Kwatle Kitchen: ಕಲರ್ಸ್ ಕನ್ನಡದಲ್ಲಿ ಶುರುವಾಗುತ್ತಿದೆ ಹೊಸ ಶೋ ಕ್ವಾಟ್ಲೆ ಕಿಚನ್: ನಗಿಸಲು ತಯಾರಾದ ಅನುಪಮ-ಕುರಿ ಪ್ರತಾಪ್
ಈ ಹೊಸ ಶೋಗೆ ಕ್ವಾಟ್ಲೆ ಕಿಚನ್ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ತಮಾಷೆಯ ಕುಕ್ಕಿಂಗ್ ಶೋ ಆಗಿದೆ. ಮಜಾ ಟಾಕೀಸ್ನಲ್ಲಿರುವ ಕುರಿ ಪ್ರತಾಪ್ ಹಾಗೂ ಬಾಯ್ಸ್ vs ಗರ್ಲ್ಸ್ನ ನಿರೂಪಕಿ ಅನುಪಮ ಗೌಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ದಿಲ್ಲದೇ ಹೊಸ ಪ್ರೋಮೋ ಕೂಡ ರಿಲೀಸ್ ಮಾಡಿದೆ ವಾಹಿನಿ.

Kwatle Kitchen

ಕಲರ್ಸ್ ಕನ್ನಡ ವಾಹಿನಿ ಒಂದಲ್ಲ ಒಂದು ಮನರಂಜನೆ ಮೂಲಕ ವೀಕ್ಷಕರನ್ನು ರಂಚಿಸುತ್ತಲೇ ಇದೆ. ಈಗಾಗಲೇ ವೀಕೆಂಡ್ನಲ್ಲಿ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಶೋ ಭರ್ಜರಿ ಆಗಿ ಸಾಗುತ್ತಿದೆ. ಇದರ ಮಧ್ಯೆ ಇತ್ತೀಚೆಗಷ್ಟೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಕೂಡ ಪ್ರಸಾರಗೊಂಡು ಅಂತ್ಯವಾಯಿತು. ಇದು ಬಿಗ್ ಬಾಸ್ ಸೀಸನ್ 11 ಮುಕ್ತಾಯದ ಬಳಿಕ ಶುರುವಾಗಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಅಭಿಪ್ರಾಯ ವ್ಯಕ್ತವಾಗದ ಹಿನ್ನಲೆಯಲ್ಲಿ ಬೇಗನೆ ಶೋ ಅನ್ನು ಮುಗಿಸಲಾಯಿತು. ಇದೀಗ ಕಲರ್ಸ್ ಮತ್ತೊಂದು ಹೊಸ ಶೋ ಶುರುವಾಗುತ್ತಿದೆ.
ಈ ಹೊಸ ಶೋಗೆ ಕ್ವಾಟ್ಲೆ ಕಿಚನ್ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಇದೊಂದು ತಮಾಷೆಯ ಕುಕ್ಕಿಂಗ್ ಶೋ ಆಗಿದೆ. ಮಜಾ ಟಾಕೀಸ್ನಲ್ಲಿರುವ ಕುರಿ ಪ್ರತಾಪ್ ಹಾಗೂ ಬಾಯ್ಸ್ vs ಗರ್ಲ್ಸ್ನ ನಿರೂಪಕಿ ಅನುಪಮ ಗೌಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ದಿಲ್ಲದೇ ಹೊಸ ಪ್ರೋಮೋ ಕೂಡ ರಿಲೀಸ್ ಮಾಡಿದೆ ವಾಹಿನಿ. ವಾರಂತ್ಯದಲ್ಲಿ ಮಜಾ ಟಾಕೀಸ್ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಈ ಶೋ ಕೂಡ ಬರಲಿದೆ.
