Aishwarya-Shishir: ಐಶ್ವರ್ಯಾ-ಶಿಶಿರ್ ಮತ್ತೊಂದು ಫೋಟೋ ಶೂಟ್: ಸದ್ಯದಲ್ಲೇ ಮದುವೆ..?
Aishwarya Shishir Photoshoot: ಶಿಶಿರ್-ಐಶ್ವರ್ಯಾ ಹೆಚ್ಚಾಗಿ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ವಾರಕ್ಕೊಂದು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಹೊಸ ಫೋಟೋ ಶೂಟ್‌ನಲ್ಲಿ ಐಶ್ವರ್ಯಾ ಮತ್ತು ಶಿಶಿರ್ ಕಾಣಿಸಿಕೊಂಡಿದ್ದಾರೆ. ರಾಯಲ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಐಶಿರ್ ಪೋಸ್ ನೀಡಿದ್ದಾರೆ.

Aishwarya and Shishir

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ (Aishwarya Shindogi) ಹಾಗೂ ಶಿಶಿರ್ ಶಾಸ್ತ್ರೀ ದೊಡ್ಮನೆಯೊಳಗೆ ಇದ್ದಾಗಲೇ ಲವ್ ವಿಚಾರಕ್ಕೆ ಆಗಾಗ್ಗೆ ಸುದ್ದಿಯಾಗುತ್ತಲೇ ಇದ್ದರು. ಇವರು ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಹೋಳಿ ಹಬ್ಬದ ಸಂದರ್ಭ ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ವಿಡಿಯೋದಲ್ಲಿ ಐಶ್ವರ್ಯಾ ಅವರು ಶಿಶಿರ್ಗೆ ಕಿಸ್ ಕೊಟ್ಟಿದ್ದರು. ಈ ವಿಡಿಯೋ ಭರ್ಜರಿ ವೈರಲ್ ಆಗಿತ್ತು.
ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ. ಮದುವೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಸದ್ಯಕ್ಕಂತೂ ಮದುವೆಯಾಗುವ ಯೋಚನೆ ಇಲ್ಲ. ಆದರೆ, ಒಳ್ಳೆಯ ಗುಣಗಳಿರುವ ಹುಡುಗ ಹಾಗೂ ತನ್ನನ್ನು ಕಾಳಜಿ ಮಾಡುವವ ಸಿಗಬೇಕು. ಅಲ್ಲದೇ, ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಹೇಳಿದ್ದರು.
ಆದರೆ, ಶಿಶಿರ್-ಐಶ್ವರ್ಯಾ ಹೆಚ್ಚಾಗಿ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ವಾರಕ್ಕೊಂದು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಒಟ್ಟೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಹೊಸ ಫೋಟೋ ಶೂಟ್‌ನಲ್ಲಿ ಐಶ್ವರ್ಯಾ ಮತ್ತು ಶಿಶಿರ್ ಕಾಣಿಸಿಕೊಂಡಿದ್ದಾರೆ. ರಾಯಲ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಐಶಿರ್ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ. ಸಾಕಷ್ಟು ಲೈಕ್ಸ್ ಮತ್ತು ಬಗೆಬಗೆಯ ಕಾಮೆಂಟ್‌ಗಳು ಈ ಫೊಟೋಗೆ ಹರಿದು ಬಂದಿವೆ. ವಿಂಟೇಜ್ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ‘ಹಳೆಯ ಕನಸಿನಲ್ಲಿ ಬದುಕುವುದು’ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಈ ಫೊಟೋಗೆ ನಾನಾ ಬಗೆಯ ಕಮೆಂಟ್ಸ್ ಬರುತ್ತಿದ್ದು, ಬೇಗ ಮದುವೆ ಮಾಡಿಕೊಳ್ಳಿ. ನೀವಿಬ್ಬರು ಗಂಡ-ಹೆಂಡತಿ ಆದರೆ ಚೆನ್ನಾಗಿರುತ್ತೆ. ಹ್ಯಾಪಿ ಮ್ಯಾರಿಡ್ ಲೈಫ್, ಮದುವೆ ಯಾವಾಗ. ಥೇಟ್ ರಾಜ ರಾಣಿ ಇದ್ದಂಗೆ ಇದ್ದೀರಾ. ಇದು ವೆಡ್ಡಿಂಗ್ ಶೂಟ್ ಅಂತ ಅನಿಸುತ್ತಿದೆ ಎಂದೆಲ್ಲಾ ಅಭಿಮಾನಿಗಳು ಹೇಳುತ್ತಿದ್ದಾರೆ.
Kannada Serial TRP: ಪಾತಾಳಕ್ಕೆ ಕುಸಿದ ಸೀತಾ ರಾಮ ಧಾರಾವಾಹಿ ಟಿಆರ್ಪಿ: ನಂಬರ್ 1 ಧಾರಾವಾಹಿ ಯಾವುದು?