ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shefali Jariwala: ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಈತನಿಗೆ ಮೊದಲೇ ಗೊತ್ತಿತ್ತಾ? ಪಾಡ್‌ಕಾಸ್ಟ್‌ನಲ್ಲಿ ಈತ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ನಟಿ ಶೆಫಾಲಿ ಅವರ ಸಾವಿನ ಬಗ್ಗೆ ಯೂಟ್ಯೂಬರ್ ಒಬ್ಬರು ಮೊದಲೇ ಸುಳಿವು ನೀಡಿದ್ದರು ಎನ್ನ ಲಾಗುತ್ತಿದೆ. ಹೌದು ಈ ಹಿಂದೆ ಯೂಟ್ಯೂಬರ್ ಒಬ್ಬರು ಅವರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ಸಾವು ಇದೇ ರೀತಿ ಬರುತ್ತದೆ ಎನ್ನುವ ಮುನ್ಸೂಚನೆ ನೀಡಿದ್ದರು ಎಂಬ ಸುದ್ದಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಶೆಫಾಲಿ ನಿಧನ ಬಗ್ಗೆ ಈತ ಈ ಹಿಂದೆ ನುಡಿದಿದ್ದ ಭವಿಷ್ಯವಾಣಿ ನಿಜವಾಯ್ತಾ?

Profile Pushpa Kumari Jun 29, 2025 3:57 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಶೆಫಾಲಿ ಜರಿವಾಲಾ (Shefali Jariwala) ಅವರು ಸಿನಿಮಾ ಅಲ್ಲದೆ ಐಟಂ ಸಾಂಗ್ , ಆಲ್ಬಂ ಸಾಂಗ್ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು. ಇವರ ಹಠಾತ್ ನಿಧನವು ಇಡೀ ಭಾರತೀಯ ಚಲನಚಿತ್ರ ರಂಗಕ್ಕೆ ದೊಡ್ಡ ಆಘಾತ ವನ್ನು ನೀಡಿದೆ. ಕೇವಲ 42 ವಯಸ್ಸಿಗೆ ಹಠಾತ್ ಹೃದಯಾಘಾತದಿಂದ‌ ನಿಧನವಾಗಿದ್ದು ಬಾಲಿವುಡ್ ತಾರಾಗಣವು ಕಂಬನಿ ಮಿಡಿದಿದೆ. ಇದೀಗ ಇವರ ಸಾವಿನ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದೆ. ನಟಿ ಶೆಫಾಲಿ ಅವರ ಸಾವಿನ ಬಗ್ಗೆ ಯೂಟ್ಯೂಬರ್ ಒಬ್ಬರು ಮೊದಲೇ ಸುಳಿವು ನೀಡಿದ್ದರು ಎನ್ನಲಾಗುತ್ತಿದೆ. ಹೌದು ಈ ಹಿಂದೆ ಯೂಟ್ಯೂಬರ್ ಒಬ್ಬರು ಅವರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ಸಾವು ಇದೇ ರೀತಿ ಬರುತ್ತದೆ ಎನ್ನುವ ಮುನ್ಸೂಚನೆ ನೀಡಿದ್ದರು ಎಂಬ ಸುದ್ದಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ:Su From So Movie: ಬಾಯ್ಸ್‌ ಪಾರ್ಟಿಗೆ ಹೇಳ್‌ ಮಾಡ್ಸಿದ ಹಾಡಿದು! ಸೂಪರ್‌ ಡೂಪರ್‌ ಸಾಂಗ್‌ ರಿಲೀಸ್‌ ಮಾಡಿದ ರಾಜ್ ಬಿ ಶೆಟ್ಟಿ

ನಟಿ ಶೆಫಾಲಿ ಅವರು ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಮೂಲಕವು ಪ್ರಸಿದ್ಧಿ ಪಡೆ ದಿದ್ದಾರೆ. ಬಾಲಿವುಡ್ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಇವರು ತಮ್ಮ ಜೊತೆಗೆ ಸ್ಪರ್ಧಿಸಿದ್ದ ಪಾರಸ್ ಛಾಬ್ರಾ ಅವರೊಂದಿಗೆ ಪಾಡ್ ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶೆಫಾಲಿ ಅವರ ಜಾತಕ ನೋಡಿ ಇವರಿಗೆ ಹಠಾತ್ ಸಾವು ಬರುತ್ತದೆ ಎಂಬ ಸೂಚನೆಯನ್ನು ಕೂಡ ನೀಡಿದ್ದರಂತೆ.

