Chaithra Kundapura: ಜಾತ್ರೆಯಲ್ಲಿ ಬ್ಯಾಡ್ ಟಚ್ ಮಾಡಿದ್ದ ಹುಡುಗನಿಗೆ ಚೈತ್ರಾ ಕುಂದಾಪುರ ಏನು ಮಾಡಿದ್ರು ಗೊತ್ತಾ?
ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಮಜಾ ಟಾಕೀಸ್ಗೆ ಬಂದಿದ್ದು ಇಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚೈತ್ರಾ ಜೊತೆ ಮಜಾ ಟಾಕೀಸ್ಗೆ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಕೂಡ ಬಂದಿದ್ದರು. ಈ ವೇಳೆ ತಮ್ಮ ಬಾಲ್ಯದ ನೆನಪುಗಳನ್ನ ಚೈತ್ರಾ ಕುಂದಾಪುರ ಮೆಲುಕು ಹಾಕಿದ್ದಾರೆ.

Chaithra Kundapura

ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ನಿಂದ ಹೊರ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಚೈತ್ರಾ ಅವರ ವರ್ಚಸ್ಸನ್ನು ಹೆಚ್ಚುತ್ತಿದೆ. ಈಗಂತು ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರುಮಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿದ್ದಾಗ ಚೈತ್ರಾ ಯಾವುದೇ ಮಾಡರ್ನ್ ಡ್ರೆಸ್ ಹಾಕದೆ ಹೆಚ್ಚಾಗಿ ಸೀರೆಯಲ್ಲೇ ಕಂಗೊಳಿಸುತ್ತಿದ್ದರು. ಎದುರಾಳಿ ಯಾರೇ ಇರಲಿ ಚೈತ್ರಾ ವಾದ ಮಾತ್ರ ಎಲ್ಲರಿಗೆ ನಡುಕ ಹುಟ್ಟಿಸುವಂತಿತ್ತು.
ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಮಜಾ ಟಾಕೀಸ್ಗೆ ಬಂದಿದ್ದು ಇಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚೈತ್ರಾ ಜೊತೆ ಮಜಾ ಟಾಕೀಸ್ಗೆ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಕೂಡ ಬಂದಿದ್ದರು. ಈ ವೇಳೆ ತಮ್ಮ ಬಾಲ್ಯದ ನೆನಪುಗಳನ್ನ ಚೈತ್ರಾ ಕುಂದಾಪುರ ಮೆಲುಕು ಹಾಕಿದ್ದಾರೆ. ಅದರಲ್ಲೂ ಜಾತ್ರೆಯಲ್ಲಿ ಬ್ಯಾಡ್ ಟಚ್ ಮಾಡಿದ್ದ ಹುಡಗನಿಗೆ ನಾನು ಏನು ಮಾಡಿದೆ ಎಂಬುದನ್ನು ಹೇಳಿದ್ದಾರೆ.
‘‘ಜಾತ್ರೆಯಲ್ಲಿ ಯಾರೋ ಒಬ್ಬ ಬ್ಯಾಡ್ ಟಚ್ ಮಾಡಿದ್ದ. ನಾನು ಫುಲ್ ಕಿರುಚಾಡಿಕೊಂಡು ಹಿಡಿದೆ. ಅವನು ಓಡೋಕೆ ಆರಂಭಿಸಿದ. ಅವನನ್ನ ಚೆನ್ನಾಗಿ ಹೊಡೆಯೋಕೆ ಶುರು ಮಾಡಿದೆ. ಪೊಲೀಸರು ಬಂದರು. ಹೋಗಲಿ ಬಿಡಮ್ಮ ಅಂದರು. ನನಗೆ ಪಿತ್ತ ನೆತ್ತಿಗೇರಿಬಿಡ್ತು. ಏನ್ ಸಾರ್.. ನಿಮ್ಮನೆ ಹೆಣ್ಮಕ್ಕಳಿಗೆ ಹಾಗೆ ಮಾಡಿದರೆ ಸುಮ್ಮನೆ ಬಿಡ್ತೀರಾ ಅಂತ ಕೂಗಾಡಿದೆ. ಆಮೇಲೆ ಪೊಲೀಸರು ಅವನನ್ನ ಕರೆದುಕೊಂಡು ಹೋದರು. ಅವತ್ತಿನಿಂದ ನನ್ನ ಅಮ್ಮ ನನ್ನ ಜೊತೆ ಎಲ್ಲೂ ಬರಲ್ಲ. ನಾನು ಜಗಳ ಮಾಡ್ತೀನಿ ಅಂತ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
Bhagya Lakshmi Serial: ಭಾಗ್ಯ ಮನೆಗೆ ಬಂದು ಧಮ್ಕಿ: ಇನ್ನೂ ಬುದ್ದಿ ಕಲಿಯದ ತಾಂಡವ್
‘‘ನಾನು ಚಿಕ್ಕವಳು ಇರುವಾಗ ಸಿಕ್ಕಾಪಟ್ಟೆ ತರ್ಲೆ ಇದ್ದೆ. ಮೂರನೇ ಅಥವಾ ನಾಲ್ಕನೇ ಕ್ಲಾಸ್ ಇರಬೇಕು ಅನಿಸುತ್ತದೆ ನನ್ನ ಫ್ರೆಂಡ್ ನನ್ನನ್ನ ಗುದ್ದಿಬಿಟ್ಟಳು ಅಂತ ಅವಳ ಮುಖ ಪರಚಿಬಿಟ್ಟೆ. ಅದಕ್ಕೆ ಅವಳ ಅಮ್ಮನನ್ನ ಕರೆದುಕೊಂಡು ಬಂದು ನನಗೆ ಬೈಯ್ಯಿಸಿದಳು. ನಾನು ಮನೆಗೆ ಹೋಗಿ ಗೊಳೋ ಅಂತ ಅತ್ತೆ. ಮಾರನೇ ದಿನ ನನ್ನ ಅಪ್ಪ ಬಂದು.. ಟೀಚರ್‌ಗೆ ಬೈದು, ಟೀಚರ್ ಸಹ ಅತ್ತರು’’ ಎಂದು ಹಳೆಯ ನೆನಪು ಮೆಲುಕು ಹಾಕಿದರು.