Drishti Bottu: ದೃಷ್ಟಿಯನ್ನು ಮನೆಯಿಂದ ಹೊರದಬ್ಬಿದ ಶರಾವತಿ: ಏನು ಮಾಡ್ತಾನೆ ದತ್ತ ಭಾಯ್?
ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಿದಿದೆ. ದೃಷ್ಟಿಯ ನಿಜರೂಪ ಅನಾವರಣ ಆಗಿದ್ದೇ ತಡ ಕಾದು ಕುಳಿತಿದ್ದ ಶರಾವತಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾಳೆ. ಆದರೆ, ಆ ಹೊತ್ತಿಗೆ ಅಲ್ಲಿಗೆ ದತ್ತ ಭಾಯ್ ಬಂದಿದ್ದಾನೆ.

Drishti Bottu -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿಬೊಟ್ಟು (Drishti bottu) ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಸೆಲೆಯುತ್ತಿದೆ. ಈ ಸೀರಿಯಲ್‌ನಲ್ಲೀಗ ಟ್ವಿಸ್ಟ್‌ಗಳ ಮೇಲೆ ಟ್ವಿಸ್ ನೀಡಲಾಗುತ್ತಿದೆ. ಸೀರಿಯಲ್ ವೀಕ್ಷಿಸುವವರಿಗೆ ಈ ಕಥೆ ಕುತೂಹಲ ಕೆರಳಿಸುತ್ತಿದೆ. ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಿದಿದೆ. ದೃಷ್ಟಿಯ ನಿಜರೂಪ ಅನಾವರಣ ಆಗಿದ್ದೇ ತಡ ಕಾದು ಕುಳಿತಿದ್ದ ಶರಾವತಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾಳೆ. ಆದರೆ, ಆ ಹೊತ್ತಿಗೆ ಅಲ್ಲಿಗೆ ದತ್ತ ಭಾಯ್ ಬಂದಿದ್ದಾನೆ.
ತಮ್ಮನ ವಿರುದ್ಧ ಒಳಗಿಂದೊಳಗೇ ದ್ವೇಷ ಸಾಧಿಸುವ ಶರಾವತಿಗೆ, ದತ್ತನ ಜೀವನಕ್ಕೆ ದೃಷ್ಟಿ ಬಂದಿದ್ದು ನುಂಗಲಾರದ ತುತ್ತಾಗಿತ್ತು. ಶರಾವತಿಯ ಎಲ್ಲ ಕುತಂತ್ರಗಳಿಗೂ ಬ್ರೇಕ್ ಹಾಕಿ, ಅತ್ತಿಗೆಗೇ ಸೆಡ್ಡು ಹೊಡೆದು ನಿಂತು, ದತ್ತನನ್ನ ಕಾಪಾಡೋ ಗೋಡೆಯಾಗಿ ದೃಷ್ಟಿ ನಿಂತಿದ್ದಳು. ದೃಷ್ಟಿಯನ್ನು ಏನೂ ಮಾಡಲು ಸಾಧ್ಯವಾಗದ ಕಾರಣ ಶರಾವತಿ ದೃಷ್ಟಿ ಅಕ್ಕ ಸೀಮಾಳನ್ನ ದಾಳವಾಗಿ ಬಳಸಿಕೊಂಡಳು. ಇದರಿಂದ ದೃಷ್ಟಿ ಎಲ್ಲರಿಂದ ಮುಚ್ಚಿಟ್ಟಿರೋ ಗುಟ್ಟು ಗೊತ್ತಾಯಿತು.
ಸೀಮಾಳಿಗೆ ತನ್ನ ತಂಗಿಯ ಜೀವನ ಕೆಡಿಸುವ ದುರುದ್ದೇಶ ಇಲ್ಲದೇ ಹೋದರೂ, ಅವಳು ಬಾಯಿ ಬಿಡಲೇಬೇಕಾದ ಸಂದಿಗ್ಧ ಎದುರಾಗುತ್ತದೆ. ದತ್ತನಿಗೆ ಮೊದಲೇ ಸುಂದರವಾಗಿರೋ ಹುಡುಗೀರು ಮೋಸ ಮಾಡುತ್ತಾರೆ, ಅವರು ನಂಬಿಕೆಗೆ ಅರ್ಹರಲ್ಲ ಅನ್ನೋದನ್ನ ತುಂಬ ಗಟ್ಟಿಯಾಗಿ ನಂಬಿದ್ದಾನೆ. ಸುಂದರವಾಗಿರೋ ಹುಡುಗಿಯರ ಮೇಲೆ ದತ್ತನಿಗೆ ನಂಬಿಕೆ ಇಲ್ಲ. ಎರಡನೇಯದಾಗಿ, ನಂಬಿಕೆ ದ್ರೋಹ ಮಾಡಿದವರನ್ನ ಯಾವತ್ತಿಗೂ ಕ್ಷಮಿಸಲ್ಲ.