ಪಾಡ್‌ಕಾಸ್ಟ್‌ನಲ್ಲಿ ಯೂಟ್ಯೂಬರ್ ಪರಾಸ್ ಛಬ್ರಾ ಅವರು ನಟಿ ಶೆಫಾಲಿ ಅವರ ಜಾತಕದ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದರು. ಆ ಪ್ರಕಾರ ಶೆಫಾಲಿ ಅವರ ಜನ್ಮ ಕುಂಡಲಿಯ 8ನೇ ಮನೆಯಲ್ಲಿ ಚಂದ್ರ, ಬುಧ, ಕೇತು ಇದೆ. ಚಂದ್ರ ಮತ್ತು ಕೇತು ಜೊತೆಯಾಗಿ ಇರುವುದು ಒಳ್ಳೆ ಸೂಚನೆ ಅಲ್ಲ ಅದು ಸಂಕಷ್ಟವನ್ನು ಸೂಚಿಸುತ್ತದೆ. 8ನೇ ಮನೆಯಲ್ಲಿ ಚಂದ್ರ ಮತ್ತು ಕೇತು ಇದೆ ಎಂದರೆ ಸಾಕಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಕಿರಿಕಿರಿ, ಹಠಾತ್‌ ಸಾವು ಹೀಗೆ ಅನೇಕ ಸಮಸ್ಯೆ ಕಾಡುವ ಸಾಧ್ಯತೆ ಇದೆ ಇವರು ಭವಿಷ್ಯ ನುಡಿದಿದ್ದರಂತೆ. ಇದು ಜೀವನದಲ್ಲಿ ಸಾಕಷ್ಟು ತೊಂದರೆ ಎದುರಿಸುವಂತೆ ಮಾಡಲಿದೆ ಎಂದು ಕೂಡ ಹೇಳಿದ್ದರು.

ಬುಧ ಕೂಡ 8ನೇ ಮನೆಯಲ್ಲಿದ್ದ ಕಾರಣ ಕೆಲವು ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಇದು ಒತ್ತಡ, ಆತಂಕ, ನರ ಸಂಬಂಧಿತ ಸಮಸ್ಯೆಗಳನ್ನು ಸೂಚಿಸಲಿದೆ ಎಂದು ಹೇಳಿದ್ದಾರೆ. ಪರಾಸ್ ಅವರ ಭವಿಷ್ಯವಾಣಿಯು ಶೆಫಾಲಿ ಅವರ ಆರೋಗ್ಯದ ಬಗ್ಗೆ ಮೊದಲೇ ಸೂಚನೆ ನೀಡಿದಂತಿತ್ತು ಎಂಬ ವಿಚಾರ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಯಾಗುತ್ತಿದೆ. ಇದೇ ಪೋಡ್ ಕಾಸ್ಟ್ ಕಾರ್ಯಕ್ರಮದಲ್ಲಿ ನಟಿ ಶೆಫಾಲಿ ಅವರು ತಾವು ಈ ಹಿಂದೆ ಮೂರ್ಛೆ ರೋಗದಿಂದ ಬಳಲುತ್ತಿರುವ ಬಗ್ಗೆ ಕೂಡ ಹೇಳಿಕೊಂಡಿದ್ದರು. ನಟಿ ಶೆಫಾಲಿ ನಿಧನಕ್ಕೆ ಪರಾಸ್ ಕೂಡ ಸೋಶಿಯಲ್ ಮಿಡಿ ಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಯಾರ ಜೀವ ಹೇಗೆಂದು ಯಾರಿಗೂ ತಿಳಿದಿಲ್ಲ, ಓಂ ಶಾಂತಿ, ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.