Chaithra Kundapura: ಮದುವೆಯಾದ ಬೆನ್ನಲ್ಲೇ ಹೆಸರು ಬದಲಾಯಿಸಿದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಮದುವೆ ಸಮಾರಂಭದ ಅಮೃತ ಘಳಿಗೆಯನ್ನು ಧನರಾಜ್ ಆಚಾರ್ ವ್ಲಾಗ್ ಮಾಡಿದ್ದಾರೆ. ಇದರ ವಿಡಿಯೋವನ್ನು ಧನು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಚಾರವನ್ನು ಕೂಡ ಧನರಾಜ್ ಸೆರೆಹಿಡಿದಿದ್ದಾರೆ. ಮುಖ್ಯವಾಗಿ ಚೈತ್ರಾ ಕುಂದಾಪುರ ಹೆಸರು ಬದಲಾವಣೆ ಕುರಿತು.

Chaithra Kundapura

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Chaithra Kundapura) ಮೇ 9ರಂದು ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬವರ ಜೊತೆ ಚೈತ್ರಾ ವಿವಾಹವಾಗಿದೆ. ತುಂಬಾ ಸಿಂಪಲ್ ಆಗಿ ನಡೆದಿದ್ದ ಈ ವಿವಾಹಕ್ಕೆ ಬೆರಳಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಕೆಲ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದರು. ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಚೈತ್ರಾ ಮದುವೆಗೆ ಹಾಜರಿದ್ದರು.
ಈ ಮದುವೆ ಸಮಾರಂಭದ ಅಮೃತ ಘಳಿಗೆಯನ್ನು ಧನರಾಜ್ ಆಚಾರ್ ವ್ಲಾಗ್ ಮಾಡಿದ್ದಾರೆ. ಇದರ ವಿಡಿಯೋವನ್ನು ಧನು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಇಂಟ್ರೆಸ್ಟಿಂಗ್ ವಿಚಾರವನ್ನು ಕೂಡ ಧನರಾಜ್ ಸೆರೆಹಿಡಿದಿದ್ದಾರೆ. ಮುಖ್ಯವಾಗಿ ಚೈತ್ರಾ ಕುಂದಾಪುರ ಹೆಸರು ಬದಲಾವಣೆ ಕುರಿತು.
ಚೈತ್ರಾ ಕುಂದಾಪುರ ಅವರು ಮೊದಲೇ ಶಾಸ್ತ್ರ-ಸಂಪ್ರದಾಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅವರ ಪತಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದಾರೆ. ಮದುವೆಯ ಬಳಿಕ ಕೂಡ ಚೈತ್ರಾ ಅವರು, ನಾವಿಬ್ಬರೂ ಶಾಸ್ತ್ರ ಸಂಪ್ರದಾಯಗಳನ್ನು ನಂಬುವವರು. ನಮಗೆ ನಮ್ಮ ಮದುವೆಯಲ್ಲಿ ಇದನ್ನ ಫಾಲೋ ಮಾಡಬೇಕು, ಅದೇ ನಮಗೆ ಬಹಳ ಮುಖ್ಯ ಎಂದು ಹೇಳಿದ್ದರು. ಅದರಂತೆ ಇವರ ಮದುವೆಯ ಶಾಸ್ತ್ರದಲ್ಲಿ ಹೆಸರು ಬದಲಾವಣೆ ಕೂಡ ಒಂದು.
ಇದೀಗ ಶಾಸ್ತ್ರದ ಪ್ರಕಾರ ಚೈತ್ರಾಗೆ ಬೇರೆ ಹೆಸರು ಇಡಲಾಗಿದೆ. ಮದುವೆ ಬಳಿಕ ಶ್ರೀಕಾಂತ್ ಕಶ್ಯಪ್ ತಾಯಿ, ಚೈತ್ರಾ ಕುಂದಾಪುರಗೆ ಶ್ರೀಮೇಧಾ ಎಂದು ನೂತನ ನಾಮಕರಣ ಮಾಡಿದ್ದಾರೆ. ವರನ ತಾಯಿಯು ವಧುವಿಗೆ ಬಾಳೆ ಹಣ್ಣನ್ನು ತಿನ್ನಿಸಿ, ಹೆಸರನ್ನು ಬದಲಾವಣೆ ಮಾಡುವ ಶಾಸ್ತ್ರ ಇದಾಗಿದೆ. ಹಾಗಾಗಿ, ಚೈತ್ರಾಗೆ ಈಗ ಶ್ರೀಮೇಧಾ ಎಂದು ಹೆಸರಿಡಲಾಗಿದೆ. ಒಂದು ಹೆಣ್ಣಿಗೆ ಇದು ಪುನರ್ಜನ್ಮ ಅಂತ. ಅತ್ತೆ ಸೊಸೆಗೆ ಹಣ್ಣು ತಿನ್ನಿಸಿ, ನನ್ನ ಮನೆಗೆ ಮಗಳಾಗಿ ಬರಬೇಕು ಎಂದು ಹೇಳಿ ಹೊಸ ಹೆಸರನ್ನು ಇಡುತ್ತಾರೆ ಎಂದು ಚೈತ್ರಾ ತಿಳಿಸಿದ್ದಾರೆ. ಶ್ರೀಮೇಧಾದ ಅರ್ಥ ಏನೆಂದರೆ, ಶ್ರೀ ಎಂದರೆ ಲಕ್ಷ್ಮೀ ಮತ್ತು ಮೇಧಾ ಎಂದರೆ ಸರಸ್ವತಿ. ಇನ್ನು, ಶ್ರೀಕಾಂತ್ ಹೆಸರಲ್ಲೂ ಶ್ರೀ ಇದೆ. ಇದೆಲ್ಲಾ ಸೇರಿಸಿ ಶ್ರೇಮೇಧಾ ಅಂತ ಇಟ್ಟಿದ್ದಾರೆ ಎಂದು ಚೈತ್ರಾ ಹೇಳಿದ್ದಾರೆ.
Bhagya Lakshmi Serial: ಪತ್ತೆದಾರಿ ಕೆಲಸ ಶುರುಮಾಡಿದ ಭಾಗ್ಯ: ತಾಂಡವ್ಗೆ ಸದ್ಯದಲ್ಲೇ ಕಾದಿದೆ ಮತ್ತೊಂದು ಶಾಕ್