BBK 12: ಮುಚ್ಕೊಂಡು ಮಲ್ಕೋ.. ಈಡಿಯೆಟ್: ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ ಅಶ್ವಿನಿ ಗೌಡ
ರಕ್ಷಿತಾ ಶೆಟ್ಟಿ ಪುನಃ ಮನೆಯೊಳಗೆ ಕಾಲಿಟ್ಟ ನಂತರ ಅಶ್ವಿನಿ ಗೌಡ ಜೊತೆಗೆ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಇದು ಈಗ ಮುಂದಿನ ಹಂತಕ್ಕೆ ತಲುಪಿದೆ. ಅಶ್ವಿನಿ ಅವರು ರಕ್ಷಿತಾ ಅವರ ವೈಯಕ್ತಿಕ ವಿಚಾರ ತೆಗೆದು ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Rakshita Shetty vs Ashwini Gowda -

ಬಿಗ್ ಬಾಸ್ ಕನ್ನಡ 12 ರಲ್ಲಿ (Bigg Boss Kannada 12) ಇದೇ ಶನಿವಾರ ಹಾಗೂ ಭಾನುವಾರ ಈ ಸೀಸನ್ನ ಮೊದಲ ಫಿನಾಲೆ ನಡೆಯಲಿದೆ. ಈಗಾಗಲೇ ಟಾಸ್ಕ್ಗಳು ಬಹುತೇಕ ಅಂತ್ಯಗೊಂಡಿದೆ. ಮಿಡ್ ಎಲಿಮಿನೇಷನ್ ಕೂಡ ನಿನ್ನೆ ನಡೆದಿದ್ದು ಡಾಗ್ ಸತೀಶ್ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಹಾಗೂ ರಾಶಿಕ ಶೆಟ್ಟಿ ಫೈನಲಿಸ್ಟ್ ಆಗಿದ್ದರೆ ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ಟೆನ್ಶನ್ಗಳ ಮಧ್ಯೆ ಮನೆಯಲ್ಲಿ ಜಗಳಗಳ ಕಾವು ಮತ್ತಷ್ಟು ಏರಿದೆ.
ರಕ್ಷಿತಾ ಶೆಟ್ಟಿ ಪುನಃ ಮನೆಯೊಳಗೆ ಕಾಲಿಟ್ಟ ನಂತರ ಅಶ್ವಿನಿ ಗೌಡ ಜೊತೆಗೆ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಇದು ಈಗ ಮುಂದಿನ ಹಂತಕ್ಕೆ ತಲುಪಿದೆ. ಅಶ್ವಿನಿ ಅವರು ರಕ್ಷಿತಾ ಅವರ ವೈಯಕ್ತಿಕ ವಿಚಾರ ತೆಗೆದು ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೋಮೋ ಬಿಟ್ಟಿದ್ದು, ಇದರಲ್ಲಿ ರಕ್ಷಿತಾ, ಅಶ್ವಿನಿ ಗೌಡ ಹಾಗೂ ಜಾನ್ವಿ ನಡುವೆ ದೊಡ್ಡ ಜಗಳ ನಡೆದಿದೆ.
ಧ್ರುವ್ ಜೊತೆ ಜಾನ್ವಿ ಮಾತನಾಡುತ್ತ, ರಕ್ಷಿತಾ ಬರ್ಲಿ ನಾನು ಮಾತನಾಡಬೇಕು ಅವಳ ಹತ್ರ ಎಂದು ಹೇಳಿದ್ದಾರೆ, ಆಗ ಅಶ್ವಿನಿ ಗೌಡ ಬಂದು ಸಿಕ್ಕಾಪಟ್ಟೆ ಮಾಡ್ತಾ ಇದ್ದಾಳೆ ಅವಳು ಎಂದು ಹೇಳಿದ್ದಾರೆ. ರಕ್ಷಿತಾ ಮಲಗಲು ಎಂದು ರೂಮ್ಗೆ ಬಂದಾಗ ಕಾದು ಕುಳಿತಿದ್ದ ಅಶ್ವಿನಿ-ಜಾನ್ವಿ ಜೋರು ಜೋರು ಮಾತನಾಡಿದ್ದಾರೆ. ಇತ್ತ ರಕ್ಷಿತಾ ಕೂಡ ಸುಮ್ಮನೆ ಕೂರದೆ ಧ್ವನಿ ಏರಿಸಿ ಮಾತನಾಡಿದ್ದಾರೆ.
