Kannada Serial TRP: ಕರಿಮಣಿ ಅಲ್ಲ: ಕರ್ನಾಟಕದ ನಂಬರ್ ಒನ್ ಧಾರಾವಾಹಿ ಇದುವೇ ನೋಡಿ
ಇದೀಗ 10ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಇತ್ತೀಚೆಗಷ್ಟೇ ಆರಂಭವಾದ ನಾ ನಿನ್ನ ಬಿಡಲಾರೆ, ಅಣ್ಣಯ್ಯ ಹಾಗೂ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಮುಂದಿವೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಆದರೆ, ನಂಬರ್ ಒನ್ ಸೀರಿಯಲ್ ಯಾವುದು ಗೊತ್ತೇ?.

Kannada Number One Serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್‌ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.
ಇದೀಗ 10ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಇತ್ತೀಚೆಗಷ್ಟೇ ಆರಂಭವಾದ ನಾ ನಿನ್ನ ಬಿಡಲಾರೆ, ಅಣ್ಣಯ್ಯ ಹಾಗೂ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಮುಂದಿವೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.
ಕನ್ನಡದ ನಂಬರ್ 1 ಸೀರಿಯಲ್ ಯಾವುದು?
ಸ್ಯಾಂಡಲ್ವುಡ್ನಲ್ಲಿ 1979ರಲ್ಲಿ ತೆರೆಕಂಡ ಅನಂತ್ ನಾಗ್ ಮತ್ತು ಲಕ್ಷ್ಮೀ ಕಾಂಬಿನೇಷನ್‌ನ ನಾ ನಿನ್ನ ಬಿಡಲಾರೆ ಎಂಬ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗಷ್ಟೆ ಇದೇ ಹೆಸರಿನಲ್ಲಿ ಝೀ ಕನ್ನಡದಲ್ಲಿ ಹೊಸ ಹಾರರ್ ಸೀರಿಯಲ್ ಆರಂಭವಾಗಿದೆ. ಹಿರಿಯ ಕಲಾವಿದರ ದಂಡೇ ಇರುವ ಈ ಧಾರಾವಾಹಿಯ ಗುಣಮಟ್ಟ ಹಾಗೂ ಮೇಕಿಂಗ್ ನೋಡಿ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗ್ರಾಫಿಕ್ಸ್ ಬಗ್ಗೆಯೂ ಸಿಕ್ಕಾಪಟ್ಟೆ ಕೊಂಡಾಡುತ್ತಿದ್ದಾರೆ. ಅಮ್ಮ - ಮಗಳ ಪ್ರೀತಿಯ ಜೊತೆಗೆ, ಹಾರರ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ನಾ ನಿನ್ನ ಬಿಡಲಾರೆ ಸೀರಿಯಲ್ ಇದೀಗ ನಂಬರ್ 1 ಸ್ಥಾನಕ್ಕೇರಿದೆ. 10ನೇ ವಾರದ ಟಿಆರ್‌ಪಿಯಲ್ಲಿ ಬರೋಬ್ಬರಿ 8.2 ಟಿವಿಆರ್ ದಾಖಲಿಸುವ ಮೂಲಕ ನಾ ನಿನ್ನ ಬಿಡಲಾರೆ ಧಾರಾವಾಹಿ ಟಾಪ್ ಸ್ಥಾನ ಪಡೆದಿದೆ.
Ugramm Manju: ಗೌತಮಿ ಜೊತೆ ಸೇರಿ ಬದಲಾದ ಉಗ್ರಂ ಮಂಜು: ತನ್ನಿಷ್ಟವನ್ನ ತ್ಯಜಿಸಿದ ನಟ
ಅಣ್ಣಯ್ಯ ಸೀರಿಯಲ್ ಕೂಡ 10ನೇ ವಾರಕ್ಕೆ 8.2 ಟಿಆರ್‌ಪಿ ಪಡೆದುಕೊಂಡಿದೆ. ಆದರೆ, ಇದು ಎರಡನೇ ಸ್ಥಾನದಲ್ಲಿದೆ. ನಗರ ಪ್ರದೇಶದ ಟಿವಿಆರ್‌ನಲ್ಲಿ ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್‌ಗಿಂತಲೂ ಹಿಂದಿದೆ. ಹಾಗೆಯೆ ಝೀ ಕನ್ನಡದ ಮತ್ತೊಂದು ಧಾರಾವಾಹಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್, ಹತ್ತನೇ ವಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸೀರಿಯಲ್‌ಗೆ 7.6 ಟಿವಿಆರ್ ಸಿಕ್ಕಿದೆ.
ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಲಕ್ಷ್ಮೀ ನಿವಾಸ ಧಾರಾವಾಹಿ 7.4 ಟಿವಿಆರ್ ಗಳಿಸಿದೆ. ಇನ್ನೂ 7.3 ಟಿವಿಆರ್ ಪಡೆಯುವ ಮೂಲಕ ಅಮೃತಧಾರೆ ಸೀರಿಯಲ್ ಐದನೇ ಸ್ಥಾನದಲ್ಲಿದೆ. ಬ್ರಹ್ಮಗಂಟು ಧಾರಾವಾಹಿ 6.6 ಟಿವಿಆರ್‌ನೊಂದಿಗೆ 6ನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ 5.1 ಮತ್ತು ಭಾಗ್ಯಲಕ್ಷ್ಮೀ 5.0 ಟಿವಿಆರ್ ಪಡೆದುಕೊಮಡಿದೆ. ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್, ಹೊಸ ಸೀರಿಯಲ್‌ಗಳ ನಡುವೆ ಹೆಚ್ಚು ಸದ್ದು ಮಾಡುತ್ತಿಲ್ಲ. 10ನೇ ವಾರ ಈ ಧಾರಾವಾಹಿ 4.6 ಟಿಆರ್‌ಪಿ ಪಡೆದುಕೊಂಡಿದೆ.