Dharma KeerthiRaj: ಸಿನಿಮಾ ಫ್ಲಾಪ್ ಆಯಿತೆಂದು ಸುಮ್ನೆ ಕೂತ್ರೆ ಮುಂದೆ ಅವಕಾಶ ಸಿಗಲ್ಲ: ಧರ್ಮ ಕೀರ್ತಿರಾಜ್
ನಟ ಧರ್ಮಗೆ ಈವರೆಗೂ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಗೆಲುವೇನೂ ಸಿಕ್ಕಿಲ್ಲ. ಈಗ ಟಾಲಿವುಡ್‌ನಲ್ಲಿ ಅಪ್ಸರ ರಾಣಿ ಜೊತೆ ಬ್ಲಡ್ ರೋಸಸ್ ಮೂಲಕ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ಮಧ್ಯೆ ತಮಗೆ ಗೆಲುವು ಯಾಕೆ ಅನಿವಾರ್ಯ ಎಂಬ ಕುರಿತು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Dharma Keerthiraj

ಬಿಗ್ ಬಾಸ್ ಕನ್ನಡ ಸೀಸನ್ 11 ಧರ್ಮ ಕೀರ್ತಿರಾಜ್ (Dharma KeerthiRaj) ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. ಈಗ ಬಿಗ್ ಬಾಸ್ಗೆ ಹೋಗಿ ಬಂದ ಬಳಿಕ ಇವರ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಯಶಸ್ಸು ಸಿಗುವ ಕನಸಿನಲ್ಲಿದ್ದಾರೆ.
ಸದ್ಯ ಧರ್ಮಾ ಅವರು ತಮ್ಮ ಮುಂಬರುವ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಟಾಲಿವುಡ್ಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿರುವ ಧರ್ಮ ಅವರ ಹೊಸ ಚಿತ್ರದ ಹೆಸರು ಬ್ಲಡ್ ರೋಸಸ್ ಎಂದು. ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಧರ್ಮಗೆ ಅಪ್ಸರ ರಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ನಟ ಧರ್ಮಗೆ ಈವರೆಗೂ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಗೆಲುವೇನೂ ಸಿಕ್ಕಿಲ್ಲ. ಈಗ ಟಾಲಿವುಡ್‌ನಲ್ಲಿ ಅಪ್ಸರ ರಾಣಿ ಜೊತೆ ಬ್ಲಡ್ ರೋಸಸ್ ಮೂಲಕ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರ ಮಧ್ಯೆ ತಮಗೆ ಗೆಲುವು ಯಾಕೆ ಅನಿವಾರ್ಯ ಎಂಬ ಕುರಿತು ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Dali Dhananjay: ಭರ್ಜರಿ ಬ್ಯಾಚುಲರ್ಸ್ನಲ್ಲಿ ಸುಕೃತಾ ಜೊತೆ ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್
ಹದಿನೈದು ವರ್ಷಗಳ ತಮ್ಮ ಸಿನಿ ಜೀವನದ ಬಗ್ಗೆ ಮಾತನಾಡಿದ ಧರ್ಮ, ಒಂದಿಷ್ಟು ಪ್ರಯತ್ನಗಳ ಬಳಿಕ ಎಲ್ಲೋ ಒಂದು ಕಡೆ ಉಳಿದುಕೊಳ್ಳಲು ಅನಿವಾರ್ಯ ವಾತಾವರಣ ಸೃಷ್ಟಿಯಾಗುತ್ತದೆ. ಹೀಗಾಗಿ ಸಿಕ್ಕಿರುವ ಪಾತ್ರ ಹಾಗೂ ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಿನಿಮಾ ಫ್ಲಾಪ್ ಆಯಿತು ಎಂದು ಸುಮ್ಮನೆ ಕುಳಿತರೆ ಮುಂದಿನ ಅವಕಾಶ ಸಿಗದಿರಬಹುದು. ನಾನು ಈವರೆಗೆ ನನ್ನ ತಂದೆಯ ಹೆಸರು ಬಳಸಿ ಯಾವ ಸಿನಿಮಾ ಕೂಡ ಮಾಡಿಲ್ಲ. ಸಿಕ್ಕಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಮಾತ್ರ ನನ್ನ ಗಮನವಿರುತ್ತದೆ. ನಟನಾಗಿ ಮಾತ್ರವಲ್ಲದೆ ಕಥೆ ಹಾಗೂ ಸ್ಕ್ರಿಪ್ಟ್ ಹಂತದಲ್ಲೂ ನಾನು ತೊಡಗಿಕೊಳ್ಳುತ್ತಿದ್ದೇನೆ. ಒಂದು ಹಿಟ್ ಸಿನಿಮಾ ಬಹುಶಃ ವೃತ್ತಿಯಲ್ಲಿ ದೊಡ್ಡ ಬದಲಾವಣೆ ತರಬಹುದು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.