ರಕ್ಷಿತಾ ಶೆಟ್ಟಿ-ಅಶ್ವಿನಿ ಗೌಡ ಜಗಳದ ವಿಡಿಯೋ:
ನನ್ನ ಏನು ಚೈಲ್ಡ್ ಅಂತ ಅಂದುಕೊಂಡಿದ್ಯಾ.. ನನ್ಗೆ ಮೆಚ್ಯುರಿಟಿ ಇಲ್ವಾ? ಎಂದು ಜಾನ್ವಿ ಕೇಳಿದ್ದಕ್ಕೆ ಹೌದು ನೀವು ಚೈಲ್ಡ್ ಎಂದು ರಕ್ಷಿತಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ದೊಡ್ಡ ನಾಗವಲ್ಲಿ ನೀವು.. ಗೆಜ್ಜೆ ತೆಗೆದುಕೊಂಡು ಆರೀತಿ ಸೌಂಡ್ ಯಾಕೆ ಮಾಡಬೇಕಿತ್ತು ಎಂದು ಕೇಳಿದ್ದಾರೆ. ಆಗ ಜಾನ್ವಿ ಏಯ್ ಎಷ್ಟು ಮಾತಾಡ್ತೀಯಾ ನೀನು ಎಂದು ಕೇಳಿದ್ದಾರೆ. ಅತ್ತ ರೊಚ್ಚಿಗೆದ್ದ ಅಶ್ವಿನಿ ಗೌಡ, ಏಯ್.. ಜಾಸ್ತಿ ಮಾತಾಡ್ಬೇಡ ಮುಚ್ಕೊಂಡು ಮಲ್ಕೊ.. ಹೋಗಿ ನಿನ್ನ ಡ್ರಾಮ ಎಲ್ಲ ಬಾತ್ರೂಮ್ನಲ್ಲಿ ಮಾಡು ಈಡಿಯೆಟ್.. ನೀನು ಎಲ್ಲಿಂದ ಬಂದಿದ್ದು ಅಂತ ಗೊತ್ತು ಎಂದು ಬೈದಿದ್ದಾರೆ. ನಾನು ಬಾತ್ ರೂಮ್ಗೆ ನೂರು ಸಲ ಹೋಗ್ತೇನೆ ನಿಮ್ಗೆ ಏನು.. ಅದೇನು ನಿಮ್ಮ ಮನೆಯ ಬಾತ್ ರೂಮ್ ಹಾ? ಎಂದು ಪ್ರಶ್ನಿಸಿದ್ದಾರೆ.
BBK 12: ಮಿಡ್ ವೀಕ್ ಎಲಿಮಿನೇಷನ್: ಡಾಗ್ ಸತೀಶ್ ಹೊರಹೋಗಲು ಏನು ಕಾರಣ?
ಒಟ್ಟಾರೆ ಇಂದಿನ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಅಭಿಮಾನಿಗಳಂತು ಈ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅವರು ಈ ಮ್ಯಾಟರ್ ಎತ್ತಿ ಅಶ್ವಿನಿ ಹಾಗೂ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಕಳೆದ ವಾರ ರಕ್ಷಿತಾಳನ್ನು ಕಾರ್ಟೂನ್ ಎಂದು ಕರೆದು ಅವಮಾನ ಮಾಡಿದ್ದಕ್ಕೆ ಅಶ್ವಿನಿಯನ್ನು ಖಡಕ್ ಆಗಿ ಪ್ರಶ್ನಿಸಿಲ್ಲ.. ಈ ವಾರ ಕೂಡ ಹಾಗೇ ಮಾಡಿದ್ರೆ ನಾವು ಬಿಗ್ ಬಾಸ್ ನೋಡಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.