Bigg Boss Ranjith: ನಾನು ಲವರ್ ಬಾಯ್ ಅಲ್ಲ: ಲವ್ ಮ್ಯಾರೇಜ್ ಬಗ್ಗೆ ಮೊದಲ ಬಾರಿ ಮಾತನಾಡಿದ ಬಿಗ್ ಬಾಸ್ ರಂಜಿತ್
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ಅವರು ಇತ್ತೀಚೆಗಷ್ಟೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ. ಇದೀಗ ಈ ಜೋಡಿ ತಮ್ಮ ಪ್ರೇಮಕಥೆಯನ್ನು ಹೇಳಿಕೊಂಡಿದೆ.

bigg boss ranjith manasa

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ (Ranjith gowda) ಅವರು ಇತ್ತೀಚೆಗಷ್ಟೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲ ಆಪ್ತರನ್ನು ಮಾತ್ರ ಕರೆದು ಮಾರ್ಚ್ 06 ಗುರುವಾದಂದು ತಾನು ಪ್ರೀತಿಸಿದ ಹುಡುಗಿಯ ಜೊತೆ ಎಂಗೇಜ್ ಆಗಿದ್ದರು. ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಮದುವೆ ತಯಾರಿಯಲ್ಲಿರುವ ಈ ಜೋಡಿ ಪ್ರೀ ವೆವೆಡ್ಡಿಂಗ್ ಫೋಟೋ ಶೂಟ್ ಕೂಡ ಮಾಡಿದೆ. ಇದರ ಮಧ್ಯೆ ಈ ಜೋಡಿ ತಮ್ಮ ಪ್ರೇಮಕಥೆಯನ್ನು ಹೇಳಿಕೊಂಡಿದೆ.
ಖಾಸಗಿ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಂಜಿತ್, ಏನೇ ಮಾಡುವುದು ಇದ್ದರೂ ಗೋಧೂಳಿ ಲಗ್ನದಲ್ಲಿ ಮಾಡಿದರೆ ಒಳ್ಳೆಯದು ಎನ್ನುವುದು ನನ್ನ ನಂಬಿಕೆ. ಹೀಗಾಗಿ ಆ ದಿನ ಪ್ರೀತಿ ಹೇಳಿಕೊಳ್ಳಬೇಕು ಎಂದು ನಿರ್ಧರಿಸಿ ಪಾರ್ಟಿ ಮುಗಿಸಿಕೊಂಡು ಅವರ ಬೋಟಿಕ್ ಹತ್ತಿರ ಹೋಗಿದ್ದೆ. ಫೋನ್ ಮಾಡಿ ಕೆಳಗೆ ಕರೆದೆ, ನಾನು ಗೋಧೂಳಿ ಲಗ್ನಕ್ಕೆ ಕಾಯುತ್ತಿದ್ದೆ. ಅವರು ಯಾಕಾಗಿ ಕಾಯುತ್ತಿದ್ದೀರಿ ಅಂತಾ ಕೇಳಿದರು. ನಾನು ಐ ಲವ್ ಯೂ ಹೇಳುವುದಕ್ಕೆ ಅಂತಾ ನೇರವಾಗಿ ಹೇಳಿದೆ. ಆ ದಿನ ಸಂಜೆ ನಾನೇ ಮೊದಲು ಅವರಿಗೆ ಪ್ರಪೋಸ್ ಮಾಡಿದೆ ಎಂದು ಹೇಳಿದ್ದಾರೆ.
ಆ ದಿನ ನನಗೆ ಅವರಿಂದ ಉತ್ತರ ಬರಲಿಲ್ಲ. ಅದಾದ ಮೇಲೆ ಒಂದು ದಿನ ಊಟಕ್ಕೆ ಹೋಗಿದ್ದೇವು. ಅಲ್ಲಿಂದ ಬಂದು ವಾಪಸ್ ಮನೆಗೆ ಹೋಗುವಾಗ ಐ ಲವ್ ಯೂ ಟು ಎಂದು ಒಂದು ಹಗ್ ಕೊಟ್ಟು ಹೋದರು. ಅಲ್ಲಿಂದ ನಮ್ಮ ಪ್ರೀತಿ ಶುರುವಾಯ್ತು. ನಾನು ಲವರ್ ಬಾಯ್ ಅಲ್ಲ.. ಎಲ್ಲದಕ್ಕೂ ಒಂದು ವಿಶೇಷವಾದ ಘಳಿಗೆ ಅಂತಾ ಇರುತ್ತದೆ. ನಾನು ಮೊದಲ ಬಾರಿಗೆ ಅವರ ಹಣೆಗೆ ಮುತ್ತು ಕೊಟ್ಟಿದ್ದು, ನಮ್ಮ ನಿಶ್ಚಿತಾರ್ಥದಲ್ಲಿಯೇ. ಯಾರೇ ಹುಡುಗಿ ಆಗಲಿ, ಅವಳು ನನ್ನ ಲವರ್ ಆದರೂ ಕೂಡ ಅವಳಿಗೆ ಮುಜುಗರ ಆಗುವಂತೆ ನಾವು ನಡೆದುಕೊಳ್ಳಬಾರದು ಎಂದು ಹೇಳಿದ್ದಾರೆ.
Aishwarya-Shishir: ಐಶ್ವರ್ಯಾ-ಶಿಶಿರ್ ಮತ್ತೊಂದು ಫೋಟೋ ಶೂಟ್: ಸದ್ಯದಲ್ಲೇ ಮದುವೆ..?
ಇದೇವೇಳೆ ರಂಜಿತ್ ಅವರ ಬಗ್ಗೆ ಮಾತನಾಡಿದ ಭಾವಿ ಪತ್ನಿ, ರಂಜಿತ್ ಅವರು ತುಂಬಾ ಸಿಂಪಲ್ ವ್ಯಕ್ತಿ, ಅವರಿಗೆ ರೋಸ್ ಕೊಡುವುದು, ಪ್ರಪೋಸ್ ಮಾಡುವುದು ಅದೆಲ್ಲಾ ಇಷ್ಟಪಡುವುದಿಲ್ಲ. ಅವರು ಸಿಂಪಲ್ ಆಗಿ ಇರಲು ಇಷ್ಟಪಡುತ್ತಾರೆ. ಈ ಗುಣಗಳು ನನಗೆ ಹೋಲಿಕೆ ಆಗುತ್ತಲ್ಲಾ ಅಂತಾ ಅನಿಸಿತ್ತು. ಅವರು ಪ್ರಪೋಸ್ ಮಾಡಿದ ಮೇಲೆ ನನಗೂ ಇಷ್ಟ ಇದೆ ಅಂತಾ ಹೇಳಿದೆ. ಸದ್ಯದಲ್ಲೇ ಮದುವೆ ಇದೆ ಎಂದು ಹೇಳಿದ್ದಾರೆ.