ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanju Basayya: ಪತ್ನಿಗೆ ಅಶ್ಲೀಲ ಫೋಟೋ-ಮೆಸೇಜ್ ಕಳಿಸಿದವನಿಗೆ ಬುದ್ದಿ ಕಲಿಸಿದ ಸಂಜು ಬಸಯ್ಯ

ಸಂಜು ಬಸಯ್ಯ ಕೂಡ ತಮ್ಮ ಪತ್ನಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ವಿದ್ಯಾರ್ಥಿಗೆ ಬುದ್ದಿವಾದವನ್ನು ಹೇಳಿದ್ದು ವಿದ್ಯಾರ್ಥಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರು ವಾಪಸು ಪಡೆದಿದ್ದಾರೆ. ನಿನ್ನ ನಡವಳಿಕೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ನಾಚಿಕೆ ಆಗುತ್ತದೆ. ಸಾಮಾಜಿಕ ಜಾಲತಾಣವೇ ಜೀವನವಲ್ಲ ಎಂದು ಬುದ್ಧಿವಾದವನ್ನು ಕೂಡ ವಿದ್ಯಾರ್ಥಿಗೆ ಹೇಳಿ ಕಳುಹಿಸಿದ್ದಾರೆ.

ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ದಿ ಕಲಿಸಿದ ಸಂಜು

Sanju Basayya Wife

Profile Vinay Bhat Jul 11, 2025 4:05 PM

ಕಾಮಿಡಿ ಕಿಲಾಡಿಗಳು ಶೋ ಮೂಲಕ ಎಲ್ಲರ ಮಾತಾಗಿದ್ದ ಹಾಸ್ಯ ಕಲಾವಿದ ಸಂಜು ಬಸಯ್ಯ (Sanju Basayya) ಅವರ ಪತ್ನಿ ಪ್ಪಲವಿ ಅವರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಮೂಲಕ ವಿಜಯನಗರ ಜಿಲ್ಲೆಯ ಪಿಯುಸಿ ಓದುವ ವಿದ್ಯಾರ್ಥಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಸಂಜು ಬಸಯ್ಯ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಕರೆಸಿ ಶಿಕ್ಷೆ ನೀಡಿದ್ದಾರೆ. ಮತ್ತು ಯುವಕ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.

ಸಂಜು ಬಸಯ್ಯ ಕೂಡ ತಮ್ಮ ಪತ್ನಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ವಿದ್ಯಾರ್ಥಿಗೆ ಬುದ್ದಿವಾದವನ್ನು ಹೇಳಿದ್ದು ವಿದ್ಯಾರ್ಥಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರು ವಾಪಸು ಪಡೆದಿದ್ದಾರೆ. ನಿನ್ನ ನಡವಳಿಕೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ನಾಚಿಕೆ ಆಗುತ್ತದೆ. ಸಾಮಾಜಿಕ ಜಾಲತಾಣವೇ ಜೀವನವಲ್ಲ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯವನ್ನು ಮಾಡಬೇಡ ಎಂದು ಬುದ್ಧಿವಾದವನ್ನು ಕೂಡ ವಿದ್ಯಾರ್ಥಿಗೆ ಹೇಳಿ ಕಳುಹಿಸಿದ್ದಾರೆ.

ಈ ಬಗ್ಗೆ ಸಂಜು ಬಸಯ್ಯ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ‘‘ಮನೋಜ್‌ ಅಂತ ಈತ ನನ್ನ ಧರ್ಮಪತ್ನಿ ಪಲ್ಲವಿಗೆ ಇನ್ಸ್ಟಾಗ್ರಾಮ್‌ನಲ್ಲಿ ಅಶ್ಲೀಲವಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ್ದರು. ಇದರ ಜೊತೆಗೆ ನಾವು ಪರ್ಸನಲ್‌ ಐಡಿಯನ್ನು ಸೇವ್‌ ಮಾಡಿಕೊಂಡು ಬೈಲಹೊಂಗಲ ಸ್ಟೇಷನ್‌ನಲ್ಲಿ ಕಂಪ್ಲೇಂಟ್‌ ಕೊಟ್ಟಾಗ, ಈ ವ್ಯಕ್ತಿಯನ್ನು ಊರಿನಿಂದ ಕರೆದುಕೊಂಡು ಬಂದು, ಅವನಿಗೆ ಕಠಿಣವಾದ ಶಿಕ್ಷೆ ಕೊಟ್ಟಿದ್ದಾರೆ. ನಾವು ಕೇಳಿಕೊಳ್ಳುವುದು ಇಷ್ಟೇ. ಕೆಟ್ಟ ಕೆಟ್ಟದಾಗಿ ಕಾಮೆಂಟ್‌ಗಳು ಅಥವಾ ಮೆಸೇಜ್‌ಗಳು ಮಾಡಿದ್ರೂ ಕೂಡ ನಾವು ಓದುತ್ತಾ ಇರ್ತೇವೆ ಹಾಗೂ ಗಮನಿಸುತ್ತಿರುತ್ತೇವೆ ಅನ್ನೋದು ನಿಮ್ಮ ಗಮನಕ್ಕಿರಲಿ’’ ಎಂದಿದ್ದಾರೆ ಸಂಜು ಬಸಯ್ಯ.

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಲು ಬಂದ ತಾಂಡವ್​ಗೆ ವೈಷ್ಣವ್ ದರ್ಶನ

ಪಲ್ಲವಿ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ ವಿದ್ಯಾರ್ಥಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಾನು ತುಂಬಾ ದಿನದಿಂದ ಇನ್‌ಸ್ಟಾಗ್ರಾಂ ಉಪಯೋಗಿಸುತ್ತಿದ್ದೆ, ಪಲ್ಲು ಸಂಜು ಅವರ ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ ಎಂದು ಹೇಳಿದ್ದಾನೆ. ಈ ಹಿನ್ನೆಲೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ನನ್ನ ವಿರುದ್ದ ಪ್ರಕರಣ ದಾಖಲಿಸಿದ್ದರು.