ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Shetty: ರಾಕೇಶ್‌ ಪೂಜಾರಿ ಅಂತಿಮ ದರ್ಶನಕ್ಕೆ ರಿಷಭ್ ಶೆಟ್ಟಿ ಬರದಿರಲು ಕಾರಣ ಬಹಿರಂಗ: ಇಲ್ಲಿದೆ ನೋಡಿ

ನಟ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಅನೇಕ ಕಲಾವಿದರು ಬಂದಿದ್ದರು. ಆದರೆ, ಈ ವೇಳೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಲ್ಲೇ ಹತ್ತಿರದಲ್ಲಿದ್ದರೂ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅಲ್ಲದೆ ರಾಕೇಶ್ ಕಾಂತಾರ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಈ ಕಾರಣಕ್ಕೆ ರಿಷಭ್ ವಿರುದ್ಧ ಗಂಭೀರ ಆರೋಪ ಹಾಗೂ ಆಕ್ರೋಶ ವ್ಯಕ್ತವಾಗಿತ್ತು.

ರಾಕೇಶ್‌ ಅಂತಿಮ ದರ್ಶನಕ್ಕೆ ರಿಷಭ್ ಶೆಟ್ಟಿ ಬರದಿರಲು ಕಾರಣ ಬಹಿರಂಗ

Rakesh poojary and Rishab Shetty

Profile Vinay Bhat May 16, 2025 2:40 PM

ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ದಿಢೀರ್ ಸಾವು ಅವರ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಮೇ 12 ರ ಬೆಳಗ್ಗಿನ ಜಾವ ಸುಮಾರು 1.30ಕ್ಕೆ ಬಿಪಿ ಲೋ ಆಗಿ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ರಾಕೇಶ್​ನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವಿದೆ.

ನಟ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಅನೇಕ ಕಲಾವಿದರು ಬಂದಿದ್ದರು. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವರು ಗೆಳೆಯನ ಅಂತಿಮ ದರ್ಶನ ಪಡೆದುಕೊಂಡರು. ಆದರೆ, ಈ ವೇಳೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅಲ್ಲೇ ಹತ್ತಿರದಲ್ಲಿದ್ದರೂ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಅಲ್ಲದೆ ರಾಕೇಶ್ ಕಾಂತಾರ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ಈ ಕಾರಣಕ್ಕೆ ರಿಷಭ್ ವಿರುದ್ಧ ಗಂಭೀರ ಆರೋಪ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ರಿಷಭ್ ಅವರು ಹತ್ತಿರದಲ್ಲೇ ಇದ್ದರೂ ರಾಕೇಶ್‌ ನನ್ನ ನೋಡಲು ಬರಲಿಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಯಾವ ಕಾರಣಕ್ಕೆ ರಿಷಬ್‌ ಅವರು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ಬಗ್ಗೆ ರಾಕೇಶ್ ಆಪ್ತ ಸೂರಜ್ ಮಾತನಾಡಿದ್ದು, ‘ಅವರ ಪಾಯಿಂಟ್ ಆಫ್ ವೀವ್ ಏನಿದೆ ಗೊತ್ತಿಲ್ಲ. ಹೊರಗಿನಿಂದ ಕಲಾವಿದರನ್ನು ಕರೆಸಿದಾಗ ಆ ದಿನದ ಶೂಟ್ ಮಾಡಲೇಬೇಕಿರುತ್ತದೆ. ಇವತ್ತು ಅಥವಾ ನಾಳೆ ಅವರು ಬಂದೇ ಬರುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ’ ಎಂದು ಹೇಳಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮದುವೆಗೆ ಸಿಕ್ತು ಗ್ರೀನ್ ಸಿಗ್ನಲ್: ಎಲ್ಲರ ಕಣ್ಣು ತಾಂಡವ್ ಮೇಲೆ

‘ರಾಕೇಶ್‌ ಅಂತಿಮ ದರ್ಶನಕ್ಕೆ ರಿಷಬ್‌ ಶೆಟ್ಟಿ ಅವರು ಬರಲಿಲ್ಲ ಅನ್ನೋದು ನಿಜ. ಆದರೆ ರಿಷಬ್‌ ಅವರ ಉದ್ದೇಶ ಏನು ಎಂದು ನಮಗೂ ಗೊತ್ತಿಲ್ಲ. ಈಗ ಸಿನಿಮಾ ಶೂಟಿಂಗ್‌ ಎಂದ ಮೇಲೆ ಅವರಿಗೂ ಜವಾಬ್ದಾರಿ ಇರುತ್ತೆ. ಯಾರೋ ಮುಖ್ಯ ಪಾತ್ರದ ಕಲಾವಿದರನ್ನು ಹೊರಗಿನಿಂದ ಕರೆಸಿರಬಹುದು. ಸಿನಿಮಾದ ಜವಾಬ್ದಾರಿಯಿಂದಲೂ ಈ ರೀತಿ ಆಗಿರಬಹುದು. ಆದರೆ ನಮಗಂತೂ ಬಹಳ ನಂಬಿಕೆ ಇದೆ. ರಿಷಭ್ ಅವರು ಬಂದೇ ಬರ್ತಾರೆ, ಇನ್ನೊಂದು ಎರಡು ಮೂರು ದಿನಗಳಲ್ಲಿ ಖಂಡಿತವಾಗಿಯೂ ಬರ್ತಾರೆ. ಒಂದು ವೇಳೆ ಆ ಮೂಮೆಂಟ್‌ನಲ್ಲಿ ಬೇಡ ಎಂದಿರಬಹುದು. ಮೀಡಿಯಾ ಕೂಡ ಇದ್ದಿದ್ದರಿಂದ ಮೊದಲೇ ಅವರು ಹಳೆಯ ಇಶ್ಯೂಗಳು, ವಿಷಯಗಳಿಂದಲೂ ಅಲ್ಲಿಗೆ ಬರದೇ ಇರಬಹುದು, ಅವರು ಬಂದಾಗ ಆ ವಿಷಯಗಳನ್ನೆಲ್ಲ ಮಾಧ್ಯಮದವವ್ರು ಮತ್ತೆ ಚರ್ಚೆ ಮಾಡ್ತಾರೆ ಎಂತಲೂ ಇರಬಹುದು’ ಎಂದು ಹೇಳಿದ್ದಾರೆ.