Akhila Pajimannu: ಮೂರೇ ವರ್ಷಕ್ಕೆ ಮುರಿದುಬಿತ್ತು ಅಖಿಲಾ ಪಜಿಮಣ್ಣು ದಾಂಪತ್ಯ: ಕನ್ನಡ ಕೋಗಿಲೆ ಗಾಯಕಿ ವಿಚ್ಛೇದನಕ್ಕೆ ಅರ್ಜಿ
ಕನ್ನಡ ಕೋಗಿಲೆ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೀಗ ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.

akhila pajimannu

ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿದೆ. ಇದೊಂದು ಟ್ರೆಂಡ್ನಂತೆ ಮಾರ್ಪಾಡಾಗುತ್ತಿದೆ. ಪ್ರತಿ ತಿಂಗಳು ಒಬ್ಬರಲ್ಲ ಒಬ್ಬರ ಡಿವೋರ್ಸ್ ಸುದ್ದಿ ಹೊರಬೀಳುತ್ತಲೇ ಇದೆ. ಈಗ ಆ ಸಾಲಿಗೆ ಅಚ್ಚರಿ ಎಂಬಂತೆ ಕನ್ನಡ ಕೋಗಿಲೆ ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು (Akhila Pajimannu) ಕೂಡ ಸೇರಿಕೊಂಡಿದ್ದಾರೆ. ಕನ್ನಡ ಕೋಗಿಲೆ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಆದರೀಗ ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೀಗ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕು ಕೋರ್ಟ್‌ನಲ್ಲಿ ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಧನಂಜಯ್ ಶರ್ಮಾ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಮದುವೆಯಾದ್ಮೇಲೆ ಈ ದಂಪತಿ ಅಮೆರಿಕಕ್ಕೆ ಶಿಫ್ಟ್ ಆಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ದಂಪತಿ ವಾಸವಾಗಿದ್ದರು. ಆದರೆ, ಮದುವೆಯಾದ ಮೂರೇ ವರ್ಷಕ್ಕೆ ಅಖಿಲಾ ಪಜಿಮಣ್ಣು - ಧನಂಜಯ್ ಶರ್ಮಾ ದಾಂಪತ್ಯ ಮುರಿದುಬಿದ್ದಿದೆ.
ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಲಿಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದ್ದರು. ಇದರ ವಿಜೇತರಾಗಿದ್ದ ಆಕೆ, 2019 ರಲ್ಲಿ, ಅವರು ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ಭಾಗವಹಿಸಿದರು ಮತ್ತು ಅಲ್ಲಿ 1 ನೇ ರನ್ನರ್ ಅಪ್ ಆಗಿದ್ದರು.
Kiccha Sudeep: ಕಮಲ್ ಹಾಸನ್ ವಿಚಾರದಲ್ಲಿ ಶಿವಣ್ಣನ ಟಾರ್ಗೆಟ್ ಮಾಡಿದ್ರು: ಕಿಚ್ಚ ಸುದೀಪ್