ಈ ಒಂದು ಶೋವನ್ನ ಇಬ್ಬರು ನಿರೂಪಿಸುತ್ತಿರುವುದು ವಿಶೇಷ. ಒಂದು ಕಡೆಗೆ ಅನುಪಮಾ ಗೌಡ ಇದ್ದಾರೆ. ಮತ್ತೊಂದು ಕಡೆಗೆ ಕುರಿ ಪ್ರತಾಪ್ ಇದ್ದಾರೆ. ಒಟ್ಟಿಗೆ ಇಬ್ಬರೂ ಈ ಒಂದು ಕ್ವಾಟ್ಲೆ ಕಿಚನ್ ಶೋ ನಡೆಸಿಕೊಡುತ್ತಾರೆ. ಇವರ ಈ ಒಂದು ಶೋದಲ್ಲಿ ಏನೆಲ್ಲ ಇರುತ್ತದೆ ಅನ್ನೋದರ ಝಲಕ್ ಪ್ರೋಮೋದಲ್ಲಿ ರಿವೀಲ್ ಆಗಿದೆ.
ಇನ್ಮೇಲೆ ಫುಲ್ಲು ಕ್ವಾಟ್ಲೆ, ಫನ್‌ಟೈಮ್ ಸ್ಟಾರ್ಟ್ ಆಯ್ತಲೇ! ಕ್ವಾಟ್ಲೆ ಕಿಚನ್ ಎಂಬ ಅಡಿಬರಹದ ಜೊತೆ ಶೋ ಪ್ರೊಮೋ ರಿಲೀಸ್ ಆಗಿದೆ. ಕಲರ್ಸ್ ವಾಹಿನಿಯ ಹಿಂದಿ ಭಾಷೆಯಲ್ಲಿ ಫೇಮಸ್ ಆಗಿರೋ Laughter Chefs ನ ಕನ್ನಡಕ್ಕೆ ತರಲಾಗಿದ್ದು, ಅಲ್ಲಿ ಹಾಸ್ಯ ಕಲಾವಿದೆ ಭಾರತಿ ಶೋ ನಡೆಸಿ ಕೊಡುತ್ತಿದ್ದಾರೆ. ಈ ಒಂದು ಶೋದಲ್ಲಿ ಅಡುಗೆ ಮಾಡೋದಷ್ಟೆ ಅಲ್ಲ, ಫನ್ ಕಂಟೆಂಟ್ ಕೂಡ ಇರುತ್ತದೆ ಅನ್ನೋದನ್ನ ಈ ಒಂದು ಪ್ರೋಮೋ ಈಗಲೇ ಹೇಳುತ್ತಿದೆ.
ಇದೊಂದು ಪಕ್ಕಾ ಫನ್ ಶೋ. ಜೊತೆಗೆ ರುಚಿ.. ರುಚಿ ಅಡುಗೆಯ ಗಮ್ಮತ್ತು. ಇದೇ ಕ್ವಾಟ್ಲೆ ಕಿಚನ್ ರೂಪದಲ್ಲಿ ನೋಡುಗರಿಗೆ ಭರ್ಜರಿ ಭೋಜನದ ಮನರಂಜನೆಯ ರಸದೌತಣ ನೀಡಲಿದೆ. ಕ್ವಾಟ್ಲೆ ಕಿಚನ್ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಟೈಮ್, ಡೇಟ್ ಫಿಕ್ಸ್ ಆಗಿಲ್ಲ. ಸದ್ಯ ಕಲರ್ಸ್ನಲ್ಲಿ ವೀಕೆಂಡ್ ಕೂಡ ಕೆಲ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದರಲ್ಲಿ ಒಂದು ಧಾರಾವಾಹಿಯನ್ನು ಕಟ್ ಮಾಡಿ ಇಲ್ಲಿ ಕ್ವಾಟ್ಲೆ ಕಿಚನ್ ಪ್ರಸಾರ ಕಾಣಬಹುದು.
Actor Sridhara: ಮ್ಯಾಕ್ಸ್ ಚಿತ್ರದಲ್ಲಿ ನಟಿಸಿದ್ದ ನಟ ಶ್ರೀಧರ ಇನ್ನಿಲ್ಲ