ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seetha Rama Serial: ಆತ್ಮದಿಂದ ಹೊರಬಂದ ಸಿಹಿ: ಸೀತಾ ರಾಮ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್

ನಾಟಕ ನಡೆದರೆ ತನ್ನ ಎಲ್ಲ ರಹಸ್ಯ ಗೊತ್ತಾಗುತ್ತದೆ ಎಂದು ಅರಿತ ಭಾರ್ಗವಿ, ಸುಬ್ಬಿಯನ್ನು ಕಿಡ್ನ್ಯಾಪ್ ಮಾಡುತ್ತಾಳೆ. ಅವಳು ಇರುವಲ್ಲಿ ಸಿಹಿಗೆ ತಲುಪಲು ಆಗುವುದಿಲ್ಲ. ನಾಟಕ ಶುರುವಾಗುತ್ತದೆ. ನಕಲಿ ಸಿಹಿ ಸುಲಭದಲ್ಲಿ ಬರುವುದಿಲ್ಲ ಎಂದು ಖುಷಿಯಲ್ಲಿ ಇರುತ್ತಾಳೆ ಭಾರ್ಗವಿ. ಆದರೆ ಆದದ್ದೇ ಬೇರೆ.

ಆತ್ಮದಿಂದ ಹೊರಬಂದ ಸಿಹಿ: ಸೀತಾ ರಾಮ ಧಾರಾವಾಹಿಯಲ್ಲಿ ಟ್ವಿಸ್ಟ್

Seetha rama Serial

Profile Vinay Bhat May 3, 2025 7:24 AM

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ (Seetha Rama serial) ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಮೊನ್ನೆಯಷ್ಟೆ ಧಾರಾವಾಹಿಯಲ್ಲಿ ದೊಡ್ಡ ತಿರುವು ಎಂಬಂತೆ ಅಶೋಕನಿಗೆ ಸಿಹಿಯ ಆತ್ಮ ಇರುವುದು ಗೊತ್ತಾಗಿತ್ತು. ಸುಬ್ಬಿ-ಸಿಹಿ ಹಾಗೂ ಅಶೋಕ್ ಪ್ಲ್ಯಾನ್ ಮಾಡಿ ಭಾರ್ಗವಿಯ ಮುಖವಾಡ ಕಳಚಲು ಹಾಗೂ ನಿಜಾಂಶವನ್ನು ರಾಮನಿಗೆ ತಿಳಿಸಲು ಪ್ಲ್ಯಾನ್ ಮಾಡಿದ್ದಾರೆ.

ರಹಸ್ಯ ರಿವೀಲ್ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಅಶೋಕ, ರಾಮ್‌ನ ಮನೆಯಲ್ಲಿ ಮಕ್ಕಳೊಟ್ಟಿಗೆ ಸೇರಿ ಡ್ರಾಮಾ ಮಾಡಿಸುತ್ತಾನೆ. ಅಷ್ಟಕ್ಕೂ ಅಶೋಕ ಸೃಷ್ಟಿಸುತ್ತಿರುವ ನಾಟಕ ಭಾರ್ಗವಿಯದ್ದೆ. ಆಕೆ ಮಾಡಿದ ಕರ್ಮಗಳನ್ನು ಆಕೆ ಮುಂದೆಯೇ ಮಕ್ಕಳ ಮೂಲಕ ತೆರೆದಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಸೀತಾ ರಾಮರ ಪ್ರೀತಿ, ಸೀತಾ ರಾಮ ಕಲ್ಯಾಣದಿಂದ ಆರಂಭವಾಗಿ, ಕೊನೆಗೆ ಅದು ಸಿಹಿಯ ಕೊಲೆಯ ಮೂಲಕ ಅಂತ್ಯವಾಗುವ ಕಥೆ ಸ್ಕ್ರಿಪ್ಟ್‌ ಬರೆದಿದ್ದಾನೆ ಅಶೋಕ.

ಆದರೆ, ಈ ನಾಟಕದ ಕಥೆ ನನ್ನ ವಿಚಾರವಾಗಿಯೇ ಎಂಬುದು ಭಾರ್ಗವಿಗೆ ಗೊತ್ತಾಗಿದೆ. ಅಶೋಕ ಮಾಡ್ತಿರುವ ಡ್ರಾಮಾವನ್ನು ನಿಲ್ಲಿಸುವುದು ಹೇಗೆ ಎಂದು ಭಾರ್ಗವಿ ಪ್ಲ್ಯಾನ್ ಮಾಡುತ್ತಿರುವಾಗ ಅಲ್ಲಿಗೆ ಬಂದ ಅಶೋಕ, ಏನೋ ನಾಟಕ ನಿಲ್ಸಿಸ್ತಿನಿ ಅಂತಿದ್ರಿ ಎಂದು ಕೇಳಿದ್ದೇನೆ. ನಾಟಕ ಮಾತ್ರವಲ್ಲ ನಿನ್ನ ನಾಟಕವನ್ನೂ ನಿಲ್ಲಿಸ್ತಿನಿ ಎಂದಿದ್ದಾಳೆ ಭಾರ್ಗವಿ.

