Rajath Kishan: ಎಫ್ಐಆರ್ ಆದ್ರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಇನ್ನೂ ಡಿಲೀಟ್ ಮಾಡದ ರಜತ್
ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ 11ರ ಸ್ಪರ್ಧಿ ರಜತ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ. ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತ ರಸ್ತೆಯಲ್ಲಿ ಓಡಾಡಿದ್ದು ಪೊಲೀಸ್ ತನಕ ತಲುಪಿದೆ.

Rajath Kishan

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ರಜತ್ ಕಿಶನ್ (Rajath Kishan) ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಆ್ಯಕ್ಟಿವ್ ಆಗಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೆ ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದೇ ರೀಲ್ಸ್ ಇವರಿಬ್ಬರನ್ನು ಸಂಕಷ್ಟಕ್ಕೆ ದೂಡಿದೆ. ಇವರ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ.
ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ರಜತ್-ವಿನಯ್ ಸ್ಲೋ ಮೋಷನ್ ವಾಕ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಇದಕ್ಕೆ ನಾನಾ ಬಗೆಯ ಕಮೆಂಟ್ಸ್ ಕೂಡ ಬಂದಿದ್ದವು. ರಜತ್, ಬಿಳ್ಳಿ ಬಣ್ಣದ ಶರ್ಟ್‌ನ ಮೇಲೆ ಡಿ ಬಾಸ್ ಎಂದು ದೊಡ್ಡದಾಗಿ ಬರೆದುಕೊಂಡಿದ್ದರು. ಹಾಕಿರುವ ಪ್ಯಾಂಟ್ ಮೇಲೂ ದರ್ಶನ್ ಹೆಸರು ಜೊತೆಗೆ ಅವರ ಸಿನಿಮಾದ ಹೆಸರನ್ನು ಬರೆಯಲಾಗಿದೆ. ಪ್ಯಾಂಟ್ ಮೇಲೆ ಮೆಜೆಸ್ಟಿಕ್, ಅಣ್ಣಾವ್ರು, ಲಂಕೇಶ್ ಪತ್ರಿಕೆ, ಪೊರ್ಕಿ, ನನ್ನ ಪ್ರೀತಿಯ ರಾಮು, ಕರಿಯ, ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಶಾಸ್ತ್ರಿ, ಅರ್ಜುನ್, ಗಜ, ಲಾಲಿಹಾಡು ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಬರೆಸಿಕೊಂಡಿದ್ದಾರೆ.
ಆದರೀಗ ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ 11ರ ಸ್ಪರ್ಧಿ ರಜತ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ. ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತ ರಸ್ತೆಯಲ್ಲಿ ಓಡಾಡಿದ್ದು ಪೊಲೀಸ್ ತನಕ ತಲುಪಿದೆ. ಇಬ್ಬರೂ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಆ ರೀಲ್ಸ್ ಅನ್ನು ರಜತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಹೀಗೆ ಲಾಂಗ್ ಹಿಡಿದು ವಿಡಿಯೋ ಮಾಡುವುದು, ರೀಲ್ಸ್ ಮಾಡುವುದು ಕಾನೂನು ಬಾಹಿರ ಆಗಿದೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವಾರಣ ಸೃಷ್ಟಿಯಾಗಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಬಸವೇಶ್ವರ ನಗರ ಪೊಲೀಸರು ದೂರನ್ನು ದಾಖಲು ಮಾಡಿದ್ದಾರೆ.
ರಜತ್ ಹಾಗೂ ವಿನಯ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಇಬ್ಬರಿಗೂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಪೊಲೀಸರು ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಶೂಟಿಂಗ್ನಲ್ಲಿ ಹೊರಗಡೆ ಇರೋ ಕಾರಣ ರಜತ್ ಅವರು ಸಮಯವಕಾಶ ಕೇಳಿದ್ದಾರೆ. ಅಲ್ಲದೇ ಇಂದು ವಿಚಾರಣೆಗೆ ಹಾಜರಾಗೋದಾಗಿ ವಿನಯ್ ಗೌಡ ತಿಳಿಸಿದ್ದಾರೆ. ಆದರೆ ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ ಲಾಂಗ್ ಹಿಡಿದು ವಿಡಿಯೋ ಮಾಡಿದ್ದರಿಂದ ಪೊಲೀಸರು ಎಫ್ಐಆರ್ ದಾಖಲಿಸಿದ್ರೂ ರಜತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಇನ್ನೂ ಡಿಲೀಟ್ ಮಾಡಿಲ್ಲ. ಪ್ರೈವೆಟ್ ಅಥವಾ ಡಿಲೀಟ್ ಮಾಡದೆ ಹಾಕಿ ಉಳಿಸಿಕೊಂಡಿದ್ದಾರೆ.
Bhagya Lakshmi Serial: ಊಟದ ಆರ್ಡರ್ ಬರುತ್ತೆಂದು ಫೋನ್ ಮುಂದೆ ಕಾದು ಕುಳಿತ ಭಾಗ್ಯ