Emergency Movie: ಕಂಗನಾ ನಟನೆಯ ʻಎಮರ್ಜೆನ್ಸಿʼ ಚಿತ್ರ ಮೊದಲ ದಿನ ಗಳಿಸಿದೆಷ್ಟು?
ಕಂಗನಾ ರಣಾವತ್ ನಟನೆಯ ಎಮೆರ್ಜೆನ್ಸಿ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು ಮೊದಲ ದಿನ 2.09 ಕೋಟಿ ರೂ. ಗಳಿಸಿದೆ. ಕಂಗನಾ ಅವರ 2020ರಲ್ಲಿ ಬಿಡುಗಡೆಯಾದ ಪಂಗಾ ಚಿತ್ರ 2.70 ಕೋಟಿ ರೂ. ಮೊದಲ ದಿನ ಗಳಿಸಿತ್ತು.
ಮುಂಬೈ, ಜ.18, 2025: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಬಹುನಿರೀಕ್ಷಿತ ಸಿನಿಮಾ ಎಮರ್ಜೆನ್ಸಿ ಚಿತ್ರ ಬಿಡುಗಡೆಯಾಗಿದ್ದು 1975ರ ತುರ್ತು ಪರಿಸ್ಥಿತಿಯನ್ನು ಒಳಗೊಂಡ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿನಿಮಾ ನೋಡಿ ಉತ್ತಮವಾಗಿದೆ ಎಂದರೆ ಇನ್ನು ಕೆಲವರು ಚಿತ್ರ ನೋಡಿ ನಿರಾಸೆಗೊಂಡಿದ್ದಾರೆ.
ಮೊದಲ ದಿನದ ಕಲೆಕ್ಷನ್ ಎಷ್ಟು?
ಇನ್ನು ಈ ಸಿನಿಮಾ ಅಂದುಕೊಂಡಷ್ಟು ಕಲೆಕ್ಷನ್ ವಿಚಾರದಲ್ಲೂ ಅಷ್ಟಾಗಿ ಸದ್ದು ಮಾಡಿಲ್ಲ. ಎಮೆರ್ಜೆನ್ಸಿ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು ಮೊದಲ ದಿನ 2.09 ಕೋಟಿ ರೂ. ಗಳಿಸಿದೆ. ಕಂಗನಾ ಅವರ 2020ರಲ್ಲಿ ಬಿಡುಗಡೆ ಯಾದ ಪಂಗಾ 2.70 ಕೋಟಿ ರೂ. ಮೊದಲ ದಿನ ಗಳಿಸಿತ್ತು. ಕೊನೆಯ ಚಿತ್ರ ತೇಜಸ್ ಮೊದಲ ದಿನ 1.20 ಕೋಟಿ ರೂ. ಗಳಿಸಿತ್ತು.ಇದೀಗ ಎಮರ್ಜೆನ್ಸಿ ಈ ಎರಡು ಸಿನಿಮಾಗಳಿಗಿಂತಲೂ ಹಿಂದಿದೆ.
ಸಿನಿಮಾಗೆ ಪಂಜಾಬ್ನಲ್ಲಿ ತೀವ್ರ ವಿರೋಧ:
ರಾಜಕೀಯ ವಿಚಾರಗಳ ಕುರಿತಂತೆ ಈ ಚಿತ್ರ ಮೂಡಿಬಂದಿದ್ದು ಚಿತ್ರದ ಸುತ್ತ ಕೆಲವು ವಿವಾದಗಳು ಕೂಡ ಕೇಳಿಬಂದಿತ್ತು. ಪಂಜಾಬ್ನಲ್ಲಿ ಎಮರ್ಜೆನ್ಸಿ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು, ಸಿಖ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಹಾಗಾಗಿ ಲುಧಿಯಾನ, ಅಮೃತಸರ, ಪಟಿಯಾಲ ಸೇರಿ ಪಂಜಾಬ್‌ನ ಹಲವೆಡೆ ಈ ಸಿನಿಮಾ ತೆರೆಕಂಡಿಲ್ಲ. ಚಿತ್ರಮಂದಿರ ಮತ್ತು ಮಾಲ್‌ಗಳ ಮುಂದೆ ಪ್ರತಿಭಟನೆಗಳು ಜೋರಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಉಂಟಾಗಿತ್ತು.
ಕಂಗನಾ ರಣಾವತ್ ಟ್ವೀಟ್:
ಈ ವಿಚಾರ ಕುರಿತಂತೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ‘ಇದು ಕಲೆ ಮತ್ತು ಕಲಾವಿದರ ಮೇಲೆ ಆಗುತ್ತಿರುವ ತೊಂದರೆ ನನಗೆ ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ನಾನು ಸಿಖ್ ಧರ್ಮವನ್ನು ಹತ್ತಿರದಿಂದ ನೋಡಿ ಅವರ ಜೊತೆ ಬೆರೆತಿದ್ದೇನೆ ಸಿನಿಮಾದಲ್ಲಿ ಸಿಖ್ ಧರ್ಮಕ್ಕೆ ಅವಮಾನ ಆಗಿದೆ ಎಂಬುದು ಸುಳ್ಳು, ಇದು ಸಿನಿಮಾಗೆ ಹಾನಿ ಮಾಡುವ ಉದ್ದೇಶ ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.
ಚಿತ್ರದ ಕುರಿತಂತೆ ಮಿಶ್ರ ಪ್ರತಿಕ್ರಿಯೆ:
ಈ ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇತ್ತು.ಆದರೆ ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಗಳಿಸಿದರೆ ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ. ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು ಕೆಲವು ದೃಶ್ಯಗಳು ಪೂರ್ಣವಾಗಿ ಮೂಡಿಬಂದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಕಂಗನಾ ನಟನೆಗೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಚೇಂಜ್ ಇದ್ದರೂ ನೀಡದ ಅಧಿಕಾರಿ – ರೈಲ್ವೇ ಟಿಕೆಟ್ ಕೌಂಟರ್ ನಲ್ಲಿನ ವಾಗ್ವಾದದ ವಿಡಿಯೋ ವೈರಲ್
ಎಮರ್ಜೆನ್ಸಿ ಚಿತ್ತದಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ಮಾಡಿದ್ದು ರಾಜಕೀಯ ಪ್ರೇರಣಾ ಸಿನಿಮಾವಾಗಿದೆ. ಪ್ರಧಾನಮಂತ್ರಿ ಇಂದಿರಾ ಗಾಂಧಿ ಕಠಿಣ ಮತ್ತು ಸರ್ವಾಧಿಕಾರಿ ಆಡಳಿತದ ವೇಳೆ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಈ ಚಿತ್ರ ತೋರಿಸುತ್ತದೆ. ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಡೆ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಇತ್ಯಾದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.