಾರೆ ಎಂದು ಚೈತ್ರಾ ಹೇಳಿದ್ದಾರೆ. ಕ್ಯಾಂಟೀನ್ ನಲ್ಲಿ ನನ್ನ ಬಗ್ಗೆ ಬೈತಾ ಓಡಾಡ್ತಿದ್ದ ಹುಡುಗ, ನನ್ನನ್ನು ಕಂಡ್ರೆ ಇರಿಟೇಟ್ ಮಾಡ್ಕೊಂಡು, ಇವಳೊಬ್ಬಳು ಕಿರಿಕಿರಿ ಎನ್ನುತ್ತಿದ್ದರು. ಕೊನೆಯಲ್ಲಿ ಅದು ಪ್ರೀತಿಯಾಗಿ ಬದಲಾಯ್ತು ಎಂದಿದ್ದಾರೆ. ಆದರೆ ಎಲ್ಲೂ ಹುಡುಗ ಯಾರೂ ಎಂಬುದನ್ನು ಚೈತ್ರಾ ಹೇಳಿಲ್ಲ. ಹಾಗೆಯೇ ಮದುವೆ ಯಾವಾಗ ಎನ್ನುವ ವಿಷ್ಯವನ್ನು ಕೂಡ ಚೈತ್ರಾ ಬಿಟ್ಟುಕೊಟ್ಟಿಲ್ಲ.
Chaithra Kundapura: ಜಾತ್ರೆಯಲ್ಲಿ ಬ್ಯಾಡ್ ಟಚ್ ಮಾಡಿದ್ದ ಹುಡುಗನಿಗೆ ಚೈತ್ರಾ ಕುಂದಾಪುರ ಏನು ಮಾಡಿದ್ರು ಗೊತ್ತಾ?
ಇವೆಲ್ಲದರ ಮಧ್ಯೆ ಕರಾವಳಿಯ ಕೆಲ ಸ್ಥಳೀಯ ಸುದ್ದಿ ಮಾಧ್ಯಮ ಮೇ.9 ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ವರದಿ ಮಾಡಿದೆ.