ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: 12ನೇ ಆವೃತ್ತಿಯ ಬಿಗ್ ಬಾಸ್ ಕನ್ನಡಕ್ಕೆ ಮುಹೂರ್ತ ಫಿಕ್ಸ್: ಯಾವಾಗಿನಿಂದ ಆರಂಭ?

ಇದೀಗ ಬಿಗ್ ಬಾಸ್ ಕನ್ನಡ 12 ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 12 ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಸ್ಪರ್ಧಿಗಳನ್ನು ಗುರುತಿಸುವ ಕಾರ್ಯ ಕೊನೆಯ ಹಂತದಲ್ಲಿದೆಯಂತೆ. ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳು ಕೂಡ ಭರ್ಜರಿ ಆಗಿ ಸಾಗುತ್ತಿದೆ.

12ನೇ ಆವೃತ್ತಿಯ ಬಿಗ್ ಬಾಸ್ ಕನ್ನಡಕ್ಕೆ ಮುಹೂರ್ತ ಫಿಕ್ಸ್

bigg boss kannada 12

Profile Vinay Bhat Jul 12, 2025 7:28 AM

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada season 12) ಕುರಿತು ಒಂದೊಂದೆ ದೊಡ್ಡ ಅಪ್ಡೇಟ್ ಹೊರಬೀಳುತ್ತಿದೆ. ಈಗಾಗಲೇ ಈ ಬಾರಿ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೊನ್ನೆಯಷ್ಟೆ ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಆಯೋಜಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ರಿವೀಲ್ ಆಗಿದೆ. ಇದರ ಬೆನ್ನಲ್ಲೇ ಈ ಬಾರಿ ದೊಡ್ಮನೆಯೊಳಹೆ ಹೋಗುವ ಕಂಟೆಸ್ಟೆಂಟ್ಸ್ ಯಾರೆಂಬ ಗಾಸಿಪ್ ಕೂಡ ಹರಿದಾಡುತ್ತಿದೆ. ಇದೀಗ ಬಿಗ್ ಬಾಸ್ ಕನ್ನಡ 12 ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 12 ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಮತ್ತೊಂದು ವಿಶೇಷ ಎಂದರೆ, ಸಾಮಾನ್ಯವಾಗಿ ಪ್ರತಿ ಭಾರಿ ಬಿಗ್‌ ಬಾಸ್‌ ಗ್ರ್ಯಾಂಡ್ ಓಪನಿಂಗ್ ಶನಿವಾರ ಮಧ್ಯರಾತ್ರಿ ಶೂಟಿಂಗ್ ಆರಂಭವಾಗಿ ರವಿವಾರದಂದು ಟೆಲಿಕಾಸ್ಟ್ ಆಗುತ್ತದೆ. ಆದರೆ, ಈಗ ಬಂದಿರುವ ಮಾಹಿತಿಯ ಪ್ರಕಾರ, ಬಿಬಿಕೆ 12 ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಅಂದರೆ ಸೋಮವಾರದಿಂದ ಆರಂಭವಾಗುವ ಸಾಧ್ಯ ಇದೆ.

ಬಿಗ್ ​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವ ಕಾರ್ಯ ಕೊನೆಯ ಹಂತದಲ್ಲಿದೆಯಂತೆ. ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್​ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳು ಕೂಡ ಭರ್ಜರಿ ಆಗಿ ಸಾಗುತ್ತಿದೆ. ಕಿಚ್ಚ ಸುದೀಪ್ ಅವರ ಮೊದಲ ಪ್ರೊಮೋ ಶೂಟ್ ಕೂಡ ನಡೆದಿದೆ. ಇದು ಸದ್ಯದಲ್ಲೇ ಹೊರಬೀಳಲಿದೆಯಂತೆ. ಇದರ ಮಧ್ಯೆ ಈ ಬಾರಿ ದೊಡ್ಮನೆಯೊಳಗೆ ಹೋಗುವ ಸ್ಪರ್ಧಿಗಳ ಪಟ್ಟಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Sanju Basayya: ಪತ್ನಿಗೆ ಅಶ್ಲೀಲ ಫೋಟೋ-ಮೆಸೇಜ್ ಕಳಿಸಿದವನಿಗೆ ಬುದ್ದಿ ಕಲಿಸಿದ ಸಂಜು ಬಸಯ್ಯ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲಿಸ್ಟ್ ಪ್ರಕಾರ, ಕನ್ನಡದ ಅರ್ನಬ್ ಗೋಸ್ವಾಮಿ ಅಂತಲೇ ಫೇಮಸ್‌ ಆಗಿರುವ ನ್ಯೂಸ್ ಆಂಕರ್ ಚಂದನ್ ಶರ್ಮಾ ಮೊದಲಿಗರಾಗಿದ್ದಾರೆ. ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಅರ್ಚನಾ ಜೋಯಿಸ್‌, ಪ್ರಿಯಾಂಕಾ ಉಪೇಂದ್ರ, ಶ್ರೀರಸ್ತು ಶುಭಮಸ್ತು, ಇಷ್ಟದೇವತೆ ಮುಂತಾದ ಸೀರಿಯಲ್‌ಗಳಲ್ಲಿ ಮಿಂಚಿದ ಶ್ರೀ ಮಹಾದೇವ್ ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ ಎನ್ನಲಾಗಿದೆ.