Rajath Kishan: ಶರ್ಟ್ ಮೇಲೆ D BOSS ಹೆಸರು: ಲಾಂಗ್ ಹಿಡಿದು ರೀಲ್ಸ್ ಮಾಡಿದ ರಜತ್ ವಿರುದ್ಧ ಬೈಗುಳಗಳ ಸುರಿಮಳೆ
ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದಾರೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ಸ್ಲೋ ಮೋಷನ್ ವಾಕ್ ಮಾಡಿದ್ದಾರೆ.

Rajath Kishan

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ರಜತ್ ಕಿಶನ್ ಹೆಚ್ಚಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸುತ್ತಲೇ ಇದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಮೂಲತಃ ರಜತ್ ಕಿಶನ್ ಅವರು ಡಿ ಬಾಸ್ ದರ್ಶನ್ ಅಭಿಮಾನಿ. ಇದನ್ನು ಅವರು ಅನೇಕ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಕೂಡ. ಇದೀಗ ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದಾರೆ.
ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ಸ್ಲೋ ಮೋಷನ್ ವಾಕ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವಿನಯ್ ಹಾಗೂ ರಜತ್ ಲುಕ್ಗೆ ಫಿದಾ ಆಗಿದ್ದಾರೆ. ಜೊತೆಗೆ ಇದಕ್ಕೆ ನೆಗೆಟಿವ್ ಕಮೆಂಟ್ಸ್ ಕೂಡ ಬರುತ್ತಿದ್ದು, ಕೆಲ ಅಭಿಮಾನಿಗಳು ಬೈಯುತ್ತಿದ್ದಾರೆ.
ರಜತ್, ಬಿಳ್ಳಿ ಬಣ್ಣದ ಶರ್ಟ್‌ನ ಮೇಲೆ ಡಿ ಬಾಸ್ ಎಂದು ದೊಡ್ಡದಾಗಿ ಬರೆದುಕೊಂಡಿದ್ದಾರೆ. ಹಾಕಿರುವ ಪ್ಯಾಂಟ್ ಮೇಲೂ ದರ್ಶನ್ ಹೆಸರು ಜೊತೆಗೆ ಅವರ ಸಿನಿಮಾದ ಹೆಸರನ್ನು ಬರೆಯಲಾಗಿದೆ. ಪ್ಯಾಂಟ್ ಮೇಲೆ ಮೆಜೆಸ್ಟಿಕ್, ಅಣ್ಣಾವ್ರು, ಲಂಕೇಶ್ ಪತ್ರಿಕೆ, ಪೊರ್ಕಿ, ನನ್ನ ಪ್ರೀತಿಯ ರಾಮು, ಕರಿಯ, ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಶಾಸ್ತ್ರಿ, ಅರ್ಜುನ್, ಗಜ, ಲಾಲಿಹಾಡು ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಬರೆಸಿಕೊಂಡಿದ್ದಾರೆ.
ಈ ಪೈಕಿ "ದರ್ಶನ್" ಎಂಬ ಹೆಸರು ರಜತ್ ಧರಿಸಿದ್ದ ಶೂ ಮೇಲೆ ಬಂದಿದೆ. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ರಜತ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. "ನಿಮ್ಮ ಅಭಿಮಾನ ಮೆಚ್ಚುವಂತದ್ದೇ, ಆದರೆ ಅಭಿಮಾನದ ಹೆಸರಿನಲ್ಲಿ ದರ್ಶನ್ ಅವರಿಗೇ ಅವಮಾನ ಮಾಡ್ತಿದ್ದೀರಲ್ಲ?" ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಸೆಲೆಬ್ರಿಟಿಗಳು ಈರೀತಿ ಮಾಡುವುದು ಸರಿಯಲ್ಲ.. ನೀವು ಜನರಿಗೆ ಏನು ಮೆಸೇಜ್ ಕೊಡುತ್ತೀರಿ ಇದರಿಂದ ಎಂದು ಕೇಳುತ್ತಿದ್ದಾರೆ. ಇಂಥ ರೀಲ್ಸ್‌ಗಳನ್ನು ಸೆಲೆಬ್ರಿಟಿಯಾದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು ಎನ್ನುತ್ತಿದ್ದಾರೆ.
Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?