ಅತ್ತ ತನಗೆ ಮುಳುವಾಗಿದ್ದ ಸೌಂದರ್ಯವನ್ನ ಮರೆಮಾಚೋಕೆ ದೃಷ್ಟಿ ಕಪ್ಪು ಬಣ್ಣ ಹಚ್ಚಿಕೊಂಡಿದ್ದಳು. ಆದರೆ, ಎಲ್ಲರ ಎದುರು ದತ್ತನಿಗೆ ದೃಷ್ಟಿಯ ನಿಜರೂಪ ದರ್ಶನ ಆಯಿತು. ದೃಷ್ಟಿ ಚರ್ಮಕ್ಕೆ ಬಳಿದುಕೊಳ್ತಿದ್ದ ಕಪ್ಪು ಬಣ್ಣ ಸುರಿಯುವ ಮಳೆಯಲ್ಲಿ ಕಳೆದುಹೋಗಿ, ದೃಷ್ಟಿಯ ಅಸಲಿ ಬಣ್ಣ ದತ್ತನಿಗೆ ಗೊತ್ತಾಯಿತು. ಇದರಿಂದ ಮನೆಯಲ್ಲಿ ಕೋಲಾಹಲವಾಗಿದೆ. ದತ್ತ ಕೂಡ ಒಂದು ಕ್ಷಣ ಕೋಪ ಮಾಡಿಕೊಂಡಿದ್ದಾನೆ. ನೀನು ಮಾಡಿರೋ ಗಾಯ, ನೀನು ಮಾಡಿರೋ ನೋವು ಕಣ್ಣಿಗೆ ಕಾಣಿಸಲ್ಲ.. ಆದ್ರೆ ಮನಸ್ಸಿಗೆ ನೋವಾಗಿದೆ. ನೀನು ಎಲ್ಲ ಹುಡುಗಿರ ತರ ಅಲ್ಲ ಅಂದುಕೊಂಡೆ.. ಈ ಸುಳ್ಳು-ಕಪಟ ಗೊತ್ತಿಲ್ಲ ಅಂದುಕೊಂಡೆ.. ಮುಗ್ಧ ಹುಡುಗಿ ಅಂದುಕೊಂಡಿದ್ದೆ.. ಆದ್ರೆ ನಿನ್ದು ಮೋಸದ-ಸುಳ್ಳಿನ ಮುಖವಾಡ ಎಂದು ಹೇಳಿದ್ದಾನೆ.
Bhagya Lakshmi Serial: ಸ್ಕೇಟಿಂಗ್ ಕಲಿಯಲು ಮುಂದಾದ ಭಾಗ್ಯಕ್ಕ: ಸುಷ್ಮಾ ರಾವ್ ಹೊಸ ಸಾಹಸ
ಇದಾದ ಬಳಿಕ ಶರಾವತಿ ದೃಷ್ಟಿಯನ್ನು ಮನೆಯಿಂದ ಹೊರ ಹಾಕಲು ಮುಂದಾಗಿದ್ದಾಳೆ. ನೀನು ಮನೆಗೆಲಸದವಳ ಮಗಳು.. ಆದ್ರೂ ನಾವು ನಿನ್ನ ಮನೆ ಸೊಸೆ ಮಾಡಿದ್ವಿ.. ಕೊನೆಗೂ ನೀನು ನಿನ್ನ ಚೀಪ್ ಲೆವೆಲ್ ತೋರಿಸಿ ಬಿಟ್ಟೆ.. ಇನ್ಮುಂದೆ ಈ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಗಂಟು-ಮೂಟೆ ತಂದು ಕೊಟ್ಟು ನಡಿ ಇಲ್ಲಿಂದ ಎಂದಿದ್ದಾಳೆ ಶರಾವತಿ. ಇದೇ ವೇಳೆ ಅಲ್ಲಿಗೆ ದತ್ತಭಾಯ್ ಬಂದಿದ್ದಾನೆ.
ವಿಶೇಷ ಎಂದರೆ ಇಲ್ಲಿ ದತ್ತ ದಿಢೀರ್ ಎಂದು ಬದಲಾಗಿ ದೃಷ್ಟಿಯ ಪರವಾಗಿ ಮಾತನಾಡಿದ್ದಾನೆ. ನಾವೆಲ್ಲ ಹೇಗೆ ಅಂದ್ರೆ ಕಣ್ಣಲ್ಲಿ ಏನು ಕಾಣುತ್ತೊ ಅದನ್ನ ನೋಡಿ ಮಾತಾಡುತ್ತೇವೆ. ಆದ್ರೆ, ಒಬ್ಬರ ಮನಸ್ಸಿನಲ್ಲಿ ಮುಚ್ಚಿಟ್ಟಿರುವ ನೋವನ್ನು ನೋಡುವ ಪ್ರಯತ್ನ ನಾವು ಮಾಡಲ್ಲ.. ಅವಳು ಸತ್ಯ ಮುಚ್ಚಿಟ್ಟಳು, ಅದೇ ನಮಗೆ ದೊಡ್ಡ ಪಾಪಾ ತರ ಕಾಣಿಸ್ತಿದೆ.. ಆದ್ರೆ ಅವಳು ಈರೀತಿ ಆಗಲು ಕಾರಣವೇನು?, ಅವಳ ಜೀವನದಲ್ಲಿ ಏನೇನು ಆಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಸೋತೆವು ಎಂದಿದ್ದಾನೆ.
ಸದ್ಯ ಶರಾವತಿಯ ಈ ಪ್ಲ್ಯಾನ್ ಕೂಡ ಫ್ಲಾಪ್ ಆಗುವ ಹಾಗಿದೆ. ದತ್ತ ಭಾಯ್ ದೃಷ್ಟಿಯನ್ನು ಮನೆಯಿಂದ ಹೊರಹಾಕು ಸಹಾಯ ಮಾಡುತ್ತಾನೆ, ಆಕೆಯ ವಿರುದ್ಧ ನಿಲ್ಲುತ್ತಾನೆ ಎಂದು ಅಂದುಕೊಂಡಿದ್ದಳು. ಆದರೆ ಇಲ್ಲಿ ಉಲ್ಟಾ ಆದಂತಿದೆ. ಸದ್ಯ ಮುಂದೇನು ಆಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.