ನಾಟಕ ನಡೆದರೆ ತನ್ನ ಎಲ್ಲ ರಹಸ್ಯ ಗೊತ್ತಾಗುತ್ತದೆ ಎಂದು ಅರಿತ ಭಾರ್ಗವಿ, ಸುಬ್ಬಿಯನ್ನು ಕಿಡ್​ನ್ಯಾಪ್​ ಮಾಡುತ್ತಾಳೆ. ಅವಳು ಇರುವಲ್ಲಿ ಸಿಹಿಗೆ ತಲುಪಲು ಆಗುವುದಿಲ್ಲ. ನಾಟಕ ಶುರುವಾಗುತ್ತದೆ. ನಕಲಿ ಸಿಹಿ ಸುಲಭದಲ್ಲಿ ಬರುವುದಿಲ್ಲ ಎಂದು ಖುಷಿಯಲ್ಲಿ ಇರುತ್ತಾಳೆ ಭಾರ್ಗವಿ. ಆದರೆ ಆದದ್ದೇ ಬೇರೆ. ಹೇಗಾದರೂ ಮಾಡಿ ಭಾರ್ಗವಿ ಚಿಕ್ಕಿಯ ರಹಸ್ಯ ಭೇದಿಸಬೇಕು ಎಂದುಕೊಳ್ಳುವ ಸಿಹಿ, ಆಂಜನೇಯನ ಮೊರೆ ಹೋಗುತ್ತಾಳೆ.



ಈ ಹಿಂದೆ ಪ್ರಯಾಗ್​ರಾಜ್​ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಸಿಹಿ ಅಲ್ಲಿಗೂ ಹೋಗಿರುತ್ತಾಳೆ. ಹೇಗಾದರೂ ಮಾಡಿ ನನಗೆ ವಿಶೇಷ ಶಕ್ತಿ ಕೊಡುವಂತೆ ಆಕೆ ನಾಗಾಸಾಧು ಬಳಿ ಕೇಳಿಕೊಂಡಾಗ, ಆಂಜನೇಯರ ಪ್ರಾರ್ಥನೆ ದಿನವೂ ಮಾಡು, ವಿಶೇಷ ಶಕ್ತಿ ಬರುತ್ತದೆ ಎಂದಿರುತ್ತಾರೆ ನಾಗಾಸಾಧು. ಅದರಂತೆ ಸಿಹಿ ಆಂಜನೇಯನ ಬಳಿ ಎಲ್ಲರಿಗೂ ಕಾಣಿಸುವ ಹಾಗೆ ಮಾಡು ಎಂದು ಕೇಳಿಕೊಂಡಿದ್ದಾಳೆ. ಅದರಂತೆ ಸಿಹಿ ಈಗ ಎಲ್ಲರಿಗೂ ಕಾಣಿಸುತ್ತಾಳೆ. ಅವಳು ವೇದಿಕೆ ಮೇಲೆ ಬರ್ತಾಳೆ. ಅವಳನ್ನು ನೋಡುತ್ತಿದ್ದಂತೆಯೇ ಭಾರ್ಗವಿ ಆಘಾತಕ್ಕೆ ಒಳಗಾಗಿದ್ದಾಳೆ. ಸಿಹಿ ಸತ್ತಿದ್ದಾಳೆ.. ಸುಬ್ಬಿ ಕಿಡ್ನಾಪ್ ಆಗಿದ್ದಾಳೆ.. ಇದು ಯಾರು?, ಸುಬ್ಬಿ ಇಲ್ಲಿ ಬರಲು ಹೇಗೆ ಸಾಧ್ಯ ಎಂದು ಟೆನ್ಶನ್ ಆಗಿದ್ದಾಳೆ. ಸದ್ಯ ನಾಟಕ ಯಾವರೀತಿ ಸಾಗುತ್ತದೆ?, ರಾಮ್​ಗೆ ಎಲ್ಲ ಸತ್ಯ ಗೊತ್ತಾಗುತ್ತ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Roopesh Shetty: ನಿಜ ಜೀವನದಲ್ಲಿ ಹೀರೋ ಆದ ರೂಪೇಶ್ ಶೆಟ್ಟಿ: ನುಡಿದಂತೆ ನಡೆದ ಬಿಗ್ ಬಾಸ್ ವಿನ್ನರ್